ಬಾಕಿ ಹಣ ಪಾವತಿ ಮಾಡಿಲ್ಲವೆಂದು ಕೊರೊನಾ ಸೋಂಕಿತನ ಶವ ಇಟ್ಟುಕೊಂಡು ಸತಾಯಿಸಿದ್ದ ಆಸ್ಪತ್ರೆ; ಸಚಿವರ ಮಧ್ಯಪ್ರವೇಶ
ಆರೋಗ್ಯ ಸಚಿವ ಸುಧಾಕರ್ ಮಧ್ಯಪ್ರವೇಶದಿಂದ ಇದೀಗ ಆಸ್ಪತ್ರೆ, ಭೀಮರಾವ್ ಶವವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಿದೆ. ಉಳಿದ 10 ಲಕ್ಷ ರೂ.ಮನ್ನಾ ಮಾಡಿದೆ.
ಬೆಂಗಳೂರು: ಬಾಕಿ ಹಣ ಕಟ್ಟಲಿಲ್ಲ ಎಂಬ ಕಾರಣಕ್ಕೆ ಶವವನ್ನು ಕುಟುಂಬಕ್ಕೆ ಕೊಡದೆ ಹಾಗೇ ಇಟ್ಟುಕೊಂಡಿದ್ದ ಮಣಿಪಾಲ ಆಸ್ಪತ್ರೆ ಅಂತೂ ಇಂತೂ ಮೃತದೇಹವನ್ನು ಈಗ ಕೊಟ್ಟಿದೆ.
ಮಣಿಪಾಲ ಆಸ್ಪತ್ರೆಯಲ್ಲಿ ರಾಜಸ್ಥಾನ ಮೂಲದ ಭೀಮರಾವ್ ಪಾಟೀಲ್ (62) ಎಂಬುವರು ಕೊರೊನಾದಿಂದ ಮೃತಪಟ್ಟಿದ್ದರು. ಇವರು ನವೆಂಬರ್ 15ರಂದು ದಾಖಲಾಗಿ, ಡಿ.23ರಂದು ಅಂದರೆ 39ದಿನಗಳ ಕಾಲ ಚಿಕಿತ್ಸೆ ಪಡೆದರೂ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಮೃತರ ಪುತ್ರ ಆಸ್ಪತ್ರೆಗೆ 10 ಲಕ್ಷ ರೂಪಾಯಿ ಪಾವತಿ ಮಾಡಿದ್ದರು. ಆದರೆ ಇನ್ನೂ 10 ಲಕ್ಷ ರೂ.ಕೊಡುವುದು ಬಾಕಿ ಇದೆ ಎಂದು ಹೇಳಿದ ಆಸ್ಪತ್ರೆ ಮೃತದೇಹವನ್ನು ಆಸ್ಪತ್ರೆ ಹಾಗೇ ಇಟ್ಟುಕೊಂಡಿತ್ತು.
ನಂತರ ಆರೋಗ್ಯ ಸಚಿವ ಸುಧಾಕರ್ ಮಧ್ಯಪ್ರವೇಶದಿಂದ ಇದೀಗ ಆಸ್ಪತ್ರೆ, ಭೀಮರಾವ್ ಶವವನ್ನು ಕುಟುಂಬಕ್ಕೆ ಹಸ್ತಾಂತರ ಮಾಡಿದೆ. ಉಳಿದ 10 ಲಕ್ಷ ರೂ.ಮನ್ನಾ ಮಾಡಿದೆ.
ನಂಬಿದ ಸ್ನೇಹಿತನಿಂದಲೇ ನಡೆಯಿತಾ ಮೋಸ? ಆತ್ಮಹತ್ಯೆಗೂ ಮುನ್ನ ಬರೆದಿದ್ದ ಡೆತ್ನೋಟ್ನಲ್ಲಿತ್ತು ನೊಂದವನ ಕರುಣಾಜನಕ ಕತೆ