ಆ್ಯಸಿಡ್ ನಾಗನ ಪತ್ತೆಗೆ ಸಹಕರಿಸಿದ್ದ ಭಿತ್ತಿ ಚಿತ್ರ: ಹೇಗಿತ್ತು ನಾಗನ ಎಸ್ಕೇಪ್ ಪ್ಲಾನ್?

| Updated By: Rakesh Nayak Manchi

Updated on: May 14, 2022 | 4:17 PM

ಯುವತಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದ ನಾಗೇಶ್​ನನ್ನು ಬಂಧಿಸಲು ಪೊಲೀಸರಿಗೆ ಸಹಕರಿಸಿದ್ದೇ ಭಿತ್ತಿ ಚಿತ್ರ. ಈತ ಎಸ್ಕೇಪ್ ಆಗಲು ಹಾಗೂ ತನ್ನ ಸುಳಿವು ಸಿಗದಂತೆ ನೋಡಿಕೊಳ್ಳಲು ಎಲ್ಲಾ ಪ್ಲಾನ್​ಗಳನ್ನು ನಡೆಸಿ ತಮಿಳುನಾಡಿಗೆ ಎಸ್ಕೇಪ್ ಆಗಿದ್ದ.

ಆ್ಯಸಿಡ್ ನಾಗನ ಪತ್ತೆಗೆ ಸಹಕರಿಸಿದ್ದ ಭಿತ್ತಿ ಚಿತ್ರ: ಹೇಗಿತ್ತು ನಾಗನ ಎಸ್ಕೇಪ್ ಪ್ಲಾನ್?
ಆರೋಪಿ ನಾಗೇಶ್
Follow us on

ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ ಸಂಬಂಧ ಆರೋಪಿ ನಾಗೇಶ್​ನನ್ನು ಪೊಲೀಸರು ಕೊನೆಗೂ ತಮಿಳುನಾಡಿನಲ್ಲಿ (Tamilunadu) ಬಂಧಿಸಿದ್ದು, ಈತನ ಬಂಧನಕ್ಕೆ ಪೊಲೀಸರಿಗೆ ಸಹಕರಿಸಿದ್ದು ಭಿತ್ತಿ ಚಿತ್ರ. ಹೌದು, ಯುವತಿ ಮೇಲೆ ಕೃತ್ಯವೆಸಗಿದ ನಂತರ ನಾಗೇಶ್ ತಮಿಳುನಾಡಿಗೆ ಎಂಟ್ರಿ ಕೊಟ್ಟಿದ್ದಾನೆ. ಇದಕ್ಕೂ ಮೊದಲೇ ಕರ್ನಾಟಕದ ಪೊಲೀಸರು(Karnataka police) ಆರೋಪಿ ಬೇರೆ ರಾಜ್ಯಗಳಿಗೆ ತಲೆಮರೆಸಿಕೊಳ್ಳುವ ಸಾಧ್ಯತೆ ಹಿನ್ನೆಲೆ ತಮಿಳುನಾಡು ಸೇರಿದಂತೆ ಇನ್ನಿತರ ರಾಜ್ಯಗಳಿಗೆ ಮಾಹಿತಿ ರವಾನಿಸಿ ಗೋಡೆಗಳ ಮೇಲೆ ಭಿತ್ತಿ ಚಿತ್ರ (Poster Image) ಅಂಟಿಸುವಂತೆ ಸೂಚಿಸಿದ್ದಾರೆ. ಅದರಂತೆ ತಮಿಳುನಾಡಿನ ಪೊಲೀಸರು ತಮಿಳು ಭಾಷೆಯಲ್ಲೇ ಭಿತ್ತಿಚಿತ್ರಗಳನ್ನು ಗೋಡೆಗಳ ಮೇಲೆ ಅಂಟಿಸಿದ್ದಾರೆ. ಇತ್ತ ಭಿತ್ತಿಚಿತ್ರಗಳನ್ನು ಗಮನಿಸಿದ ಸ್ಥಳೀಯರು, ನಾಗೇಶ್(Nagesh) ತಿರುವಣ್ಣಮಲೈಗೆ ಎಂಟ್ರಿಕೊಡುತ್ತಲೇ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗೆ ಕರ್ನಾಟಕ ಪೊಲೀಸರು ಆರೋಪಿ ಇದ್ದ ಸ್ಥಳಕ್ಕೆ ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿತ್ತು.

ಹೇಗಿತ್ತು ಆ್ಯಸಿಡ್ ನಾಗನ ಎಸ್ಕೇಪ್ ಪ್ಲಾನ್?

ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ನಾಗೇಶ್, ಎಸ್ಕೇಪ್ ಆಗಲು ಎಲ್ಲಿಲ್ಲದ ಪ್ಲಾನ್ ನಡೆಸಿದ್ದ. .28ರ ಬೆಳಗ್ಗೆ ಆರೋಪಿ ಯುವತಿ ಮೇಲೆ ಆ್ಯಸಿಡ್ ಎರಚಿ ಸ್ಥಳದಿಂದ ಕಾಲ್ಕಿತ್ತಿದ್ದನು. ನಂತರ ಪೊಲೀಸರಿಗೆ ತನ್ನ ಸುಳಿವು ಸಿಗದಂತೆ ಮಾಡಲು ಟೆಕ್ನಿಕಲ್ ಎವಿಡೆನ್ಸ್ ಏನೂ ಸಿಗದಂತೆ ಮಾಡಿದ್ದಾನೆ. ಮೊಬೈಲ್ ಅನ್ನ ರಿಸ್ಟೋರ್ ಮಾಡಿದ್ದಲ್ಲದೆ, ಎರಡೆರಡು ಬಾರಿ ಮೊಬೈಲ್ ಫ್ಲ್ಯಾಶ್ ಮಾಡಿ ಹೊಸಪೇಟೆಯಲ್ಲಿ ಮೊಬೈಲ್ ಎಸೆದು ಪರಾರಿಯಾಗಿದ್ದನು.

ಆರೋಪಿಯ ಬಂಧನಕ್ಕೆ ತನಿಖೆಗೆ ಇಳಿದ ಪೊಲೀಸರಿಗೆ ಯಾವುದೇ ಟೆಕ್ನಿಕಲ್ ಎವಿಡೆನ್ಸ್ ಸಿಕ್ಕಿರಲಿಲ್ಲ. ಅಷ್ಟಕ್ಕೂ ಸುಮ್ಮನಾಗದ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದ್ದಾರೆ. ಇಲ್ಲೂ ಪೊಲೀಸರಿಗೆ ಯಾವುದೇ ಸುಳಿವು ಸಿಗದೆ ನಿರಾಸೆಯಾಗಿದ್ದರು. ನಂತರ ಪೊಲೀಸರು ತನಿಖೆಗಾಗಿ ಬಳಸಿದ್ದೇ ವಾಂಟೆಡ್ ಭಿತ್ತಿ ಚಿತ್ರ. ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳ ಸೇರಿದಂತೆ ದಕ್ಷಿಣ ಭಾರತದಾದ್ಯಂತ ಭಿತ್ತಿಪತ್ರಗಳ ಹಂಚಿದ್ದ ಪೊಲೀಸರು ಆಯಾ ರಾಜ್ಯಗಳಲ್ಲಿ ಆಯಾ ಪ್ರಾದೇಶಿಕ ಭಾಷೆಗಳಲ್ಲಿಯೇ ಮಠ, ಮಂದಿರ, ಧಾರ್ಮಿಕ ಕೇಂದ್ರ ಸೇರಿದಂತೆ ಅನೇಕ ಕಡೆಗಳಲ್ಲಿ ಅಂಟಿಸಿದ್ದರು.

ತಮಿಳುನಾಡಿನ ಸಿಟಿಗಳಲ್ಲಿ ಭಾವಚಿತ್ರ ಸಹಿತ ಭಿತ್ತಿಚಿತ್ರಗಳನ್ನು ಹೆಚ್ಚು ಹೈಲೈಟ್ ಮಾಡಲಾಗಿದ್ದರಿಂದ ಸ್ಥಳೀಯರು ಮಾರುವೇಷದಲ್ಲಿರುವ ನಾಗೇಶ್​ನ ಸುಳಿವು ಪೊಲೀಸರಿಗೆ ನೀಡಿದ್ದಾರೆ. ಕೂಡಲೆ ಎಚ್ಚೆತ್ತ ಪೊಲೀಸರ ತಂಡ, ಭಕ್ತರ ವೇಷದಲ್ಲಿ ಆಶ್ರಮಕ್ಕೆ ಹೋಗಿ ಆ್ಯಸಿಡ್ ನಾಗನನ್ನ ಅರೆಸ್ಟ್ ಮಾಡಿದ್ದಾರೆ.

ಆ್ಯಸಿಡ್ ನಾಗ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್

ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ ಸಂಬಂಧ ಆರೋಪಿ ನಾಗೇಶ್​ನನ್ನು ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು. ಅದರಂತೆ ಆರೋಪಿಯ ಚಿಕಿತ್ಸೆಗಾಗಿ ಪೊಲೀಸರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ನಾಗೇಶ್​ನನ್ನು ಬಿಜಿಎಸ್ ಖಾಸಗಿ ಆಸ್ಪತ್ರೆಯಿಂದ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.