ಕೊಪ್ಪಳ ಯುವಕನ ಬೇಡಿಕೆಗೆ ಕ್ಷಿಪ್ರವಾಗಿ ಸ್ಪಂದಿಸಿದ ಸಿಎಂ ಬೊಮ್ಮಾಯಿ – ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಿ, ಮಾನವೀಯತೆ ತೋರಿದ ಜಮಖಂಡಿ ಶಾಸಕ
ಮುಖ್ಯಮಂತ್ರಿ ಬೊಮ್ಮಾಯಿ ಅವರೊಂದಿಗೆ ಮಾತನಾಡುವಾಗ ತನ್ನ ತ್ರಿಚಕ್ರ ವಾಹನ ಅಪಘಾತಕ್ಕೀಡಾಗಿ ನಜ್ಜುಗುಜ್ಜಾದ ಬಗ್ಗೆ ಯುವಕ ಮಾಹಿತಿ ನೀಡಿದ್ದ. ಯುವಕನ ಮನವಿಗೆ ತಕ್ಷಣ ಸ್ಪಂದಿಸಿದ ಸಿಎಂ ಬೊಮ್ಮಾಯಿ ಕೊಪ್ಪಳ ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿ, ಶಿವಪ್ಪನಿಗೆ ಹೊಸ ತ್ರಿಚಕ್ರ ವಾಹನ ಕೊಡಿಸುವಂತೆ ಸೂಚನೆ ನೀಡಿದರು.
ಬೆಂಗಳೂರು: ವಿಶೇಷ ಚೇತನ ಯುವಕನ ಬೇಡಿಕೆಗೆ ಮುಖ್ಯಮಂತ್ರಿ ಬಸವ್ರಾಜ ಬೊಮ್ಮಾಯಿ ಅವರು (Basavaraj Bommai) ತಕ್ಷಣ ಸ್ಪಂದಿಸಿದ್ದಾರೆ. ಹೊಸ ತ್ರಿಚಕ್ರ ವಾಹನ (Tricycle) ಕೊಡಿಸುವಂತೆ ಸಿಎಂ ಬೊಮ್ಮಾಯಿಗೆ ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಅಡವಿಬಾವಿ ಗ್ರಾಮದ ನಿವಾಸಿ ಶಿವಪ್ಪ ಮನವಿ ಮಾಡಿದ್ದ. ಇಂದು ಬೆಂಗಳೂರಿನಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ಮುಗಿಸಿ ಹೊರಬರುತ್ತಿದ್ದಾಗ ಅಡವಿಬಾವಿ ಗ್ರಾಮದ ಶಿವಪ್ಪ ಸಿಎಂಗೆ ಮನವಿ ಮಾಡಿದ್ದ.
ಮುಖ್ಯಮಂತ್ರಿ ಬೊಮ್ಮಾಯಿ ಅವರೊಂದಿಗೆ ಮಾತನಾಡುವಾಗ ತನ್ನ ತ್ರಿಚಕ್ರ ವಾಹನ ಅಪಘಾತಕ್ಕೀಡಾಗಿ ನಜ್ಜುಗುಜ್ಜಾದ ಬಗ್ಗೆ ಮಾಹಿತಿ ನೀಡಿದ್ದ. ಯುವಕನ ಮನವಿಗೆ ತಕ್ಷಣ ಸ್ಪಂದಿಸಿದ ಸಿಎಂ ಬೊಮ್ಮಾಯಿ ಕೊಪ್ಪಳ ಜಿಲ್ಲಾಧಿಕಾರಿಗೆ (Koppal DC) ದೂರವಾಣಿ ಕರೆ ಮಾಡಿ, ಶಿವಪ್ಪನಿಗೆ ಹೊಸ ತ್ರಿಚಕ್ರ ವಾಹನ ಕೊಡಿಸುವಂತೆ ಸೂಚನೆ ನೀಡಿದರು.
ತಡವಾದ ಆ್ಯಂಬುಲೆನ್ಸ್, ಬೈಕ್ ಸವಾರನಿಗೆ ಜಮಖಂಡಿ ಶಾಸಕ ನೆರವಿನ ಹಸ್ತ: ಬಾಗಲಕೋಟೆ: ಜನವಾಡ ಕ್ರಾಸ್‌ನಲ್ಲಿ ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದ ಬೈಕ್ ಸವಾರ ಪರಸಪ್ಪ ಎಂಬಾತನಿಗೆ ಆ್ಯಂಬುಲೆನ್ಸ್ ಬರಲು ತಡಮಾಡಿದ ಹಿನ್ನೆಲೆ ಗಾಯಾಳುವನ್ನು ಸ್ವಂತ ಕಾರಿನಲ್ಲಿ ಕರೆತಂದು ತಾಲೂಕು ಆಸ್ಪತ್ರೆಗೆ ದಾಖಲಿಸಿ ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಮಾನವೀಯತೆ ತೋರಿದ್ದಾರೆ. ವಿಜಯಪುರದಿಂದ ಜಮಖಂಡಿಗೆ ತೆರಳುತ್ತಿದ್ದಾಗ ಶಾಸಕ ಆನಂದ ನ್ಯಾಮಗೌಡ ಈ ನೆರವಿನ ಹಸ್ತ ಚಾಚಿದ್ದಾರೆ.
ಗಾಯಗೊಂಡ ವ್ಯಕ್ತಿ ಜಮಖಂಡಿ ತಾಲೂಕಿನ ನಾಗನೂರ ಗ್ರಾಮದ ನಿವಾಸಿ ಪರಸಪ್ಪ ಕಾಂಬಳೆ ಜಮಖಂಡಿಯಿಂದ ನಾಗನೂರಿಗೆ ತೆರಳುವ ವೇಳೆ ಅಪರಿಚಿತ ಕಾರು ಪರಸಪ್ಪ ಅವರ ಬೈಕ್ ಗೆ ಗುದ್ದಿ ಪರಾರಿಯಾಗಿತ್ತು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:15 pm, Sat, 14 May 22