ನೀರಿನ ರಭಸಕ್ಕೆ ಸಿಲುಕಿದ ನಾಲ್ವರ ರಕ್ಷಣೆ, ಕೊಡಗಿನಲ್ಲಿ ಮತ್ತೆ ವ್ಯಾಘ್ರನ ಅಟ್ಟಹಾಸ!

| Updated By: Rakesh Nayak Manchi

Updated on: May 20, 2022 | 11:48 AM

ರಸ್ತೆ ದಾಟುತ್ತಿದ್ದ ವೇಳೆ ವಾಹನ ಸಹಿತ ಇದಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ನಾಲ್ವರನ್ನು ರಕ್ಷಿಸಿದ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಇನ್ನೊಂದೆಡೆ ಕೊಡಗಿನಲ್ಲಿ ಹುಲಿ ಹಸು ಕೊಂದ ಘಟನೆ ನಡೆದಿದ್ದು, ಜನರು ಭಯಭೀತರಾಗಿದ್ದಾರೆ.

ನೀರಿನ ರಭಸಕ್ಕೆ ಸಿಲುಕಿದ ನಾಲ್ವರ ರಕ್ಷಣೆ, ಕೊಡಗಿನಲ್ಲಿ ಮತ್ತೆ ವ್ಯಾಘ್ರನ ಅಟ್ಟಹಾಸ!
ಪ್ರಾತಿನಿಧಿಕ ಚಿತ್ರ
Follow us on

ಹುಬ್ಬಳ್ಳಿ – ಧಾರವಾಡ: ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನೆರೆ(Flood)ಯ ಪರಿಸ್ಥಿತಿ ತಲೆದೋರಿದೆ. ಅದರಂತೆ ನೀರಿನ ರಭಸಕ್ಕೆ ಸಿಲುಕಿ ಕೊಚ್ಚಿಹೋಗುತ್ತಿದ್ದ ನಾಲ್ವರನ್ನು ರಕ್ಷಣೆ ಮಾಡಲಾಗಿದೆ. ಕುಂದಗೋಳ ತಾಲೂಕಿನ ಸಂಶಿ-ಚಾಕಲಬ್ಬಿ ಮಧ್ಯೆ ಇರುವ ಹಳ್ಳದಲ್ಲಿ ಮಳೆ(Rain)ಯಿಂದಾಗಿ ರಭಸದ ನೀರು ಹರಿಯುತ್ತಿತ್ತು. ರಸ್ತೆ ದಾಟುತ್ತಿದ್ದ ವೇಳೆ ವಾಹನ ಸಹಿತ ಇದಕ್ಕೆ ಸಿಲುಕಿದ ನಾಲ್ವರು ವ್ಯಕ್ತಿಗಳು ಕೊಚ್ಚಿ ಹೋಗುತ್ತಿದ್ದರು. ಕೂಡಲೇ ಇವರ ರಕ್ಷಣಾ ಕಾರ್ಯ ಆರಂಭಿಸಿ ರಕ್ಷಣೆ ಮಾಡಲಾಗಿದೆ.

ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಹೋಗಿ ಮಸಣ ಸೇರಿದರು

ಮೈಸೂರು: ತ್ರಿಬಲ್ ರೈಡ್ ಮಾಡಿಕೊಂಡು ಹೋಗುತ್ತಿದ್ದ ಮೂವರು ಯುವಕರಿಗೆ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರು ಎದುರಾಗಿದ್ದಾರೆ. ಈ ವೇಳೆ, ಯುವಕರು ಪೊಲೀಸರ ಕೈಗೆ ಸಿಕ್ಕಹಾಕಿಕೊಳ್ಳಬಾರದು ಎಂದು ತಪ್ಪಿಸಿಕೊಳ್ಳುವ ಭರದಲ್ಲಿ ಯುಟರ್ನ್ ಹೊಡೆದಿದ್ದಾರೆ. ಈ ವೇಳೆ ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ ಬೈಕ್​ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ  ಕೂಡ್ಲಾಪುರದ ನಿವಾಸಿ ಸಚಿನ್ ಮತ್ತು ಉತ್ತನಹಳ್ಳಿಯ ದೊರೆಸ್ವಾಮಿ ಸಾವನ್ನಪ್ಪಿದ್ದಾರೆ. ಬೈಕ್​ನಲ್ಲಿದ್ದ ಮತ್ತೋರ್ವ ಯುವಕನ ಸ್ಥಿತಿ ಗಂಭೀರವಾಗಿದೆ. ನಂಜನಗೂಡು ಸಿಂಧುವಳ್ಳಿ ಬಳಿಯ ಹುಣಸನಾಳು ಗ್ರಾಮದ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Jahangirpuri violence ಜಹಾಂಗೀರ್‌ಪುರಿ ಹಿಂಸಾಚಾರ ಪ್ರಕರಣದ ತನಿಖೆ ಕ್ರೈಂ ಬ್ರಾಂಚ್‌ಗೆ ಹಸ್ತಾಂತರ

 

ಸಿಲಿಂಡರ್​ ಸ್ಫೋಟಗೊಂಡು ವೃದ್ಧ ಸಾವು

ಚಿಕ್ಕಬಳ್ಳಾಪುರ: ಸಿಲಿಂಡರ್​ ಸ್ಫೋಟದಿಂದ ವೃದ್ಧ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಾಗೇಪಲ್ಲಿಯಲ್ಲಿ ನಡೆದಿದೆ. ತಾಲೂಕಿನ ಮ್ಯಾಕಲಪಲ್ಲಿನ ಮನೆಯೊಂದರಲ್ಲಿ ಎಲ್​ಪಿಜಿ ಸಿಲಿಂಡರ್ ಸ್ಫೋಟಗೊಂಡಿದೆ. ಈ ವೇಳೆ ಮನೆಯಲ್ಲಿ ಎಂ.ಬಿ.ಲಕ್ಷ್ಮಣ (62) ಇದ್ದರು. ಸ್ಫೋಟದ ತೀವ್ರತೆಗೆ ಮನೆ ಕುಸಿದುಬಿದ್ದಿದ್ದು, ಮನೆಯೊಳಗಿದ್ದ ವೃದ್ಧರೊಬ್ಬರು ಸಾವನ್ನಪ್ಪಿದ್ದಾರೆ. ಎಂ.ಬಿ.ಲಕ್ಷ್ಮಣ(62) ಸಾವನ್ನಪ್ಪಿದ ವೃದ್ಧ. ಚೇಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಘಟನೆ ನಡೆಯುವ ಸಂದರ್ಭದಲ್ಲಿ ಮನೆಯಲ್ಲಿ ಲಕ್ಷ್ಮಣ ಮಾತ್ರ ಇದ್ದರು.

ಕೊಡಗಿನಲ್ಲಿ ವ್ಯಾಘ್ರ ಅಟ್ಟಹಾಸ

ಕೊಡಗು: ಕೊಡಗಿನಲ್ಲಿ ವ್ಯಾಘ್ರಗಳ ಹಾವಳಿ ನಿಲ್ಲವಂತೆ ಕಾಣುತ್ತಿಲ್ಲ. ಇಲ್ಲಿನ ನಿವಾಸಿಗಳು ಭಯದ ವಾತಾವರಣದಲ್ಲೇ ಮತ್ತೆ ಕಾಲ ಕಳೆಯುವಂತಾಗಿದೆ. ಹೌದು, ಜಿಲ್ಲೆಯಲ್ಲಿ ಮತ್ತೆ ಹುಲಿ ಪತ್ತೆಯಾಗಿದೆ. ವಿರಾಜಪೇಟೆ ತಾಲ್ಲೂಕಿನ ರುದ್ರಗುಪ್ಪೆ ಗ್ರಾಮಕ್ಕೆ ನುಗ್ಗಿರುವ ಹುಲಿ, ಬಿ.ಗಣೇಶ್ ಎಂಬವರಿಗೆ ಸೇರಿದ ಹಸುವನ್ನು ಕೊಂದುಹಾಕಿದೆ. ಮೇಯಲು ಬಿಟ್ಟ ದನದ ಮೇಲೆ ವ್ಯಾಘ್ರ ದಾಳಿ ನಡೆಸಿ ಎಳೆದೊಯ್ದಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ಸುದ್ದಿಗಳಿಗಾಗಿ ಲಿಂಕ್ ಕ್ಲಿಕ್ ಮಾಡಿ