ಕೊರೊನಾ ಭಯದಲ್ಲಿದ್ದ ಪುಟಾಣಿಗಳಿಗಾಗಿ ಸಾಂಸ್ಕೃತಿಕ ನಗರಿಯಲ್ಲಿ ಶುರುವಾಗಿದೆ ರಂಗಭೂಮಿ ಕಲಿಕಾ ಶಿಬಿರ

|

Updated on: Dec 26, 2020 | 9:21 AM

ಮಕ್ಕಳು ಕೊರೊನಾ ಕಾಲದಲ್ಲಿ ತಮ್ಮ ಅಮೂಲ್ಯ ಸಮಯವನ್ನು ರಂಗಭೂಮಿಯ ಕಲಿಕೆಗಾಗಿ ಮೀಸಲಿಟ್ಟಿದ್ದಾರೆ. ಮೈಸೂರಿನ ದಟ್ಟಗಳ್ಳಿಯಲ್ಲಿರುವ ನಟ ಮಂಡ್ಯ ರಮೇಶ್ ಅವರ ನಟನಾ ಸಂಸ್ಥೆಯಲ್ಲಿ ರಂಗಭೂಮಿಯ ತರಬೇತಿ ಪಡೆಯುತ್ತಿದ್ದಾರೆ.

ಕೊರೊನಾ ಭಯದಲ್ಲಿದ್ದ ಪುಟಾಣಿಗಳಿಗಾಗಿ ಸಾಂಸ್ಕೃತಿಕ ನಗರಿಯಲ್ಲಿ ಶುರುವಾಗಿದೆ ರಂಗಭೂಮಿ ಕಲಿಕಾ ಶಿಬಿರ
ನಾಟಕದಲ್ಲಿ ತೊಡಗಿರುವ ಮಕ್ಕಳು
Follow us on

ಮೈಸೂರು: ಕೊರೊನಾ ಬಂದು ಮಕ್ಕಳು ಶಾಲೆ ಮುಖವನ್ನ ನೋಡದೆ ಒಂದು ವರ್ಷ ಕಳೆಯುತ್ತಾ ಬಂತು. ಮಕ್ಕಳಿಗಂತೂ ಮನೆಯಲ್ಲಿ ಇದ್ದೂ ಇದ್ದೂ ಭೇಜಾರಾಗಿದೆ. ಆದ್ರೆ ಅರಮನೆ ನಗರಿ ಮಕ್ಕಳು ತಮ್ಮ ಸಮಯವನ್ನ ರಂಗಭೂಮಿಗೆ ಮೀಸಲಿಟ್ಟು ಖುಷಿ ಖುಷಿಯಾಗಿದ್ದಾರೆ.

ಇವೆರೆಲ್ಲಾ ಸಾಂಸ್ಕೃತಿಕ ನಗರಿ ಮೈಸೂರಿನ ಪುಟಾಣಿಗಳು.. ಈ ಮಕ್ಕಳು ಕೊರೊನಾ ಕಾಲದಲ್ಲಿ ತಮ್ಮ ಅಮೂಲ್ಯ ಸಮಯವನ್ನು ರಂಗಭೂಮಿಯ ಕಲಿಕೆಗಾಗಿ ಮೀಸಲಿಟ್ಟಿದ್ದಾರೆ. ಮೈಸೂರಿನ ದಟ್ಟಗಳ್ಳಿಯಲ್ಲಿರುವ ನಟ ಮಂಡ್ಯ ರಮೇಶ್ ಅವರ ನಟನಾ ಸಂಸ್ಥೆಯಲ್ಲಿ ರಂಗಭೂಮಿಯ ತರಬೇತಿ ಪಡೆಯುತ್ತಿದ್ದಾರೆ. ಕೊರೊನಾದಿಂದ ಮನೆಯಲ್ಲೇ ಕುಳಿತು ಮಕ್ಕಳಿಗೆ ನಮ್ಮ ನಾಡಿನ ಕಲೆ‌, ಸಂಸ್ಕೃತಿಯನ್ನು ಪರಿಚಯಿಸುವ ಹಾಗೂ ಕಲಿಸುವ ಕೆಲಸವನ್ನು ನಟ ಮಂಡ್ಯ ರಮೇಶ್ ಮಾಡುತ್ತಿದ್ದಾರೆ.

ನಟನಾದಲ್ಲಿ ರಂಗಗೀತೆ, ಜನಪದ ಗೀತೆ, ನಾಟಕ ಸೇರಿ ಹಲವು ವಿಷಯಗಳನ್ನು ಮಕ್ಕಳಿಗೆ ಕಲಿಸಲಾಗುತ್ತಿದೆ. ಮಕ್ಕಳು ಸಹಾ ಸಾಕಷ್ಟು ಆಸಕ್ತಿಯಿಂದ ಎಲ್ಲವನ್ನೂ ಕಲಿಯುತ್ತಿದ್ದಾರೆ. ನಟನಾ ರಂಗಮಂದಿರದಲ್ಲೇ ಮಕ್ಕಳ ನಾಟಕ ಪ್ರದರ್ಶನಗಳು ನಡೆಯುತ್ತಿವೆ. ಮನೆಯಲ್ಲೇ ಕುಳಿತು ಬೋರ್ ಆಗಿದ್ದ ಮಕ್ಕಳಿಗೆ ಇದು ಖುಷಿ ತರಿಸಿದೆ. ಒಟ್ನಲ್ಲಿ ಕೊರೊನಾ ಭೀತಿ‌ ನಡುವೆಯೂ ಮಕ್ಕಳು ಎಲ್ಲಾ ಮುಂಜಾಗ್ರತಾ ಕ್ರಮಗಳೊಂದಿಗೆ ರಂಗಭೂಮಿ ಚಟುವಟಿಕೆಯಲ್ಲಿ ತೊಡಗಿದ್ದು ನಿಜಕ್ಕೂ ಮೆಚ್ಚುವಂತದ್ದು.