ನೆಲಮಂಗಲ: ಮಾಲೀಕರು ಮನೆಯಲ್ಲಿದ್ದಾಗಲೇ ಕಳ್ಳರು ಕೈಚಳಕ ತೋರಿರುವ ಘಟನೆ ಬೊಮ್ಮನಹಳ್ಳಿಯಲ್ಲಿ ವರದಿಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಬೊಮ್ಮನಹಳ್ಳಿಯಲ್ಲಿ 50 ಸಾವಿರ ರೂಪಾಯಿ ನಗದನ್ನು ಕಳ್ಳರು ಎಗರಿಸಿದ್ದಾರೆ. ಹನುಮಂತರಾಜು ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ.
ಹನುಮಂತರಾಜು ತಮ್ಮ ನಿವಾಸದಲ್ಲಿದ್ದ ಕಂಪ್ಯೂಟರ್ ಟೇಬಲ್ ಮೇಲೆ ಇಟ್ಟಿದ್ದ 50 ಸಾವಿರ ರೂಪಾಯಿ ನಗದನ್ನು ಕಳ್ಳ ಕದ್ದೊಯ್ದಿದ್ದಾನೆ. ಖದೀಮ ಕಿಟಕಿ ಮುಖಾಂತರ ಕಡ್ಡಿ ಹಾಕಿ, ಪರ್ಸ್ ಎಳೆದು ಹಣ ದೋಚಿದ್ದಾನೆ. ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೆಲಮಂಗಲ ಗ್ರಾಮಾಂತರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಂತೆಯಲ್ಲಿ ಕಂತೆ ಕಂತೆ ಖೋಟಾ ನೋಟ್ ಜೊತೆ ಪತ್ತೆಯಾದ ಐನಾತಿಗಳು ಅರೆಸ್ಟ್
Published On - 10:54 pm, Tue, 12 January 21