ಸಾವಿನ ದಾರಿ ತೋರಲು ಹೊಂಚು ಹಾಕುತ್ತಿದೆ ರಾಷ್ಟ್ರೀಯ ಹೆದ್ದಾರಿ; 10 ದಿನದಲ್ಲಿ 10 ಸಾವು, ವರ್ಷದಲ್ಲಿ 300 ಬಲಿ!

| Updated By: ಆಯೇಷಾ ಬಾನು

Updated on: Dec 16, 2021 | 12:58 PM

ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಗಳ ಸಂಗಮವಾಗಿರೋ ನಗರ. ಆದ್ರೆ ಇದೇ ಚಿತ್ರದುರ್ಗದ ಹೆದ್ದಾರಿಗಳು ಈಗ ಡೆಡ್ಲಿ ಹೈವೇಗಳಾಗಿವೆ. ಕಳೆದ 10 ದಿನಗಳಲ್ಲಿ ನಡೆದ ಎರಡು ಪ್ರತ್ಯೇಕ ಭೀಕರ ಅಪಘಾತಗಳಲ್ಲಿ 8 ಮಂದಿ ಸೇರಿದಂತೆ 10 ದಿನದಲ್ಲಿ 10 ಮಂದಿ ಅಪಘಾತಕ್ಕೆ ಬಲಿಯಾಗಿದ್ದಾರೆ.

ಸಾವಿನ ದಾರಿ ತೋರಲು ಹೊಂಚು ಹಾಕುತ್ತಿದೆ ರಾಷ್ಟ್ರೀಯ ಹೆದ್ದಾರಿ; 10 ದಿನದಲ್ಲಿ 10 ಸಾವು, ವರ್ಷದಲ್ಲಿ 300 ಬಲಿ!
ಸಾವಿನ ದಾರಿ ತೋರಲು ಹೊಂಚು ಹಾಕುತ್ತಿದೆ ರಾಷ್ಟ್ರೀಯ ಹೆದ್ದಾರಿ; 10 ದಿನದಲ್ಲಿ 10 ಸಾವು, ವರ್ಷದಲ್ಲಿ 300 ಬಲಿ!
Follow us on

ಚಿತ್ರದುರ್ಗ: ಗಾಡಿ ಹತ್ತಿದ್ರೆ ಸಣ್ಣ ಸಣ್ಣ ಗಲ್ಲಿಗಳಲ್ಲೇ ನಮ್ಮ ಜನ ಸ್ಪೀಡಾಗಿ ಹೋಗ್ತಾರೆ. ಇನ್ನು ರಾಷ್ಟ್ರೀಯ ಹೆದ್ದಾರಿ ಅಂದ್ರೆ ಕೇಳ್ಬೇಕಾ ಸುನಾಮಿಯಂತೆ ಮಿಂಚಿ ಮರೆಯಾಗ್ತಾರೆ. ಆದ್ರೆ ಈ ಹೈವೆಗಳಲ್ಲಿ ಮಾತ್ರ ಸಾಲು ಸಾಲು ಌಕ್ಸಿಡೆಂಟ್ ಆಗ್ತಾನೆ ಇದೆ. ವರ್ಷಕ್ಕೆ ನೂರಾರು ಮಂದಿ ಪ್ರಾಣ ಬಿಡ್ತಿದ್ದಾರೆ.

ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಗಳ ಸಂಗಮವಾಗಿರೋ ನಗರ. ಆದ್ರೆ ಇದೇ ಚಿತ್ರದುರ್ಗದ ಹೆದ್ದಾರಿಗಳು ಈಗ ಡೆಡ್ಲಿ ಹೈವೇಗಳಾಗಿವೆ. ಕಳೆದ 10 ದಿನಗಳಲ್ಲಿ ನಡೆದ ಎರಡು ಪ್ರತ್ಯೇಕ ಭೀಕರ ಅಪಘಾತಗಳಲ್ಲಿ 8 ಮಂದಿ ಸೇರಿದಂತೆ 10 ದಿನದಲ್ಲಿ 10 ಮಂದಿ ಅಪಘಾತಕ್ಕೆ ಬಲಿಯಾಗಿದ್ದಾರೆ. ಡಿಸೆಂಬರ್ 4 ರಂದು ಲಾರಿ ಅಪಘಾತದಲ್ಲಿ ನಾಲ್ವರು ಹಾಗೂ ಡಿಸೆಂಬರ್ 13 ರಂದು ಲಾರಿ ಪಲ್ಟಿಯಾಗಿ ನಾಲ್ರು ಬಲಿಯಾಗಿದ್ರು. ಹೀಗೆ ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 300 ಮಂದಿ ಅಪಘಾತದಲ್ಲಿ ಪ್ರಾಣ ಬಿಟ್ಟಿದ್ದಾರೆ. ಅಷ್ಟಕ್ಕೂ ಈ ಅಪಘಾತಕ್ಕೆ ಕಾರಣವೇ ಅವಜ್ಞಾನಿಕ ಕಾಮಗಾರಿ ಹಾಗೂ ನಿರ್ಲಕ್ಷ್ಯ. ಅವೈಜ್ಞಾನಿಕವಾಗಿ ಹೆದ್ದಾರಿ ನಿರ್ಮಾಣ ಮಾಡಲಾಗಿದ್ದು ಕೆಲವೆಡೆ ತಿರುವು ಇದ್ದಲ್ಲಿಯೂ ವಿದ್ಯುತ್ ಕಂಬಗಳಿಲ್ಲ. ಮತ್ತೊಂದೆಡೆ ರಾತ್ರಿಹೊತ್ತು ಹೆದ್ದಾರಿ ಬದಿಯಲ್ಲೇ ಲಾರಿ ನಿಲ್ಲಿಸೋದ್ರಿಂದ ಅಪಘಾತಗಳಾಗ್ತಿವೆ .

ಹೈವೇ ಅಪಘಾತಕ್ಕೆ 11 ತಿಂಗಳಲ್ಲಿ 200 ಬಲಿ
ಇನ್ನು ಹಾವೇರಿ ಜಿಲ್ಲೆಯಲ್ಲೂ ರಾಷ್ಟ್ರೀಯ ಹೆದ್ದಾರಿ ನಾಲ್ಕು ಹಾದು ಹೋಗಿದೆ. ಇದೇ ಹೆದ್ದಾರಿ ಇಲ್ಲೂ ಕೂಡಾ ಸಾವಿನ ಸವಾರಿಗೆ ಕಾರಣವಾಗಿದೆ. ಕೆಲವೆಡೆ ಹೈವೇ ರಸ್ತೆಯಲ್ಲಿನ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಮತ್ತೆ ಕೆಲವೆಡೆ ಸೂಚನಾ ಫಲಕಗಳು ಕಾಣ್ತಿಲ್ಲ. ಇನ್ನು ಕೆಲವು ಕಡೆಗಳಲ್ಲಿನ ರಸ್ತೆಗಳು ತಗ್ಗು ಗುಂಡಿಗಳಿಂದ ತುಂಬಿ ಹೋಗಿವೆ. ಇವೇ ಸಮಸ್ಯೆಗಳು ಅಪಘಾತಕ್ಕೆ ಕಾರಣವಾಗ್ತಿವೆ . ಪೊಲೀಸ್ ಇಲಾಖೆ ಸಹ ಜಿಲ್ಲೆಯ ಬ್ಯಾಡಗಿ, ಶಿಗ್ಗಾಂವಿ ಮತ್ತು ರಾಣೆಬೆನ್ನೂರು ತಾಲೂಕಿನಲ್ಲಿ ಐದು ಸ್ಥಳಗಳನ್ನ ಅಪಘಾತ ಸ್ಥಳಗಳು ಅಂತಾ ಗುರ್ತಿಸಿದೆ. ಇಲ್ಲಿ ನಿಧಾನಕ್ಕೆ ಸಾಗಿರಿ ಅಂತಾ ಬೋರ್ಡ್‌ ಹಾಕಿರೋದನ್ನ ಬಿಟ್ರೆ ಕಾಮಗಾರಿಯನ್ನ ಪೂರ್ತಿಗೊಳಿಸೋ ಕಾರ್ಯವಾಗಿಲ್ಲ. ಹೀಗಾಗಿ ಕಳೆದ ಜನವರಿಯಿಂದ ನವೆಂಬರ್‌ವರೆಗೆ ಬರೋಬ್ಬರಿ 675 ಅಪಘಾತ ಪ್ರಕರಣಗಳು ನಡೆದಿದ್ದು,198 ಜನ ಮೃತಪಟ್ಟಿದ್ದಾರೆ.
ಒಟ್ನಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹತ್ತಾರು ಕಡೆ ಟೋಲ್‌ ಕೇಂದ್ರಗಳನ್ನ ಮಾಡಿ ನಿತ್ಯ ಲಕ್ಷ ಲಕ್ಷ ವಸೂಲಿ ಮಾಡೋ ಹೆದ್ದಾರಿ ಪ್ರಾಧಿಕಾರ, ಅಪಘಾತ ವಲಯಗಳನ್ನ ಸರಿ ಮಾಡ್ತಿಲ್ಲ. ಹೀಗಾಗಿ ನಿತ್ಯ ಒಂದೊಂದು ಬಲಿಯಾಗ್ತಿದ್ದು, ವರ್ಷಕ್ಕೆ ಸಾವಿರಾರು ಸವಾರರು ಸಾವಿನ ಮನೆ ಸೇರುತ್ತಿದ್ದಾರೆ.

ಇದನ್ನೂ ಓದಿ: ಒಮಿಕ್ರಾನ್​ ಸೌಮ್ಯ ಲಕ್ಷಣಗಳನ್ನು ಉಂಟು ಮಾಡುವ ವೈರಸ್​ ಎಂಬ ತಪ್ಪು ಕಲ್ಪನೆ ಬೇಡ, ನಿರ್ಲಕ್ಷ್ಯವೂ ಬೇಡ: ಡಾ. ಅನುರಾಗ್​ ಅಗರ್​ವಾಲ್​