ದುಬೈ, ಮಸ್ಕತ್‌ನಿಂದ ಬರ್ತಿದೆಯಂತೆ ಶೋಭಾ ಕರಂದ್ಲಾಜೆಗೆ ಬೆದರಿಕೆ ಕರೆ!

ಉಡುಪಿ: ಕೇರಳದ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣ ಪ್ರಶ್ನಿಸಿದ್ದಕ್ಕೆ ದುಬೈ, ಮಸ್ಕತ್‌ನಿಂದ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಕೇರಳದ ಹಿಂದೂ ಕಾರ್ಯಕರ್ತನಿಗೆ ಮಸ್ಕತ್‌ನಲ್ಲಿ ಹಲ್ಲೆ ಮಾಡಿದ್ದಾರೆ. ಆ ಘಟನೆಯ ವಿರುದ್ಧ ನಾನು ಸಿಡಿದೆದ್ದಿದ್ದೆ. ಗೃಹ ಸಚಿವ ಅಮಿತ್ ಶಾಗೆ ಈ ಬಗ್ಗೆ ಪತ್ರ ಸಹ ಬರೆದಿದ್ದೆ. ಹೀಗಾಗಿ ನನಗೆ ಪ್ರತಿನಿತ್ಯ ಬೆದರಿಕೆ ಕರೆಗಳು ಬರುತ್ತಿವೆ ಎಂದರು. ಜಿಹಾದಿಗಳು ಟಾರ್ಗೆಟ್ ಮಾಡಿದ್ದಾರೆ: ಹಲವಾರು ಜನ ದುರುದ್ದೇಶದಿಂದ ಫೋನಿನ ಮೇಲೆ […]

ದುಬೈ, ಮಸ್ಕತ್‌ನಿಂದ ಬರ್ತಿದೆಯಂತೆ ಶೋಭಾ ಕರಂದ್ಲಾಜೆಗೆ ಬೆದರಿಕೆ ಕರೆ!
ಶೋಭಾ ಕರಂದ್ಲಾಜೆ (ಸಂಗ್ರಹ ಚಿತ್ರ)

Updated on: May 05, 2020 | 11:34 AM

ಉಡುಪಿ: ಕೇರಳದ ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣ ಪ್ರಶ್ನಿಸಿದ್ದಕ್ಕೆ ದುಬೈ, ಮಸ್ಕತ್‌ನಿಂದ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಕೇರಳದ ಹಿಂದೂ ಕಾರ್ಯಕರ್ತನಿಗೆ ಮಸ್ಕತ್‌ನಲ್ಲಿ ಹಲ್ಲೆ ಮಾಡಿದ್ದಾರೆ. ಆ ಘಟನೆಯ ವಿರುದ್ಧ ನಾನು ಸಿಡಿದೆದ್ದಿದ್ದೆ. ಗೃಹ ಸಚಿವ ಅಮಿತ್ ಶಾಗೆ ಈ ಬಗ್ಗೆ ಪತ್ರ ಸಹ ಬರೆದಿದ್ದೆ. ಹೀಗಾಗಿ ನನಗೆ ಪ್ರತಿನಿತ್ಯ ಬೆದರಿಕೆ ಕರೆಗಳು ಬರುತ್ತಿವೆ ಎಂದರು.

ಜಿಹಾದಿಗಳು ಟಾರ್ಗೆಟ್ ಮಾಡಿದ್ದಾರೆ:
ಹಲವಾರು ಜನ ದುರುದ್ದೇಶದಿಂದ ಫೋನಿನ ಮೇಲೆ ಫೋನ್ ಮಾಡುತ್ತಿದ್ದಾರೆ. ಜಿಹಾದಿಗಳು ಎರಡು ಮೂರು ವರ್ಷಗಳಿಂದ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ದೆಹಲಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದೇನೆ. ಕರೆ ಮಾಡಿದ ಆರೋಪಿಗಳನ್ನು ಈವರೆಗೆ ಪೊಲೀಸರು ಪತ್ತೆ ಹಚ್ಚಿಲ್ಲ ಎಂದು ಶೋಭಾ ಕರಂದ್ಲಾಜೆ ಅಳಲು ತೋಡಿಕೊಂಡರು.

ನಾನು ನಿರಂತರವಾಗಿ ಜನ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಕೊರೊನಾ ಸಂದರ್ಭದಲ್ಲಿ ಅಕ್ಕಿ ದವಸ ಧಾನ್ಯಗಳನ್ನು ನಿರಂತರವಾಗಿ ವಿತರಿಸಿದ್ದೇನೆ. ಒಂದು ದಿನಾನೂ ವಿಶ್ರಾಂತಿಯನ್ನು ತೆಗೆದುಕೊಂಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧ ಅಪಪ್ರಚಾರ ಹರಿದಾಡುತ್ತಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.

Published On - 11:31 am, Tue, 5 May 20