ಬೆಂಗಳೂರು, ಡಿ.29: ಹೊಸ ವರ್ಷಾಚರಣೆಗೆ (New Year) ಕೇವಲ 2 ದಿನ ಮಾತ್ರ ಬಾಕಿ ಇದ್ದು ಬೆಂಗಳೂರು ಗ್ರಾಮಾಂತರ ಪೊಲೀಸರು ಅಲರ್ಟ್ ಆಗಿದ್ದಾರೆ. ವರ್ಷಾಚರಣೆ ವೇಳೆ ಯಾವುದೇ ರೀತಿಯ ಸಮಸ್ಯೆಗಳು, ಅಹಿತಕರ ಘಟನೆಗಳು ನಡೆಯದಂತೆ ಹದ್ದಿನ ಕಣ್ಣಿಡಲಾಗುತ್ತಿದೆ. ಬೆಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇರುವ ಶಿವಗಂಗೆ (Shivagange), ಕುಂತಿ ಬೆಟ್ಟ (Kunti Betta), ಸಿದ್ದರಬೆಟ್ಟ (Siddara Betta) ಸೇರಿ ಇತರ ಬೆಟ್ಟಗಳಿಗೆ ಹೊಸ ವರ್ಷದ ರಾತ್ರಿ ಸಾರ್ವಜನಿಕರಿಗೆ ಪ್ರವೇಶ ಇಲ್ಲದಂತೆ ಮಾಡಲು ತೀರ್ಮಾನಿಸಲಾಗಿದೆ.
ನಗರದ ಹೊರಗಡೆ ನಡೆಯುವ ಪಾರ್ಟಿ ಮಾಗು ಡಿಜೆ ನೈಟ್ಸ್ಗಳ ನಿಗಾ ಇಡಲು ಮುಂದಾಗಿದ್ದಾರೆ. ನಂದಿ ಹಿಲ್ಸ್ ರಸ್ತೆಗೆ ನಾಗ ಬಂದಿ ಹಾಕಿ ಪರಿಶೀಲನೆ ಮಾಡಲಾಗುತ್ತಿದೆ. ಡಿಸೆಂಬರ್ 30, 31 ಮತ್ತು ಜನವರಿ 1ರ ವರೆಗೆ ಮೂರು ದಿನಗಳ ಕಾಲ ಸಾರ್ವಜನಿಕರಿಗೆ ಬೆಟ್ಟಗಳ ಪ್ರವೇಕ್ಕೆ ನಿರ್ಬಂಧ ಹೇರಲಾಗಿದೆ. ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಬರುವ ಬೆಟ್ಟಗಳಿಗೆ ಈ ಮೂರು ದಿನ ಪ್ರವೇಶವಿರುವುದಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ಇದನ್ನೂ ಓದಿ: ಹೊಸ ವರ್ಷಾಚರಣೆ: ತಡರಾತ್ರಿ 2 ಗಂಟೆವರೆಗೆ ಸಂಚರಿಸಲಿದೆ ನಮ್ಮ ಮೆಟ್ರೋ
ಇನ್ನು ಹೊಸ ವರ್ಷ ವೇಳೆ ಬೆಂಗಳೂರಿನ ಎಂಜಿ ರೋಡ್, ಚರ್ಚ್ ಸ್ಟ್ರೀಟ್, ರೆಸಿಡೆನ್ಸಿ ರೋಡ್ ಸೇರಿದಂತೆ ಹಲವೆಡೆ ಹೊಸ ವರ್ಷದ ಪಾರ್ಟಿ ಮಾಡಲು ಸಾವಿರಾರು ಸಂಖ್ಯೆಯಲ್ಲಿ ಜನ ಬರುತ್ತಾರೆ. ಹೀಗಾಗಿ ಕೆಲ ಕಠಿಣ ನಿಯಮಗಳನ್ನು ಪೊಲೀಸರು ಜಾರಿಗೊಳಿಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ವಹಿಸಲಾಗುತ್ತಿದೆ. ರಾತ್ರಿ 1 ಗಂಟೆಗೆ ಎಲ್ಲಾ ಪಾರ್ಟಿಗಳು ಬಂದ್ ಆಗಬೇಕು. ಕ್ಲಬ್, ಪಬ್, ಹೊಟೆಲ್ ಸೇರಿದಂತೆ ಎಲ್ಲಾ ಪಾರ್ಟಿಗೂ ರಾತ್ರಿ 1 ಗಂಟೆವರೆಗೆ ಮಾತ್ರ ಅವಕಾಶ ನೀಡಲಾಗಿದೆ.
ನ್ಯೂ ಇಯರ್ ಸೆಲೆಬ್ರೆಷನ್ ಗೆ ಬರುಗ ಗ್ರಾಹಕರ ಆಧಾರ್ ಕಾರ್ಡ್, ಅಡ್ರೆಸ್ ಫ್ರೂಫ್ ಪಡೆದು ಪಾಸ್ ನೀಡಲು ಪಬ್, ಕ್ಲಬ್, ರೆಸ್ಟೋರೆಂಟ್ ಮಾಲೀಕರು ಮುಂದಾಗಿದ್ದಾರೆ. ಫುಲ್ ಟೈಟ್ ಆಗಿ ಅಸ್ವಸ್ಥರಾಗೋ ಕಸ್ಟಮರ್ಸ್ ಮನೆಗೆ ತಲುಪಿಸಲು ಗ್ರಾಹಕರ ವಿಳಾಸ ಪಡೆಯುತ್ತಿದ್ದು, ವಿಳಾಸ, ಆಧಾರ ಕಾರ್ಡ್ ಪಡೆದು ಪಾರ್ಟಿಗೆ ಎಂಟ್ರಿ ಕೊಡಬೇಕೆಂದು ನಿರ್ಧರಿಸಿದೆ. ಪಾರ್ಟಿಗೆ ಆಗಮಿಸುವ ಕಸ್ಟಮರ್ಸ್ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಡ್ರಗ್ಸ್ ಸೇವನೆಗೆ ಕಡಿವಾಣ ಹಾಕಿದ್ದು, ರೇವ್ ಪಾರ್ಟಿಗಳ ಮೇಲೆ ಹದ್ದಿನ ಕಣ್ಣೀಡಲಾಗಿದೆ. ಇದರ ಹೊರತಾಗಿ ನ್ಯೂ ಇಯರ್ ಸೆಲೆಬ್ರೆಷನ್ ಗೆ ಸುರಕ್ಷತೆಗೆ ಡ್ರೋನ್ ಕ್ಯಾಮಾರ ಹಾಗೂ ಬೆಂಗಳೂರಿನಾದ್ಯಂತ 6 ಸಾವಿರಕ್ಕೂ ಅಧಿಕ ಸಿಸಿ ಕ್ಯಾಮಾರಗಳು ಕಾರ್ಯಮಿರ್ವಹಿಸ್ತಿದ್ದು, ಮಫ್ತಿಯಲ್ಲೂ ಪೋಲಿಸರು ಸಜ್ಜಾಗಿರಲಿದ್ದಾರೆ. ಬೆಂಗಳೂರಿನಾದ್ಯಂತ ಭದ್ರತೆಗೆಂದು 7 ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಕ್ತಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ