ಇದು ತುಂಗಾ ‘ಚೀಟ್’ ಫಂಡ್: ಗ್ರಾಹಕರಿಗೆ ಬಿತ್ತು ಪಂಗನಾಮ, ದಂಪತಿ ನಾಪತ್ತೆ
ಶಿವಮೊಗ್ಗ: ತುಂಗಾ ಚಿಟ್ ಫಂಡ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಶಂಕರ್ ನಾಗ್ ಎಂಬ ದಂಪತಿಯು ಗ್ರಾಹಕರಿಗೆ ವಂಚನೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಶಂಕರ ಮಠ ರಸ್ತೆಯಲ್ಲಿರುವ ಚಿಟ್ ಫಂಡ್ಗೆ ನೂರಾರು ಜನರು 1 ರಿಂದ 10 ಲಕ್ಷದವರೆಗೆ ಚೀಟಿ ಹಣ ಕಟ್ಟುತ್ತಿದ್ದರು. ಆದ್ರೆ, ಕಳೆದ ನಾಲ್ಕು ದಿನಗಳಿಂದ ಶಂಕರ್ ದಂಪತಿ ಕಚೇರಿ ಖಾಲಿ ಮಾಡಿ ಎಸ್ಕೇಪ್ ಆಗಿದ್ದಾರೆ. ವಂಚನೆಯಿಂದ ಕಂಗಾಲಾಗಿರುವ ಗ್ರಾಹಕರ ಕಣ್ಣೀರು ಹಾಕುತ್ತಿದ್ದು, ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಿವಮೊಗ್ಗ: ತುಂಗಾ ಚಿಟ್ ಫಂಡ್ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಶಂಕರ್ ನಾಗ್ ಎಂಬ ದಂಪತಿಯು ಗ್ರಾಹಕರಿಗೆ ವಂಚನೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಶಂಕರ ಮಠ ರಸ್ತೆಯಲ್ಲಿರುವ ಚಿಟ್ ಫಂಡ್ಗೆ ನೂರಾರು ಜನರು 1 ರಿಂದ 10 ಲಕ್ಷದವರೆಗೆ ಚೀಟಿ ಹಣ ಕಟ್ಟುತ್ತಿದ್ದರು. ಆದ್ರೆ, ಕಳೆದ ನಾಲ್ಕು ದಿನಗಳಿಂದ ಶಂಕರ್ ದಂಪತಿ ಕಚೇರಿ ಖಾಲಿ ಮಾಡಿ ಎಸ್ಕೇಪ್ ಆಗಿದ್ದಾರೆ. ವಂಚನೆಯಿಂದ ಕಂಗಾಲಾಗಿರುವ ಗ್ರಾಹಕರ ಕಣ್ಣೀರು ಹಾಕುತ್ತಿದ್ದು, ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.