ಟಿವಿ9 ಜತೆಗೂಡಿ ಉತ್ತರ ಕರ್ನಾಟಕ ಜನತೆಗೆ ಉದಾತ್ತ ನೆರವು ನೀಡಿದ ತಿಂಡ್ಲು ಬಾಯ್ಸ್​

ಉತ್ತರ ಕರ್ನಾಟಕದ ಜಲಪ್ರಳಯಕ್ಕೆ ಸ್ಪಂದಿಸಬೇಕೆಂದು TV9 ನಿರ್ಧರಿಸಿದ್ದೇ ತಡ ಜನ ಮತ್ತು ಸಂಘ ಸಂಸ್ಥೆಗಳು ಉತ್ತರದ ಜನರಿಗೆ ಉದಾತ್ತರಾಗಿ ನೆರವಾಗಲು ಮುಂದೆ ಬರುತ್ತಿದ್ದಾರೆ. ಶುಕ್ರವಾರ TV9 ಒಂದು ಲಾರಿಯಲ್ಲಿ ಎಣ್ಣೆ, ಬೇಳೆ, ಅಕ್ಕಿ, ಬಿಸ್ಕಿಟ್, ಅಫಜಲಪುರಕ್ಕೆ ಕಳಿಸಿದ ಬೆನ್ನಲ್ಲೇ ಇಂದು ನಗರದ ಸಹಕಾರ ನಗರದ ಹತ್ತಿರದ ತಿಂಡ್ಲು ಬಾಯ್ಸ್​ ಅಸೋಸಿಯೇಶನ್ ಕಡೆಯವರು ಒಂದು ಲಾರಿ ತುಂಬಿದ ರೇಶನ್ ಕಳಿಸಲು ಮುಂದೆ ಬಂದಿದೆ. TV9 ಸಹಕಾರದಲ್ಲಿ ಉತ್ತರ ಕರ್ನಾಟಕದ ಜನರಿಗೆ ನೆರವಾಗಲು ತಿಂಡ್ಲು ಬಾಯ್ಸ್ ಅಸೋಸಿಯೇಶನ್ ರೇಶನ್ ಕಿಟ್ […]

ಟಿವಿ9 ಜತೆಗೂಡಿ ಉತ್ತರ ಕರ್ನಾಟಕ ಜನತೆಗೆ ಉದಾತ್ತ ನೆರವು ನೀಡಿದ ತಿಂಡ್ಲು ಬಾಯ್ಸ್​

Updated on: Oct 24, 2020 | 4:18 PM

ಉತ್ತರ ಕರ್ನಾಟಕದ ಜಲಪ್ರಳಯಕ್ಕೆ ಸ್ಪಂದಿಸಬೇಕೆಂದು TV9 ನಿರ್ಧರಿಸಿದ್ದೇ ತಡ ಜನ ಮತ್ತು ಸಂಘ ಸಂಸ್ಥೆಗಳು ಉತ್ತರದ ಜನರಿಗೆ ಉದಾತ್ತರಾಗಿ ನೆರವಾಗಲು ಮುಂದೆ ಬರುತ್ತಿದ್ದಾರೆ. ಶುಕ್ರವಾರ TV9 ಒಂದು ಲಾರಿಯಲ್ಲಿ ಎಣ್ಣೆ, ಬೇಳೆ, ಅಕ್ಕಿ, ಬಿಸ್ಕಿಟ್, ಅಫಜಲಪುರಕ್ಕೆ ಕಳಿಸಿದ ಬೆನ್ನಲ್ಲೇ ಇಂದು ನಗರದ ಸಹಕಾರ ನಗರದ ಹತ್ತಿರದ ತಿಂಡ್ಲು ಬಾಯ್ಸ್​ ಅಸೋಸಿಯೇಶನ್ ಕಡೆಯವರು ಒಂದು ಲಾರಿ ತುಂಬಿದ ರೇಶನ್ ಕಳಿಸಲು ಮುಂದೆ ಬಂದಿದೆ.

TV9 ಸಹಕಾರದಲ್ಲಿ ಉತ್ತರ ಕರ್ನಾಟಕದ ಜನರಿಗೆ ನೆರವಾಗಲು ತಿಂಡ್ಲು ಬಾಯ್ಸ್ ಅಸೋಸಿಯೇಶನ್ ರೇಶನ್ ಕಿಟ್ ತಯಾರು ಮಾಡಿದೆ. ತಲಾ ಒಂದು ಕಿಟ್​ನಲ್ಲಿ 10 ಕೆ.ಜಿ.ಯಷ್ಟು ಅಕ್ಕಿ, ಬೇಳೆ, ಎಣ್ಣೆ, ಮೈ ಸೋಪು, ಬಟ್ಟೆ ಸೋಪು, ಸಕ್ಕರೆ, ಚಹಾ ಪುಡಿ, ರವಾ, ಉಪ್ಪು, ಮೆಣಸು, ಪೇಸ್ಟ್, ಎರಡು ಅಂಗಿ, ಒಂದು ಪಂಚೆ ಈ ಕಿಟ್ ನಲ್ಲಿ ಇದ್ದು, ಒಂದು ಕುಟುಂಬಕ್ಕೆ 15 ದಿನಕ್ಕೆ ಸಾಕಾಗುವಷ್ಟು ಬೇಳೆ ಕಾಳು ಇದೆ.

ತಾವು ಮಾಡುತ್ತಿರುವ ಸಾಮಾಜಿಕ ಸೇವೆ ಕುರಿತು ವಿವರ ನೀಡಿದ ತಿಂಡ್ಲು ಬಾಯ್ಸ್ ಅಸೋಸಿಯೇಶನ್​ನ ಆನಂದ್ ಅವರು ಕಳೆದ ನಾಲ್ಕೈದು ತಿಂಗಳುಗಳಿಂದ ಲಾಕ್ ಡೌನ್ ಸಮಯದಲ್ಲಿ ಹೇಗೆ ಜನರಿಗೆ ಸಹಾಯ ಮಾಡುತ್ತಿದ್ದೇವೆ ಎಂಬುದರ ವಿವರ ನೀಡಿದರು. ಈ ಸಂದರ್ಭದಲ್ಲಿ 6,000 ಜನರಿಗೆ ಊಟದ ಕಿಟ್ ನೀಡಿದ್ದಾರೆ. ತಮ್ಮ ಸುತ್ತ ಮುತ್ತ ಇರುವ ಕೋವಿಡ್ ಸೋಂಕಿತರಿಗೆ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಸಹಾಯ ಮಾಡಿದ್ದಾರೆ. ಕೋವಿಡ್ ನಿಂದ ಸತ್ತ 18 ಜನರ ಅಂತ್ಯ ಸಂಸ್ಕಾರವನ್ನು ಸ್ವಯಂ ಸೇವಕರು ಮಾಡಿದ್ದಾರೆ.
ಈಗ ಉತ್ತರ ಕರ್ನಾಟಕದ ಜನತೆಗೆ ನೆರವಾಗಲು TV9 ಜತೆ ಕೈ ಜೋಡಿಸಿದ್ದಾರೆ.