ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ ಟಿ.ಜೆ.ಅಬ್ರಾಹಂ ಮುಡಾಗೆ ಭೇಟಿ

| Updated By: ಆಯೇಷಾ ಬಾನು

Updated on: Aug 05, 2024 | 12:09 PM

ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಅವರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಭೇಟಿ ನೀಡಿದ್ದು ಮುಡಾ ಕಮಿಷನರ್ ರಘುನಂದನ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಟಿ.ಜೆ.ಅಬ್ರಾಹಂ ನಡೆ ಕುತೂಹಲ ಮೂಡಿಸಿದೆ.

ಮೈಸೂರು, ಆಗಸ್ಟ್.05: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ (TJ Abraham) ಭೇಟಿ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವ ಟಿ.ಜೆ.ಅಬ್ರಾಹಂ ಅವರು ಮುಡಾ (MUDA) ಕಮಿಷನರ್ ರಘುನಂದನ್ ಭೇಟಿ ಮಾಡಿದ್ದಾರೆ. ಟಿ.ಜೆ.ಅಬ್ರಾಹಂ ನಡೆ ಕುತೂಹಲ ಮೂಡಿಸಿದೆ.

ಇನ್ನು ಈ ವೇಳೆ ಮಾತನಾಡಿದ ಟಿ.ಜೆ.ಅಬ್ರಾಹಂ, ಶೆಟ್ಟರ್, BSY ಬಗ್ಗೆ ಆರೋಪ ಮಾಡಿದರೆ ಆಗ ನನ್ನದು ಸತ್ಯ. ಈಗ ಇವರ ಬಗ್ಗೆ ಮಾತಾಡಿದ್ದಕ್ಕೆ ಬ್ಲ್ಯಾಕ್​ಮೇಲರ್ ಆಗಿದ್ದೇನೆ. ಜಾಲತಾಣದ ಟ್ರೋಲ್ ಪೇಜ್​ಗಳಲ್ಲಿ ನನ್ನನ್ನು ಬೈಯ್ಯುತ್ತಿದ್ದಾರೆ. ಇದು ಸಿದ್ದರಾಮಯ್ಯ ಸೋಲು ಒಪ್ಪಿಕೊಂಡ ರೀತಿ ಅನ್ನಿಸುತ್ತಿದೆ. 2004ರಲ್ಲಿ ಮಲ್ಲಿಕಾರ್ಜುನಸ್ವಾಮಿ ಕೃಷಿ ಭೂಮಿ ಖರೀದಿಸಿದ್ದರು. ಅಲ್ಲಿ ಆಗ ಕೃಷಿ ಭೂಮಿ ಇತ್ತಾ ಎಂದು ಟಿ.ಜೆ.ಅಬ್ರಾಹಂ ಪ್ರಶ್ನೆ ಮಾಡಿದ್ದಾರೆ.

2001ರಲ್ಲಿ ಕೆಸರೆಯಲ್ಲಿ ಅಭಿವೃದ್ಧಿ ಮಾಡಿದ್ದ ಬಡಾವಣೆ ಆಗಿತ್ತು. 2004ರಲ್ಲಿ ಕೃಷಿ ಭೂಮಿ ಅಂತಾ ಹೇಗೆ ಖರೀದಿ ಮಾಡಿದರು?ನಿವೇಶನ ಹಂಚಿದ್ದನ್ನು ಮತ್ತೆ ವಸತಿ ಭೂಮಿ ಎಂದು ಪರಿವರ್ತನೆ ಮಾಡಿದ್ದಾರೆ. ತಮ್ಮ ತಾಯಿಗೆ ಪರಿಹಾರದ ಹೆಸರಿನಲ್ಲಿ ಭೂಮಿ ಸಿಗುವಾಗ ಪ್ರಮುಖ ಸಭೆಗಳಲ್ಲಿ ಯತೀಂದ್ರ ಸಿದ್ದರಾಮಯ್ಯ ಕುಳಿತಿದ್ದರು. ಸಿಎಂ ಕುಟುಂಬಕ್ಕೆ ಮಂಜೂರಾದ 14 ಸೈಟ್ ಹಿಂಪಡೆಯಬೇಕು. ಸೈಟ್ ಕೊಟ್ಟಿರುವುದು ಅಕ್ರಮ, ಅದನ್ನು ವಾಪಸ್​ ಪಡೆಯಿರಿ. ನನ್ನ ಪ್ರಕಾರ ಮುಡಾಗೆ 55 ಕೋಟಿ ರೂಪಾಯಿ ನಷ್ಟವಾಗಿದೆ. ಡಿ.ಕೆ.ಶಿವಕುಮಾರ್​ರಂತಹ ಪರಿಣಿತರು ನನ್ನ ಪ್ರಶ್ನೆಗೆ ಉತ್ತರಿಸಿಲ್ಲ. ಸುಮ್ಮನೆ ಸಿಎಂ ತಪ್ಪು ಮಾಡಿಲ್ಲ ಅಂತಾ ಭಾಷಣ ಮಾಡುತ್ತಿದ್ದಾರೆ. ಇಂತಹ ಕಾರಣಕ್ಕೆ ಪ್ರಾಸಿಕ್ಯೂಷನ್ ಕೊಡಬಾರದು ಅಂತಾ ಹೇಳಿ. ನಾನು ಹೇಳಿರುವುದು ತಪ್ಪು ಅಂತಾ ಸಾಬೀತು ಮಾಡಿ. ತನಿಖೆಗೆ ಪ್ರಾಸಿಕ್ಯೂಷನ್ ಅನುಮತಿ ಸಿಗುತ್ತೆ ಎನ್ನುವ ನಂಬಿಕೆ ಇದೆ ಎಂದು ಮೈಸೂರಿನಲ್ಲಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ತಿಳಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published on: Aug 05, 2024 12:08 PM