NWKRTC Tour Package: ಜಲಪಾತ ಸ್ಥಳಗಳಿಗೆ ವಾಯುವ್ಯ ಸಾರಿಗೆ ಟೂರ್ ಪ್ಯಾಕೇಜ್, ಜನರಿಂದ ಉತ್ತಮ ಪ್ರತಿಕ್ರಿಯೆ

ಮಳೆಗಾಲದಲ್ಲಿ ಜಲತಾಪಗಳನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಕಡಿಮೆ ಶುಲ್ಕದಲ್ಲಿ ಆಗುತ್ತದೆ ಎಂದು ಹೆಚ್ಚಿನವರು ರೈಲುಗಳನ್ನು ಅವಲಂಬಿಸುತ್ತಾರೆ. ಕೆಲವೊಮ್ಮೆ ಟಿಕೆಟ್ ರದ್ದಾಗುತ್ತದೆ. ಇಂತಹ ಸಮಸ್ಯೆ ಅರಿತ NWKRTC, ಜಲಪಾತ ಪ್ರದೇಶಗಳಿಗೆ ಟೂರ್ ಪ್ಯಾಕೇಜ್ ಆರಂಭಿಸಿದೆ.

NWKRTC Tour Package: ಜಲಪಾತ ಸ್ಥಳಗಳಿಗೆ ವಾಯುವ್ಯ ಸಾರಿಗೆ ಟೂರ್ ಪ್ಯಾಕೇಜ್, ಜನರಿಂದ ಉತ್ತಮ ಪ್ರತಿಕ್ರಿಯೆ
ಜೋಗ ಜಲಪಾತ, ಗೋಕಾಕ್ ಜಲಪಾತ, ಅಂಬೋಲಿ ಜಲಪಾತಕ್ಕೆ ವಾಯುವ್ಯ ಸಾರಿಯಿಂದ ಟೂರ್ ಪ್ಯಾಕೇಜ್
Follow us
Rakesh Nayak Manchi
|

Updated on:Jul 24, 2023 | 5:08 PM

ಹುಬ್ಬಳ್ಳಿ, ಜುಲೈ 24: ಮಳೆಗಾಲದಲ್ಲಿ ಜಲಪಾತಗಳನ್ನು ವೀಕ್ಷಣೆ ಮಾಡಲು ಜನರಿಗಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (NWKRTC) ಟೂರ್ ಪ್ಯಾಕೇಜ್ ಆರಂಭಿಸಿದೆ. ಹುಬ್ಬಳ್ಳಿ-ಜೋಗ ಜಲಪಾತ-ಹುಬ್ಬಳ್ಳಿ, ಬೆಳಗಾವಿ-ಗೋಕಾಕ್ ಫಾಲ್ಸ್-ಬೆಳಗಾವಿ ಮತ್ತು ಬೆಳಗಾವಿ-ಅಂಬೋಲಿ-ಬೆಳಗಾವಿ ಪ್ಯಾಕೇಜ್ ಪ್ರವಾಸಗಳನ್ನು ಪ್ರಾರಂಭಿಸಿದೆ.

ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕ ರಾಜೇಶ್ ಹುದ್ದಾರ್ ಮಾತನಾಡಿ, ಜುಲೈ 9 ರಿಂದ ಜೋಗ ಜಲಪಾತಕ್ಕೆ ಒಂದು ವೋಲ್ವೋ ಬಸ್ ಮತ್ತು ಒಂದು ರಾಜಹಂಸ ಬಸ್ ನಿಯೋಜಿಸಲಾಗಿದೆ. ಪ್ರವಾಸದ ವೇಳೆ ಪ್ರಯಾಣಿಕರು ಶಿರಸಿಯ ಮಾರಿಕಾಂಬಾ ದೇವಸ್ಥಾನದಲ್ಲಿ ದೇವಿಯ ದರ್ಶನ ಪಡೆಯಬಹುದಾಗಿದೆ ಎಂದರು.

ಇದನ್ನೂ ಓದಿ: Udupi News: ರೀಲ್ಸ್​ ಮಾಡಲು ಹೋಗಿ ಜಲಪಾತಕ್ಕೆ ಬಿದ್ದು ಯುವಕ ಸಾವು, ನೀರಿಗೆ ಬೀಳುತ್ತಿರುವ ದೃಶ್ಯ ಗೆಳೆಯನ ಮೊಬೈಲ್​ನಲ್ಲಿ ಸೆರೆ

ಬೇಡಿಕೆಗೆ ಸ್ಪಂದಿಸಿ ಜುಲೈ 16 ರಂದು ಎರಡು ವೋಲ್ವೋ ಮತ್ತು ಎರಡು ರಾಜಹಂಸ ಬಸ್ಸುಗಳನ್ನು ಮತ್ತು ಜುಲೈ 23 ರಂದು ಒಂದು ವೋಲ್ವೋ ಮತ್ತು ಎರಡು ರಾಜಹಂಸ ಬಸ್ಸುಗಳನ್ನು ಓಡಿಸಿದ್ದೇವೆ. ಎಲ್ಲಾ ಬಸ್ಸುಗಳು ಭರ್ತಿಯಾಗಿವೆ. ಭಾನುವಾರಗಳ ಹೊರತಾಗಿ, ನಾವು ಸಾರ್ವಜನಿಕ ರಜಾದಿನಗಳಲ್ಲಿಯೂ ಅಂತಹ ಪ್ಯಾಕೇಜ್​ಗಳನ್ನು ನಿರ್ವಹಿಸುತ್ತೇವೆ” ಎಂದು ರಾಜೇಶ್ ಹುದ್ದಾರ್ ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಬೆಳಗಾವಿ ವಿಭಾಗವು ಜುಲೈ 22 ರಿಂದ ಗೋಕಾಕ್ ಜಲಪಾತ ಮತ್ತು ಅಂಬೋಲಿ ಜಲಪಾತಕ್ಕೆ ವಿಶೇಷ ಪ್ಯಾಕೇಜ್ ಗಳನ್ನು ನಿರ್ವಹಿಸುತ್ತಿದೆ ಎಂದು ಅವರು ಹೇಳಿದರು. “ಗೋಕಾಕ್ ಜಲಪಾತದ ವೇಳಾಪಟ್ಟಿಯು ಹಿಡಕಲ್ ಅಣೆಕಟ್ಟು ಮತ್ತು ಗೋಡ್ಚಿನ್ ಮಾಲ್ಕಿಗೆ ಭೇಟಿ ನೀಡುವುದನ್ನು ಒಳಗೊಂಡಿದ್ದರೆ, ಅಂಬೋಲಿ ಜಲಪಾತ ಪ್ಯಾಕೇಜ್ ನಂಗರ್ಟಾ ಜಲಪಾತಕ್ಕೆ ಭೇಟಿಯನ್ನು ಒಳಗೊಂಡಿದೆ. ಈ ಪ್ಯಾಕೇಜ್ಗಳಿಗೆ ಸ್ಪರ್ಧಾತ್ಮಕ ಬೆಲೆಯನ್ನು ನಾವು ಖಚಿತಪಡಿಸಿದ್ದೇವೆ. ಈ ಪ್ರವಾಸ ಪ್ಯಾಕೇಜ್, ಜಲಪಾತಗಳು ಹರಿಯುವವರೆಗೆ ಮಾತ್ರ ಇರಲಿದೆ. ಹೀಗಾಗಿ ಹೆಚ್ಚಿನ ಜನರು ಪ್ಯಾಕೇಜ್​ನ ಅವಕಾಶವನ್ನು ಸುದುಪಯೋಗ ಮಾಡುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:07 pm, Mon, 24 July 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ