Mysuru News: 25 ಲಕ್ಷ ರೂ. ಶುಲ್ಕ ಪಡೆದು ಉಪನ್ಯಾಸಕಿ ನಾಪತ್ತೆ: ಪ್ರವೇಶ ಪತ್ರ ಸಿಗದೆ‌ ಮೈಸೂರಿನ ವಿದ್ಯಾರ್ಥಿಗಳು ಅತಂತ್ರ

200 ವಿದ್ಯಾರ್ಥಿಗಳಿಂದ 25 ಲಕ್ಷ ರೂ. ಶುಲ್ಕ ಪಡೆದು ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕಿ ನಾಪತ್ತೆ ಆರೋಪ ಕೇಳಿಬಂದಿದೆ. ಸದ್ಯ ವರುಣ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಉಪನ್ಯಾಸಕಿಗಾಗಿ ಹುಡುಕಾಟ ನಡೆಸಿದ್ದಾರೆ.

Mysuru News: 25 ಲಕ್ಷ ರೂ. ಶುಲ್ಕ ಪಡೆದು ಉಪನ್ಯಾಸಕಿ ನಾಪತ್ತೆ: ಪ್ರವೇಶ ಪತ್ರ ಸಿಗದೆ‌ ಮೈಸೂರಿನ ವಿದ್ಯಾರ್ಥಿಗಳು ಅತಂತ್ರ
ಪ್ರಾತಿನಿಧಿಕ ಚಿತ್ರ
Follow us
ರಾಮ್​, ಮೈಸೂರು
| Updated By: ಗಂಗಾಧರ​ ಬ. ಸಾಬೋಜಿ

Updated on:Jul 24, 2023 | 5:00 PM

ಮೈಸೂರು, ಜುಲೈ 24: ವಿದ್ಯಾರ್ಥಿಗಳಿಂದ ಶುಲ್ಕ ಪಡೆದು ಉಪನ್ಯಾಸಕಿ (lecturer) ನಾಪತ್ತೆ ಆರೋಪ ಕೇಳಿಬಂದಿದ್ದು, ಹಣವೂ ಇಲ್ಲದೇ, ನಾಳಿನ ಪರೀಕ್ಷೆಗೆ ಪ್ರವೇಶ ಪತ್ರವು ಸಿಗದೆ‌ ವಿದ್ಯಾರ್ಥಿಗಳು ಅತಂತ್ರರಾಗಿರುವಂತಹ ಘಟನೆ ನಗರದ ಬನ್ನೂರು ರಸ್ತೆಯಲ್ಲಿರುವ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದಿದೆ. ಉಪನ್ಯಾಸಕಿ ಹರ್ಷಿತಾ ವಿರುದ್ಧ ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ. ಜು. 6ರಂದೇ ಉಪನ್ಯಾಸಕಿ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಐಪಿಸಿ ಸೆಕ್ಷನ್ 468, 470, 420ರ ಅಡಿ ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಗೂಗಲ್​ಪೇ ಹಾಗೂ ಫೋನ್​ಪೇ ಮೂಲಕ 200 ವಿದ್ಯಾರ್ಥಿಗಳಿಂದ 25 ಲಕ್ಷ ರೂ. ಶುಲ್ಕ ಪಡೆದಿದ್ದು, ವಿದ್ಯಾರ್ಥಿಗಳ ಹಣ ದುರುಪಯೋಗ ಪಡಿಸಿಕೊಂಡಿರುವುದಾಗಿ ಆರೋಪಿಸಲಾಗಿದೆ. ಫೀಸ್​ ಸಂದಾಯವಾಗದ ಹಿನ್ನೆಲೆ ಕಾಲೇಜಿನಲ್ಲಿ ಪ್ರವೇಶಪತ್ರ ನೀಡಲು ನಿರಾಕರಿಸುತ್ತಿದ್ದಾರೆ. ಸದ್ಯ ನಾಪತ್ತೆಯಾಗಿರುವ ಉಪನ್ಯಾಸಕಿ ಹರ್ಷಿತಾಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: ಪ್ರತ್ಯೇಕ ಘಟನೆ: ಪ್ರೇಮ ವೈಫಲ್ಯ, ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ: ವಿಟಿಯು ಕಾರು ಚಾಲಕ ನೇಣಿಗೆ ಶರಣು

ಮನೆಗೆ ನುಗ್ಗಿ ಒಂಟಿ ಮಹಿಳೆ ಮೇಲೆ ಹಲ್ಲೆ: ಸರ ಕಳ್ಳತನ

ನಗರದ ನಂಜನಗೂಡಿನ ಚಾಮಲಾಪುರ ಹುಂಡಿ ಗ್ರಾಮದಲ್ಲಿ ಮನೆಗೆ ನುಗ್ಗಿ ಒಂಟಿ ಮಹಿಳೆ ಮೇಲೆ ಹಲ್ಲೆ ಮಾಡಿ ಸರ ಕಳ್ಳತನ ಮಾಡಿರುವಂತಹ ಘಟನೆ ನಡೆದಿದೆ. ಈ ಕುರಿತಾಗಿ ನಂಜನಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಸವಿತಾ ಸರ ಕಳೆದುಕೊಂಡ ಮಹಿಳೆ. ಮಹಿಳೆ ತಲೆಗೆ ರಾಡಿನಿಂದ ಹಲ್ಲೆ ಮಾಡಿ 30 ಗ್ರಾಂ ಚಿನ್ನದ ಸರ ಕಸಿದು ಪರಾರಿ ಆಗಿದ್ದಾರೆ. ಸದ್ಯ ಗಾಯಾಳು ಸವಿತರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: ನೆಲಮಂಗಲ: ಬೇರೆಯವರ ಜಮೀನು ತೋರಿಸಿ 50 ಲಕ್ಷ ರೂ ಅಡ್ವಾನ್ಸ್ ಪಡೆದು ವಂಚನೆ

ನಾಲ್ಕು ಮನೆಗಳಿಗೆ ಕನ್ನ: ಚಿನ್ನಾಭರಣ ದೋಚಿದ ಖದೀಮರು

ಬೀದರ್​: ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಯಪಳ್ಳಿಯಲ್ಲಿ ಸರಣಿ ಮನೆಗಳ್ಳತನ ನಡೆದಿದೆ. ತಡರಾತ್ರಿ ಎಲ್ಲರೂ ಮಲಗಿದ್ದ ವೇಳೆ ಕಳ್ಳರ ಗ್ಯಾಂಗ್​ ನಾಲ್ಕು ಮನೆಗಳಿಗೆ ಕನ್ನ ಹಾಕಿದ್ದು, ತಡರಾತ್ರಿ 1 ಗಂಟೆಗೆ ಚಿನ್ನಾಭರಣ, ಮೊಬೈಲ್, ಬಂಗಾರದ ಉಂಗುರ, ಹಣವನ್ನು ಖದೀಮರು ದೋಚಿದ್ದಾರೆ. ಹಣ, ಬಂಗಾರ ಕಳೆದುಕೊಂಡ ಬಡ ಮಹಿಳೆಯರು ಕಣ್ಣೀರು ಹಾಕಿದ್ದಾರೆ. ರಾಯಪಳ್ಳಿ ಗ್ರಾಮಕ್ಕೆ ಬಸವಕಲ್ಯಾಣ ಗ್ರಾಮೀಣ ಠಾಣೆ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲನೆ ಮಾಡಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:53 pm, Mon, 24 July 23