ಪ್ರತ್ಯೇಕ ಘಟನೆ: ಪ್ರೇಮ ವೈಫಲ್ಯ, ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ: ವಿಟಿಯು ಕಾರು ಚಾಲಕ ನೇಣಿಗೆ ಶರಣು
ಪ್ರೇಮ ವೈಫಲ್ಯದಿಂದಾಗಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇನ್ನೊಂದು ಮೈಸೂರಿನಲ್ಲಿ ವಿಟಿಯು ವಿವಿ ಕಾರು ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಈ ಪ್ರತ್ಯೇಕ ಘಟನೆಯ ವಿವರ ಇಲ್ಲಿದೆ.
ಬೆಂಗಳೂರು, (ಜುಲೈ.24): ಪ್ರೇಮ ವೈಫಲ್ಯ (love failure) ಹಿನ್ನೆಲೆಯಲ್ಲಿ ಡೆತ್ ನೋಟ್ (Death Note) ಬರೆದಿಟ್ಟ ಯುವಕನೋರ್ವ ಆತ್ನಹತ್ಯೆ (Suicide) ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Bengaluru) ಮಹಾಲಕ್ಷ್ಮಿ ಲೇಔಟ್ನ ಜೆಎಸ್ ನಗರದಲ್ಲಿ ನಡೆದಿದೆ. ನವೀನ್ (27) ಆತ್ಮಹತ್ಯೆ ಮಾಡಿಕೊಂಡು ಯುವಕ. ಮೂಲತಃ ಕೊಳ್ಳೆಗಾಲದ ನವೀನ್, ಬೆಂಗಳೂರಿನಲ್ಲಿ ಬಾಳೆಮಂಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಈ ನಡುವೆ ಆದ ಪ್ರೀತಿಯಲ್ಲಿ ವೈಫಲ್ಯದಿಂದ ಮನನೊಂದು ನಿನ್ನೆ(ಜುಲೈ 23) ರಾತ್ರಿ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಪ್ರಿಯತಮೆ ಹೆಸರನ್ನು ಡೆತ್ ನೋಟ್ ನಲ್ಲಿ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆ ಸಂಬಂಧ ಸ್ಥಳಕ್ಕೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇನ್ನು ಈ ಬಗ್ಗೆ ಆತ್ಮಹತ್ಯೆ ಮಾಡಿಕೊಂಡ ಯುವಕನ ತಾಯಿ ಮಂಗಳಮ್ಮ ಪ್ರತಿಕ್ರಿಯಿಸಿದ್ದು, ಮಗನ ಪ್ರೀತಿ ವಿಚಾರ ಒಂದು ವರ್ಷದ ಹಿಂದೆ ಗೊತ್ತಾಗಿತ್ತು. ಮದುವೆ ಆದ್ರೆ ಆಕೆಯನ್ನೇ ಆಗುವುದಾಗಿ ಹೇಳಿದ್ದ. ಆದ್ರೆ ಆಕೆ ಮದುವೆ ಆಗಲ್ಲ ಎಂದು ಹೇಳಿದ್ದಳು.. ಮದುವೆ ಆದರೆ ಆಕೆಯನ್ನೇ ಆಗೊದು ಎನ್ನುತಿದ್ದ. ನಿನ್ನೆ ಊರಿಂದ ಮನೆಗೆ ಬಂದಿದ್ದ. ನಾವೆಲ್ಲರೂ ಊರಿನಲ್ಲಿದ್ವಿ. ಕೆಲಸ ಅಂತ ಬಂದವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಣ್ಣೀರಿಟ್ಟುರು.
ಕಾರು ಚಾಲಕ ಆತ್ಮಹತ್ಯೆ
ಮೈಸೂರು, (ಜುಲೈ 24): ಮೈಸೂರಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕಾರು ಚಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾನು ವಾಸವಿದ್ದ ಕ್ಯಾಂಪಸ್ ಕೊಠಡಿಯಲ್ಲೇ ಕಾರು ಚಾಲಕ ಮಾನಪ್ಪ(26) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತ ಕಾರು ಚಾಲಕ ಮಾನಪ್ಪ ಯಾದಗಿರಿ ಜಿಲ್ಲೆಯ ನಿವಾಸಿಯಾಗಿದ್ದು, 5 ವರ್ಷದಿಂದ ಸಾತಗಳ್ಳಿ ಬಡಾವಣೆಯಲ್ಲಿರುವ ವಿಟಿಯು ವಿವಿಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಾರು ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಆದ್ರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 9:10 am, Mon, 24 July 23