Namma Metro: 2023 ವರ್ಷಾಂತ್ಯಕ್ಕೆ ಜಯದೇವ ಮಲ್ಟಿ ಲೆವೆಲ್ ಮೆಟ್ರೋ ನಿಲ್ದಾಣ ಕಾರ್ಯಾರಂಭ: ಬಿಎಂಆರ್​ಸಿಎಲ್​

ಬನ್ನೇರುಘಟ್ಟ ರಸ್ತೆಯ ಜಯದೇವ ಆಸ್ಪತ್ರೆ ಬಳಿ ಇರುವ ಮಲ್ಟಿ ಲೆವೆಲ್ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣ ನಗರದ ಅತಿದೊಡ್ಡ ಮೆಟ್ರೋ ನಿಲ್ದಾಣವಾಗಿದೆ. ಈ ನಿಲ್ದಾಣ 2023 ರ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ.

Namma Metro: 2023 ವರ್ಷಾಂತ್ಯಕ್ಕೆ ಜಯದೇವ ಮಲ್ಟಿ ಲೆವೆಲ್ ಮೆಟ್ರೋ ನಿಲ್ದಾಣ ಕಾರ್ಯಾರಂಭ: ಬಿಎಂಆರ್​ಸಿಎಲ್​
ಜಯದೇವ ಮೆಟ್ರೋ ನಿಲ್ದಾಣ
Follow us
ವಿವೇಕ ಬಿರಾದಾರ
|

Updated on: Jul 24, 2023 | 10:59 AM

ಬೆಂಗಳೂರು: ಬನ್ನೇರುಘಟ್ಟ ರಸ್ತೆಯ ಜಯದೇವ ಆಸ್ಪತ್ರೆ (Jayadev Hospital) ಬಳಿ ಇರುವ ಮಲ್ಟಿ ಲೆವೆಲ್ ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣ (Metro Station) ನಗರದ ಅತಿದೊಡ್ಡ ಮೆಟ್ರೋ ನಿಲ್ದಾಣವಾಗಿದೆ. ಈ ನಿಲ್ದಾಣ 2023 ರ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಈ ನಿಲ್ದಾಣವು ಹಳದಿ ಮಾರ್ಗದಲ್ಲಿ (Yellow Line) ಬರುತ್ತದೆ. ಹಳದಿ ಮಾರ್ಗದ ಮೆಟ್ರೋ ರಾಷ್ಟ್ರೀಯ ವಿದ್ಯಾಲಯ ರಸ್ತೆಯಿಂದ ಬೊಮ್ಮಸಂದ್ರ ನಡುವೆ ಸಂಚರಿಸುತ್ತದೆ. ಇನ್ನು ಪಿಂಕ್ ಲೈನ್‌ (Pink Line) ಕಾಳೇನ ಅಗ್ರಹಾರದಿಂದ ನಾಗರವಾರದವರೆಗೆ ಇರುತ್ತದೆ. ಜನಸಂಧಣಿ ಸಮಯದಲ್ಲಿ ಈ ಲೈನ್​ 25 ಸಾವಿರ ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ.

ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ (BMRCL) ಅಧಿಕಾರಿಗಳು ಮಾತನಾಡಿ ನಿಲ್ದಾಣದ ಶೇ.90ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ನಿಲ್ದಾಣ 19,826 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಾಣಗೊಂಡಿದೆ. 2023 ರ ಅಂತ್ಯದ ವೇಳೆಗೆ ಹಳದಿ ಮಾರ್ಗ ಪೂರ್ಣಗೊಳ್ಳಲಿದ್ದು, ಮಾರ್ಚ್ 2025 ರ ವೇಳೆಗೆ ಪಿಂಕ್ ಲೈನ್ ಸಂಚಾರಕ್ಕೆ ಮುಕ್ತವಾಗಲಿದೆ.

ಬಿಎಂಆರ್​ಸಿಎಲ್​ ಎಂಡಿ ಅಂಜುಮ್ ಪರ್ವೇಜ್ ಮಾತನಾಡಿ ಜಯದೇವ ಮೆಟ್ರೋ ನಿಲ್ದಾಣವು ನಮ್ಮ ಮೆಟ್ರೋದ ಎರಡನೇ ಹಂತದ ಅಡಿಯಲ್ಲಿ ನಿರ್ಮಾಣವಾದ ಎರಡು ಹೊಸ ಮಾರ್ಗಗಳ ಭಾಗವಾಗಿದೆ. ಆರ್​ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ ಮಾರ್ಗದಲ್ಲಿ ವರ್ಷಾಂತ್ಯದೊಳಗೆ ಸಂಚಾರ ಆರಂಭವಾಗಲಿದೆ. 19 ಕಿಮೀ ಈ ಮಾರ್ಗದಲ್ಲಿ 16 ನಿಲ್ದಾಣಗಳಿವೆ. ಹಳದಿ ಮಾರ್ಗವು ಡಬಲ್ ಡೆಕ್ಕರ್ ಫ್ಲೈಓವರ್ ಅನ್ನು ಸಹ ಒಳಗೊಂಡಿದೆ. ರಸ್ತೆ ಸಂಚಾರಕ್ಕೆ ಒಂದು ಹಂತ ಮತ್ತು ಮೆಟ್ರೋ ರೈಲುಗಳಿಗೆ ಇನ್ನೊಂದು ಹಂತ. ಇದರಿಂದ ರಾಗಿಗುಡ್ಡ ಕಡೆಯಿಂದ ಬರುವ ಜನರು ನೇರವಾಗಿ ತೆರಳಲು ಅನುಕೂಲವಾಗಲಿದೆ ಎಂದರು.

ಇದನ್ನೂ ಓದಿ: Shakti Scheme: ಶಕ್ತಿ ಯೋಜನೆಯಿಂದ ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ

ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ ಪಿಂಕ್ ಲೈನ್​​ನಲ್ಲಿ ಕಾರ್ಯಾಚರಣೆ ಪ್ರಾರಂಭವಾದ ನಂತರ ಜಯದೇವ ಇಂಟರ್‌ಚೇಂಜ್ ನಿಲ್ದಾಣವು ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು. ಮೆಜೆಸ್ಟಿಕ್​ ಇಂಟರ್‌ಚೇಂಜ್ ನಿಲ್ದಾಣ ಹೊರತುಪಡಿಸಿದರೇ ಜಯದೇವ ನಿಲ್ದಾಣವು ಎರಡನೇ ಇಂಟರ್‌ಚೇಂಜ್ ನಿಲ್ದಾಣವಾಗಲಿದೆ. ಹಳದಿ ಮತ್ತು ಪಿಂಕ್ ಲೈನ್‌ಗಳು ಕಾರ್ಯಾರಂಭವಾದರೇ 80,000 ರಿಂದ 90,000 ಪ್ರಯಾಣಿಕರು ಈ ನಿಲ್ದಾಣವನ್ನು ಬಳಸಬಹುದು ಎಂದು ಹೇಳಿದರು.

3 ಇಂಟರ್‌ಚೇಂಜ್ ನಿಲ್ದಾಣಗಳು

ನಗರದ ಪ್ರಮುಖ ಐಟಿ ಕಾರಿಡಾರ್‌ಗಳಲ್ಲಿ ಒಂದಾದ ಎಲೆಕ್ಟ್ರಾನಿಕ್ಸ್ ಸಿಟಿಗೆ ಲಿಂಕ್ ಮಾಡುವ ಹಳದಿ ಮಾರ್ಗ ಆರಂಭವಾದರೇ, ಬೆಂಗಳೂರಲ್ಲಿ ಮೂರು ಇಂಟರ್‌ಚೇಂಜ್ ಮೆಟ್ರೋ ನಿಲ್ದಾಣಗಳು ಕಾರ್ಯಾರಂಭವಾಗುತ್ತವೆ. ಆರ್‌ವಿ ರಸ್ತೆ ನಿಲ್ದಾಣವು ಮೂರನೇ ಇಂಟರ್‌ಚೇಂಜ್ ನಿಲ್ದಾಣವಾಗಿದೆ. ಇಲ್ಲಿ ಹಳದಿ ಮಾರ್ಗವು ಹಸಿರು ಮಾರ್ಗವನ್ನು (ಸಿಲ್ಕ್ ಇನ್‌ಸ್ಟಿಟ್ಯೂಟ್‌ನಿಂದ ನಾಗಸಂದ್ರ) ಸಂಧಿಸುತ್ತದೆ. ಹಳದಿ ಮಾರ್ಗವನ್ನು ತೆರೆಯುವುದರಿಂದ ಮೆಟ್ರೋ ಪ್ರಯಾಣಿಕರ ಸಂಖ್ಯೆಯನ್ನು 2 ಲಕ್ಷದಷ್ಟು ಆಗುವ ಸಾಧ್ಯತೆ ಇದೆ ಎಂದು ಬಿಎಂಆರ್​ಸಿಎಲ್​ ಅಂದಾಜಿಸಿದೆ.

ಜಯದೇವ ಇಂಟರ್‌ಚೇಂಜ್ ನಿಲ್ದಾಣದ ನಿರ್ಮಾಣಕ್ಕೆ ಬಿಎಂಆರ್​ಸಿಎಲ್​ ಅನೇಕ ಸವಾಲುಗಳನ್ನು ಎದುರಿಸಿತು. ಈ ಪ್ರದೇಶದಲ್ಲಿ ಭೂಸ್ವಾಧೀನವನ್ನು ಕಡಿಮೆ ಮಾಡಲು, BMRCL 10 ವರ್ಷಗಳ ಹಳೆಯ ಮೇಲ್ಸೇತುವೆಯನ್ನು ಕೆಡವಲು ಮತ್ತು 2015-16 ರಲ್ಲಿ ಬಹು-ಹಂತದ ನಿಲ್ದಾಣವನ್ನು ನಿರ್ಮಿಸಲು ನಿರ್ಧರಿಸಿತು. ಇಂಟರ್‌ಚೇಂಜ್ ನಿಲ್ದಾಣದ ವಿನ್ಯಾಸವನ್ನು ಅಂತಿಮಗೊಳಿಸಲು ಸಂಸ್ಥೆಯು ಹಲವು ವರ್ಷಗಳನ್ನು ತೆಗೆದುಕೊಂಡಿತು ಮತ್ತು ಎತ್ತರಿಸಿದ ಮಾರ್ಗವು ಸಿಲ್ಕ್ ಬೋರ್ಡ್ ಕಡೆಗೆ ಹೋಗುತ್ತದೆ.

2020 ರಲ್ಲಿ, ಮೇಲ್ಸೇತುವೆಯನ್ನು ಕೆಡವಲಾಯಿತು. ಈ ಪ್ರದೇಶದಲ್ಲಿನ ನಿರ್ಮಾಣ ಕಾರ್ಯ ಮತ್ತು ದಟ್ಟಣೆಯ ಪರಿಮಾಣವನ್ನು ಪರಿಗಣಿಸಿ, ಅಂತಹ ರಚನೆಯನ್ನು ನಿರ್ಮಿಸುವ ಸವಾಲು ದೊಡ್ಡದಾಗಿತ್ತು. ನಿರ್ಮಾಣ ಕಾರ್ಯವನ್ನು ಸುಲಭಗೊಳಿಸಲು ನಮ್ಮ ಮೆಟ್ರೋದಲ್ಲಿ ಪ್ರೀಕಾಸ್ಟ್ ಡಬಲ್ ಟಿ-ಗರ್ಡರ್‌ಗಳನ್ನು ಮೊದಲ ಬಾರಿಗೆ ಬಳಸಲಾಯಿತು. ಅಂಡರ್‌ಪಾಸ್ ದಾಟಲು ಸ್ಟೀಲ್ ಕಾಂಪೋಸಿಟ್ ಗರ್ಡರ್‌ಗಳನ್ನು ಬಳಸಲಾಗಿದೆ. ಡಬಲ್ ಡೆಕ್ಕರ್ ಮೇಲ್ಸೇತುವೆಯ ಮೇಲಿನ ಕಾರಿಡಾರ್ ಅಂಡರ್‌ಪಾಸ್‌ನಿಂದ 34ಮೀ ಎತ್ತರದಲ್ಲಿರುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್