ಮಾಮೂಲಿ ಕೊಟ್ಟಿಲ್ಲಾ ಅಂತಾ ಕಾನ್ಸ್‌ಟೇಬಲ್ ಮೇಲೆ ACP ಹಲ್ಲೆ?

|

Updated on: Dec 20, 2020 | 2:40 PM

ಪೊಲೀಸ್ ಠಾಣೆಯಲ್ಲೇ ಎಸಿಪಿ M.S.ಹೊಸಮನಿ ಪೇದೆ ಜಗಾಪುರ ಮೇಲೆ ಹಲ್ಲೆ ನಡೆಸಿದ್ದಾರೆ. ಕುಡಿದ ನಶೆಯಲ್ಲಿ ಹಲ್ಲೆ ಮಾಡಿದ್ದಾನೆಂಬ ಆರೋಪ ಕೇಳಿ ಬಂದಿದ್ದು ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಮಾಮೂಲಿ ಕೊಟ್ಟಿಲ್ಲಾ ಅಂತಾ ಕಾನ್ಸ್‌ಟೇಬಲ್ ಮೇಲೆ ACP ಹಲ್ಲೆ?
ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಎಸಿಪಿ ಹಲ್ಲೆ ನಡೆಸುತ್ತಿರುವುದು
Follow us on

ಹುಬ್ಬಳ್ಳಿ: ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಟ್ರಾಫಿಕ್ ಎಸಿಪಿಯಿಂದಲೇ ಹಲ್ಲೆ ನಡೆದಿರುವ ಘಟನೆ ನಡೆದಿದೆ. ಪೊಲೀಸ್ ಠಾಣೆಯಲ್ಲೇ ಎಸಿಪಿ M.S.ಹೊಸಮನಿ ಪೇದೆ ಜಗಾಪುರ ಮೇಲೆ ಹಲ್ಲೆ ನಡೆಸಿದ್ದಾರೆ. ಅಕ್ರಮ ಮರಳು ದಂಧೆಗೆ ಸಂಬಂಧಪಟ್ಟಂತೆ ಮಾಮೂಲಿ ನೀಡೋ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಕೋಪಗೊಂಡ ಎಸಿಪಿ M.S.ಹೊಸಮನಿ ಠಾಣೆ ಆವರಣದಲ್ಲೇ ಎಲ್ಲರೆದುರು ಹಲ್ಲೆ ಮಾಡಿ ದರ್ಪ ಮೆರೆದಿದ್ದಾರೆ.

ಇತ್ತೀಚೆಗಷ್ಟೆ ಅಕ್ರಮ ಮರಳು ದಂಧೆ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಹುಬ್ಬಳ್ಳಿ- ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್ ಸೂಚನೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಮಾಮೂಲಿ ಕಡಿಮೆಯಾಗಿತ್ತು. ಹೀಗಾಗೇ ಕುಪಿತಗೊಂಡ ಎಸಿಪಿ, ಕಾನ್ಸ್‌ಟೇಬಲ್​ಗೆ ಕಪಾಳ ಮೋಕ್ಷ ಮಾಡಿದ್ದಾರೆ. ಕುಡಿದ ನಶೆಯಲ್ಲಿ ಹಲ್ಲೆ ಮಾಡಿದ್ದಾನೆಂಬ ಆರೋಪ ಕೇಳಿ ಬಂದಿದೆ. ಎಸಿಪಿ ವಿರುದ್ಧ ಪೇದೆ ಆಕ್ರೋಶ ವ್ಯಕ್ತಪಡಿಸಿದ್ದು ಹಲ್ಲೆಯ ದೃಶ್ಯ ಟಿವಿ9ಗೆ ಲಭ್ಯವಾಗಿದೆ.

ಈ ಘಟನೆ ಸಂಬಂಧ ಡಿಸಿಪಿ ನೇತೃತ್ವದಲ್ಲಿ ತನಿಖೆ ನಡೆಸಲು ಲಾಬೂರಾಮ್ ಆದೇಶಿಸಿದ್ದಾರೆ. ಸದ್ಯ ಸಮಗ್ರ ವರದಿ ನೀಡಲು ಕ್ರೈಂ-ಟ್ರಾಫಿಕ್ ಡಿಸಿಪಿಗೆ ಹೇಳಿದ್ದೇನೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಟಿವಿ 9ಗೆ ಲಾಬೂರಾಮ್ ತಿಳಿಸಿದ್ದಾರೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಪರಿಚಿತರಿಂದ ಹಲ್ಲೆ: 4 ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವು