ಸುಬ್ರಮಣ್ಯ ಷಷ್ಠಿ: ಸಕ್ಕರೆ ನಾಡಲ್ಲಿ ಹುತ್ತಕ್ಕೆ ಹಾಲೆರೆದಿದ್ದಕ್ಕೆ.. ಬೈಕ್ ಹತ್ತಿದ ನಾಗಪ್ಪ
ಸುಬ್ರಹ್ಮಣ್ಯ ಷಷ್ಠಿ ಹಿನ್ನೆಲೆಯಲ್ಲಿ ಮಂಡ್ಯದ ಮದ್ದೂರು ತಾಲೂಕಿನ ಮಹರ್ನಮಿದೊಡ್ಡಿ ಗ್ರಾಮದಲ್ಲಿ ಭಕ್ತರು ಹುತ್ತಕ್ಕೆ ಹಾಲೆರೆಯುವಾಗ ನಾಗಪ್ಪ ಹುತ್ತದಿಂದ ಹೊರ ಬಂದು ದರ್ಶನ ನೀಡಿದ್ದಾನೆ.
ಮಂಡ್ಯ: ಇಂದು ಎಲ್ಲೆಡೆ ಸುಬ್ರಹ್ಮಣ್ಯ ಷಷ್ಠಿ ಸಂಭ್ರಮ ಮನೆ ಮಾಡಿದೆ. ಸುಬ್ರಹ್ಮಣ್ಯ ದೇವಾಲಯಗಳಲ್ಲಿ ಹಾಗೂ ನಾಗಾರಾಧನೆಯ ತಾಣಗಳಲ್ಲಿ ಇಂದು ನಾಗನಿಗೆ ವಿಶೇಷ ಪೂಜೆ ನೆರವೇರುತ್ತೆ. ಆದರೆ ಸಕ್ಕರೆ ನಾಡು ಮಂಡ್ಯದಲ್ಲಿ ಈ ವಿಶೇಷ ದಿನದಂದೆ ಅಪರೂಪದ ಘಟನೆಯೊಂದು ನಡೆದಿದೆ.
ಸುಬ್ರಹ್ಮಣ್ಯ ಷಷ್ಠಿ ಹಿನ್ನೆಲೆಯಲ್ಲಿ ಮಂಡ್ಯದ ಮದ್ದೂರು ತಾಲೂಕಿನ ಮಹರ್ನಮಿದೊಡ್ಡಿ ಗ್ರಾಮದಲ್ಲಿ ಭಕ್ತರು ಹುತ್ತಕ್ಕೆ ಹಾಲೆರೆಯುವಾಗ ನಾಗಪ್ಪ ಹುತ್ತದಿಂದ ಹೊರ ಬಂದು ದರ್ಶನ ನೀಡಿದ್ದಾನೆ. ಹೊರಗೆ ಬಂದ ಹಾವನ್ನು ನೋಡಿ ಕೆಲ ಕ್ಷಣ ನೆರದಿದ್ದ ಜನ ಭಯ ಭೀತರಾದ್ರು.
ದರ್ಶನ ನೀಡಿದ ಬಳಿಕ ಹಾವು ರಸ್ತೆ ಬದಿಗೆ ಬಂದು ದಾರಿ ಕಾಣದೆ ಅಲ್ಲೇ ನಿಂತಿದ್ದ ಬೈಕ್ ಚಕ್ರಕ್ಕೆ ಹೋಗಿ ಸುತ್ತಿಕೊಂಡಿದೆ. ನಂತರ ಜನರೆಲ್ಲ ದೂರು ಹೋದ ಬಳಿಕ ಬೈಕ್ ಬಿಟ್ಟು ದೂರು ಹೋಗಿದೆ. ರಸ್ತೆಗೆ ಬಂದ ನಾಗಪ್ಪನನ್ನು ಭಕ್ತರು ತಮ್ಮ ಮೊಬೈಲ್ ಕ್ಯಾಮಾರಾದ ಮೂಲಕ ಸೆರೆ ಹಿಡಿದಿದ್ದಾರೆ.
ರಕ್ಷಕನನ್ನೇ ಭಕ್ಷಿಸಿದ ಹಾವು: 1 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಉರಗ ತಜ್ಞ ಸ್ನೇಕ್ ಡ್ಯಾನಿ ಸಾವು