Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಸ್ಟ್ರಾನ್ ಕಾರ್ಮಿಕರು ದೂರು ನೀಡದೆ ದಿಢೀರ್ ಹಾನಿ ಮಾಡ್ತಾರೆ ಅಂದ್ರೆ.. ಇದರ ಹಿಂದೆ ಷಡ್ಯಂತ್ರ ಇದೆ -C.T.ರವಿ

ಸಹಜ ಆಕ್ರೋಶ ಬೇರೆ, ಉದ್ದೇಶಪೂರ್ವಕ ಹಾನಿ ಬೇರೆ. ಕಂಪನಿಯಲ್ಲಿ 470 ಕೋಟಿ ರೂ. ಸಾಮಗ್ರಿ ಹಾನಿ ಆಗಿದೆ. ಇದು ಸಹಜವಾಗಿ ಆಗಿಲ್ಲ, ಉದ್ದೇಶಪೂರ್ವಕ ಇರಬಹುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಕೋಲಾರದ ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದ ಕುರಿತು ರವಿ ಮಾತನಾಡಿದರು.

ವಿಸ್ಟ್ರಾನ್ ಕಾರ್ಮಿಕರು ದೂರು ನೀಡದೆ ದಿಢೀರ್ ಹಾನಿ ಮಾಡ್ತಾರೆ ಅಂದ್ರೆ.. ಇದರ ಹಿಂದೆ ಷಡ್ಯಂತ್ರ ಇದೆ -C.T.ರವಿ
‘ವಿಸ್ಟ್ರಾನ್ ಕಂಪನಿ ದಾಂಧಲೆ ಪ್ರಕರಣ ಸಹಜವಾಗಿ ಆಗಿಲ್ಲ, ಉದ್ದೇಶಪೂರ್ವಕ ಇರಬಹುದು’
Follow us
KUSHAL V
|

Updated on: Dec 20, 2020 | 1:05 PM

ಬೆಂಗಳೂರು: ಸಹಜ ಆಕ್ರೋಶ ಬೇರೆ, ಉದ್ದೇಶಪೂರ್ವಕ ಹಾನಿ ಬೇರೆ. ಕಂಪನಿಯಲ್ಲಿ 470 ಕೋಟಿ ರೂ. ಸಾಮಗ್ರಿ ಹಾನಿ ಆಗಿದೆ. ಇದು ಸಹಜವಾಗಿ ಆಗಿಲ್ಲ, ಉದ್ದೇಶಪೂರ್ವಕ ಇರಬಹುದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಕೋಲಾರದ ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ಹಿಂಸಾಚಾರ ಪ್ರಕರಣದ ಕುರಿತು ರವಿ ಮಾತನಾಡಿದರು.

ಸಿಬ್ಬಂದಿ ದೂರು ನೀಡದೆ, ಧರಣಿ ನಡೆಸದೇ ಹಾನಿ ಮಾಡ್ತಾರೆ. ದಿಢೀರ್ ಹಾನಿ ಮಾಡ್ತಾರೆ ಅಂದ್ರೆ ಅದು ಏನನ್ನು ಸೂಚಿಸುತ್ತೆ. ಇದರ ಹಿಂದೆ ಷಡ್ಯಂತ್ರ ಇದೆ ಎಂದು ಸಿ.ಟಿ.ರವಿ ಹೇಳಿದರು.

‘ಹೊಟ್ಟೆಯಲ್ಲಿ ಉರಿ ಇಟ್ಟುಕೊಂಡವರಿಂದ ಕಾಯ್ದೆಗೆ ವಿರೋಧ’ ಕೃಷಿ ತಿದ್ದುಪಡಿ ಮಸೂದೆಗಳು ರೈತರ ಹಿತ ಕಾಪಾಡುತ್ತವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. MSP ಯಾವುದೇ ಕಾರಣಕ್ಕೂ ರದ್ದಾಗುವುದಿಲ್ಲ. APMC ಜೊತೆ ಖಾಸಗಿ ಮಾರುಕಟ್ಟೆಗಳು ಇರುತ್ತವೆ ಎಂದು ಹೇಳಿದರು.

ದೆಹಲಿಯಲ್ಲಿ ಅಸಹನೆಯ ಹೋರಾಟ ಮುಂದುವರಿಸಿದ್ದಾರೆ. ಹೋರಾಟದಲ್ಲಿ ಬಿಜೆಪಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಆರೋಪ ಮಾಡುತ್ತಿರುವವರಿಗೆ ವೈಯಕ್ತಿಕ ಹಿತಾಸಕ್ತಿಗಳಿವೆ. ರೈತರ ದಾರಿ ತಪ್ಪಿಸುವ ಕೆಲಸ ಮಾಡುವವರು, ಹೊಟ್ಟೆಯಲ್ಲಿ ಉರಿ ಇಟ್ಟುಕೊಂಡವರಿಂದ ಕಾಯ್ದೆಗೆ ವಿರೋಧವಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

‘ಈಗ ಬಿಜೆಪಿ ರೈತ ವಿರೋಧಿ ಎಂದು ಬಿಂಬಿಸಲು ಪ್ರಯತ್ನ ನಡೆಯುತ್ತಿದೆ’ ಮೊದಲು ಪ್ರಧಾನಿ ಮೋದಿಯನ್ನ ಸರ್ವಾಧಿಕಾರಿ ಎಂದು ಕರೆದ್ರು. ಆದ್ರೆ ಅಭಿವೃದ್ಧಿಯ ಮಾದರಿ ಇಟ್ಟುಕೊಂಡು ಅಧಿಕಾರಕ್ಕೆ ಬಂದ್ರು. ಬಿಜೆಪಿ ದಲಿತ ವಿರೋಧಿ ಎಂದು ಅಪಪ್ರಚಾರ ಮಾಡಿದ್ರು. ಆದ್ರೆ ಅಂಬೇಡ್ಕರ್ ಜನ್ಮಸ್ಥಳಕ್ಕೆ ರಾಷ್ಟ್ರೀಯ ಪ್ರಾಮುಖ್ಯತೆ ಕೊಡುವ ಕೆಲಸ ಬಿಜೆಪಿ ಮಾಡಿದೆ ಎಂದು ಸಿ.ಟಿ.ರವಿ ಹೇಳಿದರು.

ಈಗ ಬಿಜೆಪಿ ರೈತ ವಿರೋಧಿ ಎಂದು ಬಿಂಬಿಸಲು ಪ್ರಯತ್ನ ನಡೆಯುತ್ತಿದೆ. ಆದ್ರೆ ಸತ್ಯ ಬೇರೆಯೇ ಇದೆ. ನಮ್ಮ ಸರ್ಕಾರ ರೈತರ ಬದುಕಿನ ಸುಧಾರಣೆಯ ಪರ ಇದೆ. ಕೃಷಿ ಕ್ಷೇತ್ರದಲ್ಲಿ ಮಾರುಕಟ್ಟೆಯ ಸುಧಾರಣೆ ಆಗಬೇಕು. ರೈತ ಜಾಗರಣ ಅಭಿಯಾನ ಪ್ರಾರಂಭಿಸಿದ್ದೇವೆ. ಡಿ.25ರಂದು 1 ಕೋಟಿಗೂ ಹೆಚ್ಚು ರೈತರನ್ನುದ್ದೇಶಿಸಿ ತಾಂತ್ರಿಕತೆಯ ಮೂಲಕ ಮಾತನಾಡುತ್ತಾರೆ ಎಂದು ಸಿ.ಟಿ.ರವಿ ಹೇಳಿದರು.

‘ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸ್ತಿಲ್ಲ.. ಆದ್ರೆ ಅವರು ಪ್ರತಿಭಟನೆ ಮಾಡಿದ್ರೆ ರಾಷ್ಟ್ರದ್ರೋಹಿಗಳೆಂದು ಬಿಂಬಿಸುತ್ತೀರಾ’

ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮ್ಯಾಜಿಸ್ಟ್ರೇಟ್ 50,000 ರೂ. ಲಂಚ ಕೇಳಿದ್ದಕ್ಕೆ ಮರ ಹತ್ತಿದ ವೃದ್ಧೆ!
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಮತ್ತೆ ಜೈಲಿಗೆ ಹೋದ ರಜತ್ ಬಗ್ಗೆ ಕೇಳಿದ್ದಕ್ಕೆ ವಿನಯ್ ಗೌಡ ಹೇಳಿದ್ದೇನು?
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಸಂಪುಟ ಪುನಾರಚನೆ ಹೈಕಮಾಂಡ್ ವಿವೇಚನೆಗೆ ಬಿಟ್ಟ ವಿಷಯವಾಗಿದೆ: ಸಚಿವ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಪುಣೆ ಆಸ್ಪತ್ರೆಯಲ್ಲಿ ಅಂಗವಿಕಲ ನೆಲದಲ್ಲಿ ತೆವಳಿ ಹೋಗುತ್ತಿರುವ ವಿಡಿಯೋ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಮನೋಹರ್, ಹನುಮಂತರಾಯಪ್ಪ, ವೆಂಕಟೇಶ್ ನೇತೃತ್ವದಲ್ಲಿ ಪ್ರತಿಭಟನೆ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಪೋಷಕರಲ್ಲಿ ನಿರಾಳತೆ ಉಂಟು ಮಾಡಿದ ಸರ್ಕಾರದ ನಿರ್ಧಾರ
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಆಟೋಗ್ರಾಫ್ ಕೇಳುವವರೆ ಇರಲಿಲ್ಲ.. ಈಗ ಕ್ಯೂ ನಿಲ್ಲುತ್ತಿದ್ದಾರೆ; ಜಿತೇಶ್
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ಸರ್ಕಾರಗಳು ನಮ್ಮ ಬವಣೆಯನ್ನು ಅರ್ಥಮಾಡಿಕೊಳ್ಳಬೇಕು: ಲಾರಿ ಮಾಲೀಕ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
ವರದಿಯಲ್ಲಿರುವ ಶಿಫಾರಸ್ಸುಗಳನ್ನು ಸರ್ಕಾರ ತಿರಸ್ಕರಿಸಬಹುದಾಗಿದೆ: ಖರ್ಗೆ
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು
Video: ವೇಗವಾಗಿ ಬಂದು ವಾಹನಗಳ ಮೇಲೆ ಹರಿದ ಬಸ್, ಮೂವರು ಸಾವು