Video: ಬೆಂಗಳೂರಿನ ವಾಹನ ದಟ್ಟಣೆ ನಡುವೆ ನಡು ರಸ್ತೆಯಲ್ಲಿ ಹಾಸಿಗೆ ಹಾಕಿ ಮಲಗಿದ ವ್ಯಕ್ತಿ

ವಾಹನ ದಟ್ಟಣೆಯ ನಡುವೆ ನಡು ರಸ್ತೆಯಲ್ಲಿ ವ್ಯಕ್ತಿಯೊಬ್ಬ ಹಾಸಿಗೆ ಹಾಕಿ ಮಲಗಿರುವ ವಿಚಿತ್ರ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಸದಾ ರಸ್ತೆಗಳು ವಾಹನದಿಂದ ತುಂಬಿ ತುಳುಕುತ್ತಿರುತ್ತವೆ. ಟ್ರಾಫಿಕ್ ಅಂತೂ ವಿಪರೀತ. ಇದರ ನಡುವೆ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಹಾಸಿಗೆ ಹಾಕಿ ಮಲಗಿರುವುದು ಹಾಸ್ಯಾಸ್ಪದವೆನಿಸಿದರೂ ಸಾಕಷ್ಟು ಹೊತ್ತು ಸಂಚಾರ ದಟ್ಟಣೆಯುಂಟಾಗಿತ್ತು.

Video: ಬೆಂಗಳೂರಿನ ವಾಹನ ದಟ್ಟಣೆ ನಡುವೆ ನಡು ರಸ್ತೆಯಲ್ಲಿ ಹಾಸಿಗೆ ಹಾಕಿ ಮಲಗಿದ ವ್ಯಕ್ತಿ
ಟ್ರಾಫಿಕ್

Updated on: Sep 18, 2025 | 12:25 PM

ಬೆಂಗಳೂರು, ಸೆಪ್ಟೆಂಬರ್ 18: ವಾಹನ( Vehicle)ದಟ್ಟಣೆಯ ನಡುವೆ ನಡು ರಸ್ತೆಯಲ್ಲಿ ವ್ಯಕ್ತಿಯೊಬ್ಬ ಹಾಸಿಗೆ ಹಾಕಿ ಮಲಗಿರುವ ವಿಚಿತ್ರ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ಸದಾ ರಸ್ತೆಗಳು ವಾಹನದಿಂದ ತುಂಬಿ ತುಳುಕುತ್ತಿರುತ್ತವೆ. ಟ್ರಾಫಿಕ್ ಅಂತೂ ವಿಪರೀತ. ಇದರ ನಡುವೆ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಹಾಸಿಗೆ ಹಾಕಿ ಮಲಗಿರುವುದು ಹಾಸ್ಯಾಸ್ಪದವೆನಿಸಿದರೂ ಸಾಕಷ್ಟು ಹೊತ್ತು ಸಂಚಾರ ದಟ್ಟಣೆಯುಂಟಾಗಿತ್ತು.

ಕಾಲಿನ ಮೇಲೆ ಕಾಲು ಹಾಕಿ ಫೋಮ್ ಹಾಸಿಗೆಯಲ್ಲಿ ವ್ಯಕ್ತಿಯೊಬ್ಬ ರಸ್ತೆ ಮೇಲೆ ಮಲಗಿದ್ದ, ಆತನ ಎದುರು ಒಂದು ಕಾರು ಪಕ್ಕದಲ್ಲಿ ಬಸ್ ಇರುವುದನ್ನು ಕಾಣಬಹುದು. ವ್ಯಕ್ತಿ ಸಂಚಾರ ನಿಯಮವನ್ನು ಉಲ್ಲಂಘಿಸಿದ್ದಾನೆ. ಪ್ರಯಾಣಿಕರು ಮತ್ತು ಫುಟ್ಬಾತ್​ನಲ್ಲಿ ಹೋಗುವವರು ದೃಶ್ಯಗಳನ್ನು ನೋಡಿ ದಿಗ್ಭ್ರಮೆಗೊಂಡಿದ್ದರು. ಒಬ್ಬರು ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ, ಆತ ರಸ್ತೆಯಲ್ಲಿ ಮಲಗಿದ್ದರಿಂದ ಉಂಟಾದ ಸಂಚಾರ ದಟ್ಟಣೆಯನ್ನು ತೋರಿಸಿದ್ದಾರೆ.

ಎಕ್ಸ್​ ಪೋಸ್ಟ್​ನಲ್ಲಿ ಸಾಕಷ್ಟು ಕಮೆಂಟ್​ಗಳು ಬಂದಿವೆ. ಇಂತಹ ನಡವಳಿಕೆಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ.ಆ ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥನೋ ಅಥವಾ ಉದ್ದೇಶಪೂರ್ವಕವಾಗಿ ಈ ರೀತಿ ನಡೆದುಕೊಂಡಿದ್ದಾನೋ ತಿಳಿದಿಲ್ಲ, ಅದು ಆತನ ಜೀವಕ್ಕೆ ಅಪಾಯವನ್ನುಂಟು ಮಾಡುವುದರ ಜತೆಗೆ ಇತರರಿಗೂ ಹಾನಿ ಮಾಡಬಹುದು.

ಎಕ್ಸ್​ ಪೋಸ್ಟ್​

ಒಂದು ವಾಹನ ಆಕಸ್ಮಿಕವಾಗಿ ಅವನಿಗೆ ಡಿಕ್ಕಿ ಹೊಡೆದರೆ, ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು, ಚಾಲಕನೋ ಅಥವಾ ಈ ವ್ಯಕ್ತಿಯೋ ಎಂದು ಕೇಳಿದ್ದಾರೆ. ವೈರಲ್ ಆದ ವಿಡಿಯೋಗೆ ಪ್ರತಿಕ್ರಿಯಿಸಿದ ಬೆಂಗಳೂರು ಪೊಲೀಸರು, ಘಟನೆಯ ನಿಖರವಾದ ಸ್ಥಳದ ಮಾಹಿತಿ ನೀಡಲು ಕೇಳಿದ್ದಾರೆ. ವೀಡಿಯೊದ ಸಹಾಯದಿಂದ ಸ್ಥಳ ಮತ್ತು ಇತರ ವಿವರಗಳನ್ನು ಕಂಡುಹಿಡಿಯುವುದು ಅವರ ಕೆಲಸ ಎಂದು ಹೇಳಿದ್ದಾರೆ.

ಮತ್ತಷ್ಟು ಓದಿ:
Viral: ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ದೊಡ್ಡ ಸಮಸ್ಯೆ, ವರ್ಕ್ ಫ್ರಮ್ ಹೋಮ್ ಆಪ್ಷನ್ ಕೊಡಿ ಎಂದ ಮಹಿಳೆ

ಆ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಜನರು ಒತ್ತಾಯಿಸುತ್ತಿದ್ದಾರೆ ಮತ್ತು ಟ್ರಾಫಿಕ್ ಪೊಲೀಸರ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ಭುಗಿಲೆದ್ದಿದೆ.

 

ಕರ್ನಾಟಕದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ