ವಾಹನ ಚೆಕ್ಕಿಂಗ್ ವೇಳೆ ಅಪಘಾತ; ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಕಾಲಿನ‌‌ ಮೂಳೆ ಕಟ್

ಬೈಕ್ ಸವಾರರು ತ್ರಿಬಲ್ ರೈಡ್ ಬರುತ್ತಿದ್ದ ವೇಳೆ, ವಾಹನದ ಫೋಟೊ ಕ್ಲಿಕ್ ಮಾಡಲು ಮುಂದಾಗಿದ್ದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಬಳಿ ಬೈಕ್​ ಬಂದಿದ್ದು, ಇದರಿಂದಾಗಿ ಸ್ವಲ್ಪ ಹಿಂದಕ್ಕೆ ಸರಿದಿದ್ದಾರೆ. ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ಮತ್ತೊಂದು ಟೂ ವೀಲರ್ ರಭಸವಾಗಿ ಬಿಸ್ನಾಳ್ ಅವರಿಗೆ ಗುದ್ದಿದೆ.

ವಾಹನ ಚೆಕ್ಕಿಂಗ್  ವೇಳೆ ಅಪಘಾತ; ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಕಾಲಿನ‌‌ ಮೂಳೆ ಕಟ್
ಟ್ರಾಫಿಕ್ ಠಾಣೆಯ ಕಾನ್ಸ್‌ಟೇಬಲ್ ಯಲ್ಲಾಲಿಂಗ್ ಬಿಸ್ನಾಳ್
Edited By:

Updated on: Jul 20, 2021 | 12:10 PM

ಬೆಂಗಳೂರು: ವಾಹನ ಚೆಕ್ಕಿಂಗ್​ ವೇಳೆ ಅಪಘಾತ ಸಂಭವಿಸಿದ್ದು, ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಕಾಲಿನ‌‌ ಮೂಳೆ ಕಟ್​ ಆಗಿದೆ. ಚಾಮರಾಜಪೇಟೆ ಮುಖ್ಯರಸ್ತೆ ಬಳಿ ಚೆಕ್ಕಿಂಗ್​ ಮಾಡುವಾಗ ಈ ಘಟನೆ ನಡೆದಿದ್ದು, ಬಸವನಗುಡಿ ಟ್ರಾಫಿಕ್ ಠಾಣೆಯ ಕಾನ್ಸ್‌ಟೇಬಲ್ ಯಲ್ಲಾಲಿಂಗ್ ಬಿಸ್ನಾಳ್ ಅವರ ಕಾಲಿನ ಮೂಳೆ ಕಟ್​ ಆಗಿದೆ. ಬೈಕ್ ಸವಾರರು ತ್ರಿಬಲ್ ರೈಡ್ ಬರುತ್ತಿದ್ದ ವೇಳೆ, ವಾಹನದ ಫೋಟೊ ಕ್ಲಿಕ್ ಮಾಡಲು ಮುಂದಾಗಿದ್ದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಬಳಿ ಬೈಕ್​ ಬಂದಿದ್ದು, ಇದರಿಂದಾಗಿ ಸ್ವಲ್ಪ ಹಿಂದಕ್ಕೆ ಸರಿದಿದ್ದಾರೆ.

ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ಮತ್ತೊಂದು ಟೂ ವೀಲರ್ ರಭಸವಾಗಿ ಬಿಸ್ನಾಳ್ ಅವರಿಗೆ ಗುದ್ದಿದೆ. ಈ ಪರಿಣಾಮ ಬಿಸ್ನಾಳ್ ಅವರ ಬಲಗಾಲಿನ ಮೂಳೆ ಕಟ್ ಆಗಿದೆ. ಸದ್ಯ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಬಿಸ್ನಾಳ್ ಅವರನ್ನು ಹಾಸ್ಮಟ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಟ್ಯಾಂಕರ್ ಮತ್ತು ಕಾರಿನ ಮಧ್ಯೆ ಡಿಕ್ಕಿ
ಟ್ಯಾಂಕರ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ನಾಲ್ವರು ಮೃತಪಟ್ಟ ಘಟನೆ ಕಲಬುರಗಿ ತಾಲೂಕಿನ ಕೋಟನೂರು ಬಳಿ ನಡೆದಿದೆ. ಕಲಬುರಗಿ ನಗರದ ನಿವಾಸಿಗಳಾದ ರಾಹುಲ್(25), ಖಾಸಿಂ(26), ಉಲ್ಲಾಸ್(26) ಸೇರಿ ನಾಲ್ವರ ಮೃತಪಟ್ಟಿದ್ದಾರೆ. ಮತ್ತೋರ್ವನಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ರಾತ್ರಿ ಒಂದು ಗಂಟೆ ಸಮಯದಲ್ಲಿ ಟ್ಯಾಂಕರ್ ಮತ್ತು ಕಾರಿನ ನಡುವೆ ದುರಂತ ಸಂಭವಿಸಿದೆ. ಕಾರು ಜೇವರ್ಗಿ ಕಡೆಯಿಂದ ಕಲಬುರಗಿಗೆ ಬರುತ್ತಿತ್ತು. ಹಾಗೂ ಟ್ಯಾಂಕರ್ ಕಲಬುರಗಿಯಿಂದ ಜೇವರ್ಗಿ ಕಡೆ ತೆರಳುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ಇನ್ನು ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು ಮೂವರ ಗುರುತು ಪತ್ತೆಯಾಗಿದೆ. ಇನ್ನೋರ್ವ ಮೃತನ ಗುರುತು ಪತ್ತೆ ಮಾಡಲಾಗುತ್ತಿದೆ. ಕಲಬುರಗಿ ನಗರ ಸಂಚಾರಿ 2 ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ:
Bus Accident: ಪಾಕಿಸ್ತಾನದಲ್ಲಿ ಭೀಕರ ಬಸ್ ಅಪಘಾತ; 30 ಜನರು ಸಾವು, 40 ಜನರಿಗೆ ಗಂಭೀರ ಗಾಯ

Afterlife Journey: ’ಅರೆ ಪ್ರಜ್ಞೆಯಲ್ಲಿದ್ದಾಗ ಸಾವಿನ ನಂತರದ ಬದುಕನ್ನು ಕಂಡೆ’ ಕಾರು ಅಪಘಾತದಿಂದ ಗಂಭೀರ ಸ್ಥಿತಿಯಲ್ಲಿದ್ದ​ ಅಧಿಕಾರಿ ಬಿಚ್ಚಿಟ್ಟ ರೋಚಕ ಅನುಭವ

TV9 Web

TV9 Kannada

Read More
Loading...
Unable to load recommendations.
Follow Us