ಕರ್ನಾಟಕದಲ್ಲಿ ಸಂಚಾರ ನಿಯಮ ಉಲ್ಲಂಘನೆಗಳನ್ನು ವರ್ಗೀಕರಿಸಿದ ಟ್ರಾಫಿಕ್ ಪೊಲೀಸರು
ಕರ್ನಾಟಕ ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆಗಳನ್ನ ಟ್ರಾಫಿಕ್ ಪೊಲೀಸರು ಎರಡು ವರ್ಗಗಳಾಗಿ ವರ್ಗೀಕರಿಸಿದ್ದಾರೆ. ಈ ಬಗ್ಗೆ ಸಂಚಾರ ಮತ್ತು ರಸ್ತೆ ಸುರಕ್ಷತೆ ಹೆಚ್ಚುವರಿ ಪೊಲೀಸ್ ನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ಅವರು ಆದೇಶಿಸಿದ್ದಾರೆ. ವರ್ಗ 1 ರಲ್ಲಿ ಗುರುತಿಸಿರುವ ಉಲ್ಲಂಘನೆಗಳು ಗುರುತರವಾಗಿರುತ್ತದೆ.
ಕರ್ನಾಟಕದಲ್ಲಿ ಸಂಚಾರ ನಿಯಮ ಉಲ್ಲಂಘನೆಗಳನ್ನು ವರ್ಗೀಕರಿಸಿದ ಟ್ರಾಫಿಕ್ ಪೊಲೀಸರು (ಸಾಂದರ್ಭಿಕ ಚಿತ್ರ)
ಬೆಂಗಳೂರು, ಡಿ.16: ಕರ್ನಾಟಕ ರಾಜ್ಯದಲ್ಲಿ ಸಂಚಾರ ನಿಯಮ ಉಲ್ಲಂಘನೆಗಳನ್ನ (Traffic Violations) ಟ್ರಾಫಿಕ್ ಪೊಲೀಸರು ಎರಡು ವರ್ಗಗಳಾಗಿ ವರ್ಗೀಕರಿಸಿದ್ದಾರೆ. ಈ ಬಗ್ಗೆ ಸಂಚಾರ ಮತ್ತು ರಸ್ತೆ ಸುರಕ್ಷತೆ ಹೆಚ್ಚುವರಿ ಪೊಲೀಸ್ ನಿರ್ದೇಶಕ ಸೀಮಂತ್ ಕುಮಾರ್ ಸಿಂಗ್ ಅವರು ಆದೇಶಿಸಿದ್ದಾರೆ. ವರ್ಗ 1 ರಲ್ಲಿ ಗುರುತಿಸಿರುವ ಉಲ್ಲಂಘನೆಗಳು ಗುರುತರವಾಗಿದ್ದು, ಇವುಗಳಿಗೆ ಈ ನಿಯಮ ಉಲ್ಲಂಘನೆಗೆ ಪ್ರಥಮ ಅದ್ಯತೆ ನೀಡಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವರ್ಗ-1 ರಲ್ಲಿ ನಿಯಮ ಉಲ್ಲಂಘನೆಗಳು
ಮದ್ಯಪಾನ ಮಾಡಿ ಚಾಲನೆ
ಅತೀ ವೇಗ ಚಾಲನೆ
ಅಜಾಗರೂಕ ಚಾಲನೆ
ವಾಹನ ಚಾಲನೆ ಮಾಡುವಾಗ ಮೊಬೈಲ್ ಫೋನ್ ಬಳಸುವುದು
ಜಂಪಿಂಗ್ ಟ್ರಾಫಿಕ್ ಸಿಗ್ನಲ್
ಫ್ರೀ ವಿಲ್ಹಿಂಗ್
ರೇಸಿಂಗ್ ಮತ್ತು ವೇಗದ ಪ್ರಯೋಗ
ಶಿಸ್ತು ಪಥ ಚಾಲನೆ ಮಾಡದೇ ಇರುವುದು
ಜಿಗ್ ಜಾಗ್ (ಅಡ್ಡಾದಿಡ್ಡಿ) ವಾಹನ ಚಾಲನೆ
ಹೆದ್ದಾರಿಗಳಲ್ಲಿ ಅಡ್ಡಾದಿಡ್ಡಿ ಮತ್ತು ಅಪಾಯಕಾರಿ ರೀತಿಯಲ್ಲಿ ವಾಹನಗಳನ್ನು ನಿಲ್ಲಿಸುವುದು
ವಾಹನಗಳನ್ನು ತಪ್ಪು ಮತ್ತು ಅಪಾಯಕಾರಿ ರೀತಿಯಲ್ಲಿ ನಿಲ್ಲಿಸುವುದು
ಇಂಟರ್ ಸೆಕ್ಷನ್‌ನಲ್ಲಿ ವಾಹನ ನಿಲುಗಡೆ
ಬಿ.ಎಂ.ಟಿ.ಸಿ ನಿಲ್ದಾಣದಲ್ಲಿ ಇತರೆ ವಾಹನಗಳ ನಿಲುಗಡೆ ಮಾಡುವುದು