ಆ್ಯಂಬುಲೆನ್ಸ್​ ಟ್ರಾಫಿಕ್ ದಟ್ಟಣೆಯಲ್ಲಿ ಸಿಲುಕದಿರಲು ಹೊಸ ಮಾರ್ಗ: ಸಂಚಾರಿ ಪೊಲೀಸರಿಂದ ನೂತನ ಆ್ಯಪ್ ಸಿದ್ಧತೆ

ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಇಡೀ ವರ್ಡ್ಗೆ ಫೇವಸ್. ಕಿಲೋ ಮೀಟರ್ ಗಟ್ಟಲೇ ಜಾಮ್. ಗಟ್ಟೆಗಟ್ಟಲೇ ಟ್ರಾಫಿಕ್ ಗೆ ರಾಜಧಾನಿಯ ಜನ ಹೈರಾಣಗಿದ್ದಾರೆ.‌ ಕಾರು, ಬೈಕ್, ಬಸ್​ಗಳು ಮಾತ್ರವಲ್ಲದೇ ಆ್ಯಂಬುಲೆನ್ಸ್​ಗಳು ಜಾಮ್ ನಲ್ಲಿ ಸಿಲುಕಿ ರೋಗಿಗಳು ಪರದಾಡ್ತಿದ್ದಾರೆ.‌ ಸರಿಯಾದ ಸಮಯಕ್ಕೆ ಆಸ್ಪತ್ರೆ ತಲುಪಲಾಗದೇ ಜೀವವೂ ಹೋಗ್ತಿದೆ. ಈ ಸಮಸ್ಯೆಗೆ ಮುಕ್ತಿ ಹಾಡಲು ಟ್ರಾಫಿಕ್ ಪೊಲೀಸರು ಭರ್ಜರಿ ಪ್ಲಾನ್ ಮಾಡಿದ್ದಾರೆ. ಆ್ಯಂಬುಲೆನ್ಸ್ ಗಳ ಸುಗಮ ಸಂಚಾರಕ್ಕಾಗಿಯೇ ಪ್ರತ್ಯೇಕ ಆ್ಯಪ್ ಸಿದ್ಧಪಡಿಸ್ತಿದ್ದಾರೆ.

ಆ್ಯಂಬುಲೆನ್ಸ್​ ಟ್ರಾಫಿಕ್ ದಟ್ಟಣೆಯಲ್ಲಿ ಸಿಲುಕದಿರಲು ಹೊಸ ಮಾರ್ಗ: ಸಂಚಾರಿ ಪೊಲೀಸರಿಂದ ನೂತನ ಆ್ಯಪ್ ಸಿದ್ಧತೆ
ಟ್ರಾಫಿಕ್​ನಲ್ಲಿಸಿಲುಕಿರುವ ಆ್ಯಂಬುಲೆನ್ಸ್
Follow us
| Updated By: ಆಯೇಷಾ ಬಾನು

Updated on: Dec 12, 2023 | 7:26 AM

ಬೆಂಗಳೂರು, ಡಿ.12: ಆ್ಯಂಬುಲೆನ್ಸ್​ಗಳು (Ambulance) ಅದೆಷ್ಟೋ ಜನರ ಪಾಲಿಗೆ ಮರುಜನ್ಮ ನೀಡಿದೆ. ಆ್ಯಂಬುಲೆನ್ಸ್ ಚಾಲಕರು ಪರರ ಪ್ರಾಣಕ್ಕಾಗಿ ತಮ್ಮ ಜೀವವನ್ನೇ ಪಣಕ್ಕಿಡ್ತಿದ್ದಾರೆ. ಉಸಿರು ಹೋಗುವ ಜೀವಗಳಿಗೆ ಮರುಜನ್ಮ ಸಿಗ್ತಿದೆ. ಆದರೆ ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗಿರುವ ಟ್ರಾಫಿಕ್ ರೋಗಿಗಳ ಜೀವಕ್ಕೆ ಆಪತ್ತು ತರ್ತಿದೆ (Bengaluru Traffic). ಸೈರನ್​​​ ಎಷ್ಟೇ ಕೂಗಿದ್ರು ಟ್ರಾಫಿಕ್ ಜಾಮ್ ಮಾತ್ರ ಕಮ್ಮಿಯಾಗ್ತಿಲ್ಲ. ಹೀಗಾಗಿ ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಬೆಂಗಳೂರು ಸಂಚಾರ ಪೊಲೀಸರು ಹೊಸ ಉಪಾಯ ಕಂಡುಕೊಳ್ತಿದ್ದಾರೆ. ನೂತನ ಆ್ಯಪ್‌ ಸಿದ್ಧಪಡಿಸುತ್ತಿದ್ದಾರೆ ಇದಕ್ಕೆ ಚಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.

ಆ್ಯಂಬುಲೆನ್ಸ್ ಸುಗಮ‌ ಸಂಚಾರಕ್ಕೆ ಆ್ಯಪ್

  • ಮೊದಲು ಆ್ಯಂಬುಲೆನ್ಸ್ ಎಲ್ಲಿಂದ ಎಲ್ಲಿಗೆ ಹೋಗುತ್ತೆ ಅಂತ ಮಾಹಿತಿ ಅಪ್ಲೋಡ್
  • ಅಪ್ಲೋಡ್ ಆದ ಮಾಹಿತಿ ಸಂಚಾರ ನಿರ್ವಹಣ ಕೇಂದ್ರ ಸಿಬ್ಬಂದಿ ಪರಿಶೀಲನೆ
  • ಪರಿಶೀಲಿಸಿ ಸೂಕ್ತ ರಸ್ತೆ ಸೂಚಿಸುವ ವ್ಯವಸ್ಥೆ ಮಾಡಲಾಗುತ್ತದೆ
  • ಒಂದೇ ಸಿಗ್ನಲ್‌ನಲ್ಲಿ 60 ಸೆಕೆಂಡ್‌ಗೂ ಹೆಚ್ಚು ಕಾಲ ನಿಂತಿದ್ದರೆ ಅಲರ್ಟ್ ಮೆಸೇಜ್
  • ಮುಂದಿನ ಸಿಗ್ನಲ್‌ಗೆ ಮೊದಲೇ ಮಾಹಿತಿ ನೀಡಿ ದಟ್ಟಣೆ ಕಡಿಮೆ ಮಾಡಿಸಲಾಗುತ್ತೆ

    ಮೊದಲು ಆ್ಯಂಬುಲೆನ್ಸ್‌ಗಳು ಯಾವ ಸ್ಥಳದಿಂದ ಯಾವ ಸ್ಥಳಕ್ಕೆ ಹೋಗಬೇಕು ಎಂಬ ಮಾಹಿತಿಯನ್ನು ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಿಬೇಕು. ಅದನ್ನು ಸಂಚಾರ ನಿರ್ವಹಣ ಕೇಂದ್ರ ಸಿಬ್ಬಂದಿ ಪರಿಶೀಲಿಸುತ್ತಾರೆ. ಅವರ ಟ್ರಾಫಿಕ್ ಇಲ್ಲದ ರಸ್ತೆಯನ್ನು ಸೂಚಿಸುತ್ತಾರೆ. ಹಾಗೆಯೇ ಒಂದೇ ಸಿಗ್ನಲ್‌ನಲ್ಲಿ 60 ಸೆಕೆಂಡ್‌ಗೂ ಹೆಚ್ಚು ಕಾಲ ನಿಂತಿದ್ದರೆ. ಆ್ಯಂಬುಲೆನ್ಸ್‌ ಸಂಚರಿಸುವ ಮುಂದಿನ ಸಿಗ್ನಲ್‌ಗೆ ಮೊದಲೇ ಮಾಹಿತಿ ನೀಡಲಾಗುತ್ತೆ. ಅಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುತ್ತೆ.

    ಇದನ್ನೂ ಓದಿ: ಬಿಜೆಪಿ ಸರ್ಕಾರದ ಅವಧಿಯ ಕಾಮಗಾರಿಗಳ ಕುರಿತ ತನಿಖೆಗೆ ಕರ್ನಾಟಕ ಹೈಕೋರ್ಟ್ ತಡೆ

    ಸಿಲಿಕಾನ್ ಸಿಟಿಯಲ್ಲಿ ದಿನಕ್ಕೆ ಮೂರು ಸಾವಿರಕ್ಕೂ ಹೆಚ್ಚು ಆ್ಯಂಬುಲೆನ್ಸ್ ಗಳ ಓಡಾಟ ಮಾಡ್ತಿವೆ. ಆದರೆ ನಗರದಲ್ಲಿ ಅಧಿಕವಾಗ್ತಿರುವ ವಾಹನಗಳ ಸಂಖ್ಯೆಯಿಂದ ಜಾಮ್ ನಲ್ಲಿ ಸಿಲುಕಿ ಎಷ್ಟೋ ರೋಗಿಗಳಿಗೆ ತೊಂದರೆಯಾಗ್ತಿದೆ. ಹೀಗಾಗಿ ಆ್ಯಂಬುಲೆನ್ಸ್ ಗಳ ಸುಗಮ ಸಂಚಾರಕ್ಕೆ ನೂತನ ಆ್ಯಪ್‌ ಸಿದ್ಧಪಡಿಸಲಾಗ್ತಿದೆ. ಈ ಬಗ್ಗೆ ಆ್ಯಪ್‌ ಡೆವಲಪರ್‌ಗಳ ಜೊತೆಯೂ ಒಂದು ಸುತ್ತಿನ ಚರ್ಚೆ ಯಾಗಿದೆ. ಸದ್ಯದಲ್ಲಿ ಆ್ಯಪ್ ಲಾಂಚ್ ಆಗಲಿದೆ ಎಂದು ಜಂಟಿ ಪೋಲಿಸ್ ಆಯುಕ್ತ ಅನುಚೇತ್ ತಿಳಿಸಿದ್ದಾರೆ.

    ಒಟ್ನಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಪರದಾಡ್ತಿದ್ದ ಆ್ಯಂಬುಲೆನ್ಸ್ ಗಳ ಸಮಸ್ಯೆಗೆ ಮುಕ್ತಿ ಹಾಡಲು ಹೊಸ ಆ್ಯಪ್ ಏನೋ ಸಿದ್ಧವಾಗ್ತಿದೆ. ಆದರೆ ಹೆಚ್ಚುತ್ತಿರುವ ವಾಹನಗಳಿಂದ ಆ್ಯಪ್ ನಿಂದ ಟ್ರಾಫಿಕ್ ಜಾಮ್ ಗೆ ಮುಕ್ತಿ ಸಿಗುತ್ತಾ, ಅಥವಾ ಅದೇ ಪರಿಸ್ಥಿತಿ ಇರುತ್ತೋ ಎಂದು ಕಾದುನೋಡಬೇಕಿದೆ.

    ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ರಾಜೀನಾಮೆ ನೀಡದಂತೆ ಸಿಎಂ ಸಿದ್ದರಾಮಯ್ಯಗೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ವಿಡಿಯೋ: ವೀಕೆಂಡ್​ನಲ್ಲಿ ಅಭಿಮಾನಿಗಳ ಭೇಟಿ ಮಾಡಿದ ಧ್ರುವ ಸರ್ಜಾ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ರೀಲ್ಸ್​ ಹುಚ್ಚು, 10ಮೀ. ಎತ್ತರದ ಸೈನ್‌ಬೋರ್ಡ್ ಮೇಲೆ ಯುವಕನ ಸಾಹಸ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
ಬಿಜೆಪಿಯಲ್ಲಿ ತೀವ್ರಗೊಂಡ ವಿಜಯೇಂದ್ರ ಹಠಾವೋ ಹೋರಾಟ
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
CPL 2024: ಫಾಫ್ ಡುಪ್ಲೆಸಿಸ್ ಸ್ಪೋಟಕ ಬ್ಯಾಟಿಂಗ್: ಆದರೂ ಸೋತರು..!
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ನೇರ ಪ್ರಸಾರದಲ್ಲಿ ಅಳುತ್ತಾ ಸುದ್ದಿ ಓದಿದ​​ ಆ್ಯಂಕರ್​; ಕಾರಣ ಏನು ಗೊತ್ತಾ?
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
ಮಂಗಳೂರಿನ ಕಾಲೇಜಿನಲ್ಲಿ ಓಣಂ ಸಂಭ್ರಮ; ಕುಣಿದು ಕುಪ್ಪಳಿಸಿದ ವಿದ್ಯಾರ್ಥಿಗಳು
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ