AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಸಂಚಾರಿ ಪೊಲೀಸರೊಂದಿಗೆ ಕೈ ಜೋಡಿಸಿದ ಐಐಎಸ್​ಸಿ

ಬೆಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಭಾರತೀಯ ವಿಜ್ಞಾನ ಸಂಸ್ಥೆ ಸಂಚಾರಿ ಪೊಲೀಸರೊಂದಿಗೆ ಕೈಜೋಡಿಸಿದೆ. ಸಂಚಾರಿ ಪೊಲೀಸರು ಸಂಗ್ರಹಿಸಿರುವ ದತ್ತಾಂಶ ಬಳಸಿ IISC ಸಂಶೋಧನೆ ನಡೆಸಿ ಸಂಚಾರಿ ಪೊಲೀಸರಿಗೆ ಸಲಹೆ ನೀಡಲಿದೆ. ಆ ಮೂಲಕ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಮತ್ತು ಆ್ಯಕ್ಸಿಡೆಂಟ್​ಗೆ ಮುಕ್ತಿ ಸಿಗುತ್ತಾ ಕಾದುನೋಡಬೇಕಿದೆ.

ಬೆಂಗಳೂರು ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಸಂಚಾರಿ ಪೊಲೀಸರೊಂದಿಗೆ ಕೈ ಜೋಡಿಸಿದ ಐಐಎಸ್​ಸಿ
ಪ್ರಾತಿನಿಧಿಕ ಚಿತ್ರ
Follow us
ರಾಚಪ್ಪಾಜಿ ನಾಯ್ಕ್
| Updated By: ಗಂಗಾಧರ​ ಬ. ಸಾಬೋಜಿ

Updated on: Dec 15, 2023 | 8:32 PM

ಬೆಂಗಳೂರು, ಡಿಸೆಂಬರ್​ 15: ನಗರದಲ್ಲಿ ಟ್ರಾಫಿಕ್ (Bangaluru traffic) ಸಮಸ್ಯೆ ಬಗೆಹರಿಸಲು ಭಾರತೀಯ ವಿಜ್ಞಾನ ಸಂಸ್ಥೆ ಸಂಚಾರಿ ಪೊಲೀಸರೊಂದಿಗೆ ಕೈಜೋಡಿಸಿದೆ. ಸಂಚಾರಿ ಪೊಲೀಸರು ಸಂಗ್ರಹಿಸಿರುವ ದತ್ತಾಂಶ ಬಳಸಿ IISC ಸಂಶೋಧನೆ ನಡೆಸಿ ಸಂಚಾರಿ ಪೊಲೀಸರಿಗೆ ಸಲಹೆ ನೀಡಲಿದೆ. ಮಹತ್ವದ ಯೋಜನೆಯ ಒಪ್ಪಂದಕ್ಕೆ ಸಂಚಾರಿ ಪೊಲೀಸರು ಸಹಿಮಾಡಿದ್ದು, ಇದಕ್ಕಾಗಿ ಸಂಚಾರಿ ವಿಭಾಗದ ಪೊಲೀಸರಿಗೆ ಭಾರತೀಯ ವಿಜ್ಞಾನ ಸಂಸ್ಥೆ ತರಬೇತಿ ನೀಡಲಿದೆ. ಆ ಮೂಲಕ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಮತ್ತು ಆ್ಯಕ್ಸಿಡೆಂಟ್​ಗೆ ಮುಕ್ತಿ ಸಿಗುತ್ತಾ ಕಾದುನೋಡಬೇಕಿದೆ.

ಬ್ರ್ಯಾಂಡ್ ಬೆಂಗಳೂರು ಕಾರ್ಯಕ್ರಮ ಯೋಜನೆ ಅಡಿಯಲ್ಲಿ ನಗರದ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ಸಾರ್ವಜನಿಕ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿತ್ತು. ಈ ಸಲಹೆಗಳನ್ನು ಒಟ್ಟುಗೂಡಿಸಿ ಪ್ರತ್ಯೇಕ ವರದಿ ಸಿದ್ದಪಡಿಸಿ ಸಲ್ಲಿಸುವಂತೆ ಐಐಎಸ್​ಸಿ ಮತ್ತು ಆರ್​ಆಯ್​ಎಮ್​ಗೆ ರಾಜ್ಯ ಸರ್ಕಾರ ಸೂಚಿಸಿತ್ತು.

ಇದನ್ನೂ ಓದಿ: ಬೆಂಗಳೂರು: ಸಂಚಾರ ದಟ್ಟಣೆ ನಿಯಂತ್ರಿಸಲು ವಾಹನ ಸವಾರರಿಂದ ದಟ್ಟಣೆ ಶುಲ್ಕ ವಸೂಲಿಗೆ ಚಿಂತನೆ

ಮುಂಬರುವ ವರ್ಷಗಳಲ್ಲಿ ನಗರದಲ್ಲಿ ಹೆಚ್ಚುತ್ತಿರುವ ವಾಹನ ಹಾಗೂ ಸಂಚಾರ ದಟ್ಟಣೆಯ ಸಮಸ್ಯೆಯನ್ನು ಪರಿಹರಿಸಲು, ಸೂಕ್ತವಾದ ಮಾಸ್ಟರ್​ಪ್ಲಾನ್ ಹಾಗೂ ಅನ್ವಯವಾಗುವ ಸಾರಿಗೆ ಯೋಜನೆಯನ್ನು ಅಭಿವೃದ್ಧಿಪಡಿಸಬೇಕಿದೆ. ಹಾಗೇ ಇದನ್ನು ಕಾಲಕಾಲಕ್ಕೆ ನವೀಕರಿಸಬೇಕು. ಸಂಚಾರ ದಟ್ಟಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಈ ಯೋಜನೆಗಳು ಅತ್ಯಗತ್ಯವಿದೆ.

ಟ್ರಾಫಿಕ್ ಸಮಸ್ಯೆಗೆ ಪೆರಿಫೆರಲ್ ರಿಂಗ್ ರಸ್ತೆ ಪರಿಹಾರ

ಟ್ರಾಫಿಕ್ ಸಮಸ್ಯೆಗೆ ಪೆರಿಫೆರಲ್ ರಿಂಗ್ ರಸ್ತೆ ಪರಿಹಾರವಾಗಲಿದೆ ಎಂದು ಇತ್ತೀಚೆಗೆ ಡಿಸಿಎಂ ಡಿಕೆ ಶಿವಕುಮಾರ್​ ಹೇಳಿದ್ದರು. ಫ್ಲೈಓವರ್, ಸುರಂಗ ರಸ್ತೆ ಮಾಡಿದರೆ ಟ್ರಾಫಿಕ್ ಸಮಸ್ಯೆ ಬಗೆಹರಿಯುತ್ತೆ. ಬೆಂಗಳೂರಿನ ಪ್ರತಿ ವಾರ್ಡ್​ಗೆ ಯುವ ಐಎಎಸ್ ಅಧಿಕಾರಿಗಳ ನೇಮಕ ಮಾಡುತ್ತೇವೆ. ಬೆಂಗಳೂರಿಗರ ಆಸ್ತಿ ಮೌಲ್ಯದ ಬಗ್ಗೆ ಇ-ಸ್ವತ್ತು ಮಾಡಿಸುತ್ತೇವೆ. ಪ್ರತಿಯೊಬ್ಬರ ಮನೆ ಬಾಗಿಲಿಗೆ ಇ-ಸ್ವತ್ತು ದಾಖಲೆ ತಲುಪಿಸುತ್ತೇವೆ.

ಇದನ್ನೂ ಓದಿ: ಟಿವಿ9 ವರದಿ ಇಂಪ್ಯಾಕ್ಟ್: ಬಿಎಂಟಿಸಿಗೆ ಬಂತು 100 ಹೊಸ ಎಲೆಕ್ಟ್ರಿಕ್ ಬಸ್​, ಇವುಗಳ ವಿಶೇಷತೆ ತಿಳಿಯಿರಿ

ಸರ್ಕಾರಕ್ಕೆ ತೆರಿಗೆ ಕಟ್ಟುವವರಿಗೆ ನಾವು ಸೌಲಭ್ಯ ಕಲ್ಪಿಸಬೇಕಾಗಿದೆ. ಆಸ್ತಿ ಮೌಲ್ಯಮಾಪನ ಮಾಡಿಸಿದರೆ ತೆರಿಗೆ ವಂಚಕರು ಗೊತ್ತಾಗುತ್ತೆ. ಎತ್ತಿನಹೊಳೆ ಯೋಜನೆ ಮೂಲಕ ತಿಪ್ಪಗೊಂಡನಹಳ್ಳಿಗೆ ನೀರು ತರುತ್ತೇವೆ. ತಿಪ್ಪಗೊಂಡನಹಳ್ಳಿ ತಲುಪಿದ ನಂತರ ಮುಂದಿನ ಯೋಜನೆಗೆ ನಿರ್ಧಾರ ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
ರಾಹುಲ್​ಗೆ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದ ವಿರಾಟ್ ಕೊಹ್ಲಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
14 ವರ್ಷದ ವೈಭವ್​ನ 11 ರಾಕೆಟ್ ಸಿಕ್ಸ್​ಗಳು: ವಿಡಿಯೋ ವೀಕ್ಷಿಸಿ
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
VIDEO: ಅತ್ಯಂತ ಕೆಟ್ಟ ದಾಖಲೆ: ಒಂದೇ ಓವರ್​ನಲ್ಲಿ 30 ರನ್ ಚಚ್ಚಿದ ವೈಭವ್
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಬೆಂಗಳೂರು ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ, 4 ಕಾರುಗಳು ಜಖಂ
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಸ್ತ್ರೀಯರು ಗರ್ಭಾವಸ್ಥೆಯಲ್ಲಿ ನೀತಿಕತೆಗಳನ್ನು ಯಾಕೆ ಕೇಳಬೇಕು?
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಕಾಲು ನೋವಿದ್ದರೂ ವೈಭವ್ ಶತಕಕ್ಕೆ ದ್ರಾವಿಡ್ ಸಂಭ್ರಮ ನೋಡಿ
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ