ಬೆಂಗಳೂರು: ಸಾರಿಗೆ ನೌಕರರನ್ನ ಸರ್ಕಾರಿ ನೌಕರರನ್ನಾಗಿ ಘೋಷಣೆ ಮಾಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿ ಫೆಬ್ರವರಿ 20ರಂದು ಉಪವಾಸ ಸತ್ಯಾಗ್ರಹಕ್ಕೆ ತೀರ್ಮಾನ ಮಾಡಲಾಗಿದೆ. ಇದೇ ತಿಂಗಳ 20ರಂದು ಕುಟುಂಬ ಸಮೇತರಾಗಿ ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ. ಸೇವೆಗೆ ರಜೆ ಹಾಕಿ ಹೋರಾಟದಲ್ಲಿ ಭಾಗಿಯಾಗಲು ಚಿಂತನೆ ನಡೆಸಲಾಗಿದೆ ಹೀಗಾಗಿ ಫೆಬ್ರವರಿ 20 ರಂದು ಬಸ್ ಸಂಚಾರದಲ್ಲಿ ವ್ಯತ್ಯಯವಾಗುವಂತಹ ಸಾಧ್ಯತೆ ಹೆಚ್ಚಾಗಿದೆ.
ಕಳೆದ ಹಲವಾರು ವರ್ಷಗಳಿಂದ ಎಷ್ಟೇ ಹೋರಾಟ ಮಾಡಿದ್ರೂ ಫಲ ಸಿಗದ ಹಿನ್ನೆಲೆ ಈ ಬಾರಿ ಸಾರಿಗೆ ನೌಕರರ ಆಕ್ರೋಶ ತೀವ್ರ ಸ್ವರೂಪ ಪಡೆದಿದೆಯಂತೆ. ನೌಕರರು ತಮ್ಮ ಕುಟುಂಬ ಸಮೇತ ಉಪವಾಸ ಧರಣಿ ಹಾದಿ ತುಳಿಯಲು ನಿರ್ಧರಿಸಿದ್ದಾರೆ. ನಾಡೋಜಾ ಪಾಟೀಲ್ ಪುಟ್ಟಪ್ಪ ನೇತೃತ್ವದಲ್ಲಿ ಉಪವಾಸ ಧರಣಿ ನಡೆಯಲಿದೆ. ಆದರೆ ಪಾಟೀಲ್ ಪುಟ್ಟಪ್ಪ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆ ಅವ್ರು ಧರಣಿಯಲ್ಲಿ ಭಾಗಿಯಾಗುತ್ತಿಲ್ಲ.
ಈಗಾಗಲೇ ಉಪವಾಸ ಧರಣಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವಂತೆ ಕರೆ ನೀಡಲಾಗಿದೆ. ಹೀಗಾಗಿ ಫೆಬ್ರವರಿ 20ರಂದು ಸಾರ್ವಜನಿಕರಿಗೆ ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ ಸಮಸ್ಯೆ ಉಂಟಾಗಲಿದೆ.
Published On - 9:55 am, Tue, 18 February 20