MLC ಫೈಟ್ನಲ್ಲಿ ಗೆದ್ದ ಸವದಿ: ಪರಿಷತ್ ಆಯ್ಕೆಯಿಂದ DCM ಪಟ್ಟ ಸುಭದ್ರ
ಬೆಂಗಳೂರು: ವಿಧಾನ ಪರಿಷತ್ನ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಡಿಸಿಎಂ ಹಾಗೂ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ್ ಸವದಿ ಗೆಲುವಿನ ನಗೆ ಬೀರಿದ್ದಾರೆ. ಚಲಾವಣೆಯಾಗಿದ್ದ 120 ಮತಗಳ ಪೈಕಿ ಲಕ್ಷ್ಮಣ್ ಸವದಿ 113 ಮತಗಳನ್ನು ಪಡೆದಿದ್ದು, 7 ಮತಗಳು ಅಸಿಂಧುವಾಗಿದೆ. ಈ ಮೂಲಕ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಂತರ ಅನಿಲ್ ಕುಮಾರ್ ನಿವೃತ್ತರಾಗಿದ್ದರು. ಹಾಗಾಗಿ ಡಿಸಿಎಂ ಲಕ್ಷ್ಮಣ ಸವದಿ ಗೆಲುವಿನ ಹಾದಿ ಸುಗಮವಾಗಿದೆ. ರಿಜ್ವಾನ್ ಅರ್ಷದ್ ಶಾಸಕರಾಗಿ ಆಯ್ಕೆಯಾಗಿದ್ದರಿಂದ […]
ಬೆಂಗಳೂರು: ವಿಧಾನ ಪರಿಷತ್ನ ಒಂದು ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಡಿಸಿಎಂ ಹಾಗೂ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ್ ಸವದಿ ಗೆಲುವಿನ ನಗೆ ಬೀರಿದ್ದಾರೆ. ಚಲಾವಣೆಯಾಗಿದ್ದ 120 ಮತಗಳ ಪೈಕಿ ಲಕ್ಷ್ಮಣ್ ಸವದಿ 113 ಮತಗಳನ್ನು ಪಡೆದಿದ್ದು, 7 ಮತಗಳು ಅಸಿಂಧುವಾಗಿದೆ.
ಈ ಮೂಲಕ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಂತರ ಅನಿಲ್ ಕುಮಾರ್ ನಿವೃತ್ತರಾಗಿದ್ದರು. ಹಾಗಾಗಿ ಡಿಸಿಎಂ ಲಕ್ಷ್ಮಣ ಸವದಿ ಗೆಲುವಿನ ಹಾದಿ ಸುಗಮವಾಗಿದೆ.
ರಿಜ್ವಾನ್ ಅರ್ಷದ್ ಶಾಸಕರಾಗಿ ಆಯ್ಕೆಯಾಗಿದ್ದರಿಂದ ತೆರವಾಗಿದ್ದ ಒಂದು ಸ್ಥಾನಕ್ಕೆ ಇಂದು ಉಪಚುನಾವಣೆ ನಡೆದಿದೆ. ಸಂಜೆ 4 ಗಂಟೆಯವರೆಗೆ ಮತದಾನ ನಡೆದಿದ್ದು, 5 ಗಂಟೆ ನಂತರ ಚುನಾವಣಾ ಅಧಿಕಾರಿ ವಿಶಾಲಾಕ್ಷಿ ನೇತೃತ್ವದಲ್ಲಿ ಮತ ಎಣಿಕೆ ಮತ ಎಣಿಕೆ ಕಾರ್ಯ ನಡೆದಿದೆ.
ಪರಿಷತ್ ಚುನಾವಣೆಯಲ್ಲಿ ಗೆಲುವು ಹಿನ್ನೆಲೆ ಡಿಸಿಎಂ ಲಕ್ಷ್ಮಣ ಸವದಿ ಪಕ್ಷದ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಗೆಲುವಿನಿಂದ ಪಕ್ಷ ಹಾಗೂ ಸರಕಾರದಲ್ಲಿ ಹೊಸ ಶಕ್ತಿಯಿಂದ ಕೆಲಸ ಮಾಡಲು ಅವಕಾಶ ಸಿಕ್ಕಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.
Published On - 6:05 pm, Mon, 17 February 20