ಛತ್ತೀಸ್ಗಢದ ನಂದನವನ ಜಂಗಲ್ನಲ್ಲಿ ಪ್ರವಾಸಿಗರನ್ನು ಬೆನ್ನತ್ತಿದ ಹುಲಿರಾಯ
ಸಫಾರಿಗೆ ತೆರಳಿದ್ದ ಪ್ರವಾಸಿಗರನ್ನ ಹುಲಿಯೊಂದು ಬೆನ್ನತ್ತಿರುವ ವಿಡಿಯೋ ವೈರಲ್ ಆಗಿದೆ. ಪ್ರವಾಸಿಗರ ವಾಹನದ ಹಿಂದೆ ಓಡಿ ಬಂದ ಟೈಗರ್, ಸುಮಾರು ದೂರ ವಾಹನ ಚೇಸ್ ಮಾಡಿದೆ. ಈ ಘಟನೆ ಛತ್ತೀಸ್ಗಢದ ನಂದನವನ ಜಂಗಲ್ನಲ್ಲಿ ನಡೆದಿದೆ ಎನ್ನಲಾಗ್ತಿದ್ದು, ಪ್ರವಾಸಿಗರ ಮೊಬೈಲ್ನಲ್ಲಿ ದೃಶ್ಯ ಸೆರೆಯಾಗಿದೆ. ‘ಪ್ರಿಯಾಂಕಾ ರಾಜ್ಯಸಭೆಗೆ ಆಯ್ಕೆಯಾಗಲಿ’ ಪ್ರಿಯಾಂಕಾ ಗಾಂಧಿ ಅವರನ್ನ ರಾಜ್ಯಸಭೆಗೆ ಆಯ್ಕೆ ಮಾಡಬೇಕು ಎಂಬ ಕೂಗಿನ ನಡುವೆಯೇ, ಪ್ರಿಯಾಂಕಾ ಆಯ್ಕೆಗೆ ಒತ್ತಾಯಿಸಿ ಮಧ್ಯಪ್ರದೇಶದಲ್ಲಿ ಘೋಷಣೆ ಕೂಗಲಾಗಿದೆ. ಕಾಂಗ್ರೆಸ್ ನಾಯಕರು ಪ್ರಿಯಾಂಕಾ ಗಾಂಧಿ ಪರ ಘೋಷಣೆ ಕೂಗಿದ್ದಾರೆ. […]
ಸಫಾರಿಗೆ ತೆರಳಿದ್ದ ಪ್ರವಾಸಿಗರನ್ನ ಹುಲಿಯೊಂದು ಬೆನ್ನತ್ತಿರುವ ವಿಡಿಯೋ ವೈರಲ್ ಆಗಿದೆ. ಪ್ರವಾಸಿಗರ ವಾಹನದ ಹಿಂದೆ ಓಡಿ ಬಂದ ಟೈಗರ್, ಸುಮಾರು ದೂರ ವಾಹನ ಚೇಸ್ ಮಾಡಿದೆ. ಈ ಘಟನೆ ಛತ್ತೀಸ್ಗಢದ ನಂದನವನ ಜಂಗಲ್ನಲ್ಲಿ ನಡೆದಿದೆ ಎನ್ನಲಾಗ್ತಿದ್ದು, ಪ್ರವಾಸಿಗರ ಮೊಬೈಲ್ನಲ್ಲಿ ದೃಶ್ಯ ಸೆರೆಯಾಗಿದೆ.
‘ಪ್ರಿಯಾಂಕಾ ರಾಜ್ಯಸಭೆಗೆ ಆಯ್ಕೆಯಾಗಲಿ’ ಪ್ರಿಯಾಂಕಾ ಗಾಂಧಿ ಅವರನ್ನ ರಾಜ್ಯಸಭೆಗೆ ಆಯ್ಕೆ ಮಾಡಬೇಕು ಎಂಬ ಕೂಗಿನ ನಡುವೆಯೇ, ಪ್ರಿಯಾಂಕಾ ಆಯ್ಕೆಗೆ ಒತ್ತಾಯಿಸಿ ಮಧ್ಯಪ್ರದೇಶದಲ್ಲಿ ಘೋಷಣೆ ಕೂಗಲಾಗಿದೆ. ಕಾಂಗ್ರೆಸ್ ನಾಯಕರು ಪ್ರಿಯಾಂಕಾ ಗಾಂಧಿ ಪರ ಘೋಷಣೆ ಕೂಗಿದ್ದಾರೆ. ಮಧ್ಯಪ್ರದೇಶದಿಂದ ಪ್ರಿಯಾಂಕಾ ಆಯ್ಕೆ ಸುಲಭವಾಗಿದೆ ಎನ್ನಲಾಗ್ತಿದೆ.
ಸುಪ್ರೀಂಕೋರ್ಟ್ನಿಂದ ಸಂಧಾನ ಸೂತ್ರ: ಶಾಹಿನ್ ಬಾಗ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ ಸವಾರರಿಗೆ ಸಮಸ್ಯೆಯಾಗುತ್ತಿದ್ದು, ಪರದಾಡುತ್ತಿದ್ದಾರೆ. ಈ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ಸಂಧಾನ ನಡೆಸಿ ಸಮಸ್ಯೆಯನ್ನು ಬಗೆಹರಿಸುವಂತೆ ವಕೀಲರಾದ ಸಂಜಯ್ ಹೆಗ್ಡೆ ಮತ್ತು ಸಾಧನಾ ರಾಮಚಂದ್ರನ್ ಅವರನ್ನ ನೇಮಿಸಿದೆ.
ಕೇಂದ್ರದ ವಿರುದ್ಧ ಶಿವಸೇನೆ ವಾಗ್ದಾಳಿ: ಭಾರತಕ್ಕೆ ಟ್ರಂಪ್ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರ ಕೈಗೊಂಡಿರುವ ಸಿದ್ಧತೆಗಳನ್ನ ಶಿವಸೇನೆ ಮತ್ತೆ ಖಂಡಿಸಿದೆ. ಹಿಂದೆ ಉದ್ಧವ್ ಟ್ರಂಪ್ ಭೇಟಿ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದೀಗ ಶಿವಸೇನೆ ನೇರ ವಾಗ್ದಾಳಿ ನಡೆಸಿದ್ದು, ಇದು ಗುಲಾಮಿ ಮನಸ್ಥಿತಿಯ ಪ್ರತೀಕ ಅಂತಾ ಆಕ್ರೋಶ ವ್ಯಕ್ತಪಡಿಸಿದೆ.