ಮನೆಯಿಂದ ಹೊರಡುವಾಗ ರಾಜಧಾನಿ ಜನರೇ ಎಚ್ಚರ.. ಎಲ್ಲೆಲ್ಲಿ ಸಾರಿಗೆ ಪ್ರತಿಭಟನೆ ಬಿಸಿ ಹೇಗಿದೆ?

|

Updated on: Dec 11, 2020 | 11:09 AM

ಸದ್ಯ ಸರ್ಕಾರದ ಪರಿಸ್ಥಿತಿ ಸರಿ ಇಲ್ಲ. ಕೋವಿಡ್ ಹಿನ್ನಲೆಯಲ್ಲಿ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತದೆ. ಇಂತಹ ಸಮಯದಲ್ಲಿ ನಿಮ್ಮ ಬೇಡಿಕೆ ಈಡೇರಿಸುವುದು ಕಷ್ಟ ಮುಷ್ಕರ ಬಿಟ್ಟು ಕೆಲಸಕ್ಕೆ ಹೊರಡಿ ಎಂದು ಸಾರಿಗೆ ನೌಕರರಿಗೆ ಬಿಎಸ್​ವೈ ವಿನಂತಿಸಿಕೊಂಡಿದ್ದಾರೆ.

ಮನೆಯಿಂದ ಹೊರಡುವಾಗ ರಾಜಧಾನಿ ಜನರೇ ಎಚ್ಚರ.. ಎಲ್ಲೆಲ್ಲಿ ಸಾರಿಗೆ ಪ್ರತಿಭಟನೆ ಬಿಸಿ ಹೇಗಿದೆ?
ಬಿಎಂಟಿಸಿ ಬಸ್​ (ಪ್ರಾತಿನಿಧಿಕ ಚಿತ್ರ)
Follow us on

ಬೆಂಗಳೂರು: ಇಂದು ರಾಜ್ಯದಲ್ಲಿ ಸಾರಿಗೆ ಸಂಸ್ಥೆಗಳು ಪ್ರತಿಭಟನೆ ನಡೆಸುತ್ತಿವೆ. ಹೀಗಾಗಿ ಕೆಎಸ್​ಆರ್​ಟಿಸಿ ಮತ್ತು ಬಿಎಂಟಿಸಿ ಬಸ್​ಗಳು ರಸ್ತೆಗೆ ಇಳಿದಿಲ್ಲ. ನಮ್ಮ ಬೇಡಿಕೆಗಳನ್ನ ಪೂರೈಸಿ ಎಂದು  ಸರ್ಕಾರದ ವಿರುದ್ಧ ಪ್ರತಿಭಟನೆ  ನಡೆಸುತ್ತಿದ್ದಾರೆ.

ಬಸ್​ಗಳಿಲ್ಲದೆ ಪ್ರಯಾಣಿಕರ ಪರದಾಟ:

ಬಸ್​ಗಳು ಇಲ್ಲದೇ ಪ್ರಯಾಣಿಕರು ಪರದಾಡುತ್ತಿದ್ದಾರೆ. ಕೆಲಸಕ್ಕೆ ಹೋಗುವವರಿಂದ ಹಿಡಿದು ವಯಸ್ಕರವರೆಗೆ ಬಸ್​ಗಾಗಿ ಕಾಯುತ್ತಾ ಬಸ್​ಸ್ಟಾಪ್​ಗಳಲ್ಲಿ ನಿಂತಿದ್ದಾರೆ. ಒಂದೇ ಒಂದು ಬಸ್​ ಕೂಡಾ ಇಲ್ಲದಂತಾಗಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದ್ದಾರೆ.

ಸರ್ಕಾರ ಸ್ಪಂದಿಸದಿದ್ರೆ ಪ್ರೀಡಂ ಪಾರ್ಕ್​ಗೆ ತೆರಳುತ್ತೇವೆ:

ಸರ್ಕಾರ ಸ್ಪಂದಿಸದಿದ್ರೆ ಡಿಪೋ ಬಿಟ್ಟು ಫ್ರೀಡಂ ಪಾರ್ಕ್ ತೆರಳುತ್ತೇವೆ ಎಂದು ನೌಕರರ ಪ್ರತಿಭಟನೆ ನಡೆಸುತ್ತಿದ್ದಾರೆ. ಡಿಪೋಗಳ ಮುಂಭಾಗದಲ್ಲಿ ಬಸ್ ನಿಲ್ಲಸಿ ಬಂದ್ ಮಾಡಿದ್ದಾರೆ ನೌಕರರು. ಇವಾಗ ಬಸ್ ಬರುತ್ತೆ ಅಂತ ಪ್ರಯಾಣಿಕರೆಲ್ಲಾ ಬಸ್​ಸ್ಟಾಪ್​ಗಳಲ್ಲಿ ಕಾದು ಕುಳಿತಿದ್ದಾರೆ. ಬಸ್​ಗಳು ಮಾತ್ರ ಬರ್ತಾನೇ ಇಲ್ಲ.

ಬೆಳಗ್ಗೆ ಕೆಲಸಕ್ಕೆ ಹೋಗುವವರಿಂದ ಹಿಡಿದು, ವಯಸ್ಸಾದವರು, ಮಕ್ಕಳು, ಯುವಕರು ಸೇರಿದಂತೆ ಮಹಿಳೆಯರು ಬಸ್​ಗಾಗಿ ಕಾಯ್ತಾ ಇದ್ದಾರೆ. ಬೆಂಗಳೂರು ಮೆಜೆಸ್ಟಿಕ್ ತುಂಬ ಜನರೇ ಜನರು. ಆದ್ರೂ ಕೂಡಾ ಬಿಎಂಟಿಸಿ ಬಸ್​ಗಳು ಮಾತ್ರ ಬಿಲ್​ಕುಲ್ ಹೊರಡಲ್ಲ ಅಂತ ಕೂತು ಬಿಟ್ಟಿದ್ದಾರೆ.

ಬಿಎಸ್​ವೈ ವಿನಂತಿ:

ಸದ್ಯ ಸರ್ಕಾರದ ಪರಿಸ್ಥಿತಿ ಸರಿ ಇಲ್ಲ. ಕೋವಿಡ್ ಹಿನ್ನಲೆಯಲ್ಲಿ ಸರ್ಕಾರ ಆರ್ಥಿಕ ಸಂಕಷ್ಟ ಎದುರಿಸುತ್ತದೆ. ಇಂತಹ ಸಮಯದಲ್ಲಿ ನಿಮ್ಮ ಬೇಡಿಕೆ ಈಡೇರಿಸುವುದು ಕಷ್ಟ ಮುಷ್ಕರ ಬಿಟ್ಟು ಕೆಲಸಕ್ಕೆ ಹೊರಡಿ ಎಂದು ಸಾರಿಗೆ ನೌಕರರಿಗೆ ಬಿಎಸ್​ವೈ ವಿನಂತಿಸಿಕೊಂಡಿದ್ದಾರೆ.

ಎಲ್ಲೆಲ್ಲಿ ಸಾರಿಗೆ ಪ್ರತಿಭಟನೆ:

ದಾವಣಗೆರೆ, ರಾಮನಗರ, ಗದಗ, ಚಾಮರಾಜ ನಗರ, ಮಂಡ್ಯ ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ ಬಸ್​ಗಳು ಸಂಚರಿಸುತ್ತಿಲ್ಲ. ಮಧ್ಯಾಹ್ನ 12 ಗಂಟೆಯ ಒಳಗೆ ಸರ್ಕಾರ ಸ್ಪಂದಿಸಬೇಕು ಎಂದು ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ.

ಸಭೆ ನಡೆಸಿ ಮಾತನಾಡುತ್ತೇವೆ:

ಸಾರಿಗೆ ನೌಕರರಿಗೆ ಇಲ್ಲಿಯವರೆಗೆ ಸಂಬಳದಲ್ಲಿ ಕಡಿತ ಮಾಡಿಲ್ಲ. ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡುತ್ತೇನೆ ಎಂದು ಸಾರಿಗೆ ಸಚಿವ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ

Published On - 9:36 am, Fri, 11 December 20