ಸಾರಿಗೆ ನೌಕರರ ಪ್ರತಿಭಟನೆ ಬಿಸಿ ಜೋರು, ಆಟೋ ಚಾಲಕರಿಂದ ದುಪ್ಪಟ್ಟು ಹಣ ವಸೂಲಿ

ಇಂದು ರಾಜ್ಯಾದ್ಯಂತ ಸಾರಿಗೆ ನೌಕರರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಬಸ್​ಗಳು ರಸ್ತೆಗೆ ಇಳಿಯುತ್ತಿಲ್ಲ. ಜನ ಬಸ್ ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ಕಾದು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆಟೋ ಚಾಲಕರು ಇದರ ‘ಲಾಭ’ ಪಡೆದುಕೊಳ್ಳುತ್ತಿದ್ದಾರೆ.

ಸಾರಿಗೆ ನೌಕರರ ಪ್ರತಿಭಟನೆ ಬಿಸಿ ಜೋರು, ಆಟೋ ಚಾಲಕರಿಂದ ದುಪ್ಪಟ್ಟು ಹಣ ವಸೂಲಿ
Ayesha Banu

| Edited By: sandhya thejappa

Dec 11, 2020 | 11:48 AM

ಗದಗ: ಇಂದು ರಾಜ್ಯಾದ್ಯಂತ ಸಾರಿಗೆ ನೌಕರರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಬಸ್​ಗಳು ರಸ್ತೆಗೆ ಇಳಿಯುತ್ತಿಲ್ಲ. ಜನ ಬಸ್ ನಿಲ್ದಾಣಗಳಲ್ಲಿ ಗಂಟೆಗಟ್ಟಲೆ ಕಾದು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಆಟೋ ಚಾಲಕರು ಇದರ ‘ಲಾಭ’ ಪಡೆದುಕೊಳ್ಳುತ್ತಿದ್ದಾರೆ.

ರಾಜ್ಯದಲ್ಲಿ ಇಂತಹ ಸ್ಥಿತಿ ನಿರ್ಮಾಣವಾದ ಪರಿಣಾಮ ಸಾರಿಗೆ ನೌಕರರ ಪ್ರತಿಭಟನೆಯ ಲಾಭ ಪಡೆದು ಖಾಸಗಿ ವಾಹನಗಳು, ಆಟೋ ಚಾಲಕರು ಹಣ ವಸೂಲಿಗಿಳಿದಿದ್ದಾರೆ. ಗದಗ ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಪ್ರಯಾಣಿಕರಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡಲಾಗುತ್ತಿದೆ.

10 ಕಿಲೋಮೀಟರ್​ಗೆ 200 ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಆಟೋ ಚಾರ್ಜ್ ಕೇಳಿ ಪ್ರಯಾಣಿಕರು ಕಂಗಾಲಾಗಿದ್ದಾರೆ. ಇನ್ನು ಕ್ರೂಸರ್ ವಾಹನಗಳ ಚಾಲಕರಿಂದಲೂ ಎರಡು ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ. ಹೆಚ್ಚಿನ ಹಣವಿಲ್ಲದೇ ಬಡ ಪ್ರಯಾಣಿಕರು ಧರ್ಮ ಸಂಕಟದಲ್ಲಿ ಸಿಲುಕಿಕೊಂಡಿದ್ದಾರೆ. ಖಾಸಗಿ ವಾಹನಹಳ ಅಟ್ಟಹಾಸಕ್ಕೆ ಬ್ರೇಕ್ ಹಾಕುವಂತೆ ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಇದು ಕೇವಲ ಗದಗದ ಪರಿಸ್ಥಿತಿ ಅಲ್ಲ. ರಾಜ್ಯಾದ್ಯಂತ ಇದೇ ರೀತಿಯ ಘಟನೆಗಳು ನಡೆಯುತ್ತಿವೆ. ಓಲಾ, ಊಬರ್ ಸಹ ಪ್ರಯೋಜನವಿಲ್ಲದಂತಾಗಿದೆ. ಕೆಲಸಕ್ಕೆ ಹೋಗಬೇಕಿದ್ದ ಸಿಬ್ಬಂದಿ ಬಸ್ ಟ್ಯಾಕ್ಸಿ ಇಲ್ಲದೆ ಪರಿತಪಿಸುತ್ತಿದ್ದಾರೆ.

ಕೊಪ್ಪಳದಲ್ಲಿ ಪ್ರಯಾಣಿಕರಿಂದ  ಹಣ ವಸೂಲಿ ಮಾಡುತ್ತಿರುವ ಖಾಸಗಿ ವಾಹನ ಮಾಲಿಕರು:

ಈ ಹಿಂದೆ ಕೊಪ್ಪಳದಿಂದ ಮುಂಡರಗಿಗೆ ಹೋಗಲು ಪ್ರಯಾಣಿಕರು 40 ರೂ. ನೀಡುತ್ತಿದ್ದರು. ಆದರೆ ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಇಂದು ಖಾಸಗಿ ವಾಹನ ಮಾಲಿಕರು 20 ರೂ. ಹೆಚ್ಚು ಅಂದರೆ 60 ರೂಪಾಯಿಯನ್ನು ವಸೂಲಿ ಮಾಡುತ್ತಿದ್ದಾರೆ. ಕೊಪ್ಪಳದಿಂದ ಗದಗಕ್ಕೆ ಹೋಗಲು 65 ರೂ. ನೀಡುತ್ತಿದ್ದ ಜನರಿಂದ ಇದೀಗ 150 ರೂಪಾಯಿಯನ್ನು ವಸೂಲಿ ಮಾಡುತ್ತಿದ್ದಾರೆ.

ಮನೆಯಿಂದ ಹೊರಡುವಾಗ ರಾಜಧಾನಿ ಜನರೇ ಎಚ್ಚರ.. ಎಲ್ಲೆಲ್ಲಿ ಸಾರಿಗೆ ಪ್ರತಿಭಟನೆ ಬಿಸಿ ಹೇಗಿದೆ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada