ಫ್ರೀಡಂ ಪಾರ್ಕ್​ನಲ್ಲಿ ಸಾರಿಗೆ ನೌಕರರ ಹರ್ಷೋದ್ಗಾರ: ಮೊಬೈಲ್ ಟಾರ್ಚ್ ಆನ್ ಮಾಡಿ ಸಂತಸ ವ್ಯಕ್ತ

|

Updated on: Dec 13, 2020 | 7:12 PM

ಇತ್ತ, ಸಂಧಾನ ಸಕ್ಸಸ್​ ಆದ ಸುದ್ದಿ ಕೇಳುತ್ತಿದ್ದಂತೆ ಫ್ರೀಡಂಪಾರ್ಕ್​ನಲ್ಲಿ ನೆರೆದಿದ್ದ ಸಾರಿಗೆ ನೌಕರರು ಮೊಬೈಲ್ ಟಾರ್ಚ್ ಆನ್ ಮಾಡೋ ಮೂಲಕ ಹರ್ಷ ವ್ಯಕ್ತಪಡಿಸಿದರು. ಸಭೆ ಸಫಲ ಎಂಬ ವಿಚಾರ‌ ಕೇಳಿ ಆಶಾ ಭಾವನೆ ವ್ಯಕ್ತಪಡಿಸಿದರು.

ಫ್ರೀಡಂ ಪಾರ್ಕ್​ನಲ್ಲಿ ಸಾರಿಗೆ ನೌಕರರ ಹರ್ಷೋದ್ಗಾರ: ಮೊಬೈಲ್ ಟಾರ್ಚ್ ಆನ್ ಮಾಡಿ ಸಂತಸ ವ್ಯಕ್ತ
ಮೊಬೈಲ್ ಟಾರ್ಚ್ ಆನ್ ಮಾಡಿ ಸಂತೋಷ ವ್ಯಕ್ತಪಡಿಸಿದ ಸಾರಿಗೆ ನೌಕರರು
Follow us on

ಬೆಂಗಳೂರು: ಇತ್ತ, ಸಂಧಾನ ಸಕ್ಸಸ್​ ಆದ ಸುದ್ದಿ ಕೇಳುತ್ತಿದ್ದಂತೆ ಫ್ರೀಡಂಪಾರ್ಕ್​ನಲ್ಲಿ ನೆರೆದಿದ್ದ ಸಾರಿಗೆ ನೌಕರರು ಮೊಬೈಲ್ ಟಾರ್ಚ್ ಆನ್ ಮಾಡೋ ಮೂಲಕ ಹರ್ಷ ವ್ಯಕ್ತಪಡಿಸಿದರು. ಸಭೆ ಸಫಲ ಎಂಬ ವಿಚಾರ‌ ಕೇಳಿ ಆಶಾ ಭಾವನೆ ವ್ಯಕ್ತಪಡಿಸಿದರು.

ಈ ನಡುವೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ಸಚಿವರು ನನಗೆ ಒಂದು ಮೆಸೇಜ್ ಮಾಡಿದ್ದಾರೆ. ನಮ್ಮ ಇಲಾಖೆಗೆ ಸುಮಾರು ‌40% ನಷ್ಟ ಇರುತ್ತದೆ. ನಾವು ಸೇವೆಗೆ ಆದ್ಯತೆ ‌ನೀಡಿದ್ದೇವೆಂಬ ಕಾರಣ ನೀಡಿದ್ದೇವೆ.ಸಾರ್ವಜನಿಕರ‌ ಹಿತಾಸಕ್ತಿಗೆ ಆದ್ಯತೆ ನೀಡಿದ್ದೇವೆಂಬ ಸಂಪೂರ್ಣ ಅಂಕಿ ಅಂಶಗಳನ್ನ ಕಳಿಸಿದ್ದಾರೆ ಎಂದು ಚಂದ್ರಶೇಖರ್ ಹೇಳಿದರು. 40% ನಷ್ಟ ಇಲ್ಲ, ಲಾಭ ಇಲ್ಲ. ಆದರೆ 20% ಲಾಭ ಇದೆ. ಸೇವೆಯ ಆದ್ಯತೆ ಹಿನ್ನೆಲೆ ನಷ್ಟ ಆದ್ರೂ ಸರ್ಕಾರ ನಡೆಸಲೇಬೇಕಾದ ಉದ್ದೇಶ ಹೊಂದಿದೆ ಎಂದು ಹೇಳಿದರು.

ಜೊತೆಗೆ, ಬಿಡಿಭಾಗಗಳ ಖರೀದಿಯಲ್ಲಿ ಕಮಿಷನ್ ದಂಧೆ ನಡೀತಿದೆ‌. ನಷ್ಟಕ್ಕೆ‌ ಇದೇ ಪ್ರಮುಖ ಕಾರಣ. ಎಲ್ಲಿ ಪ್ರಾಮಾಣಿಕತೆ ಇರುತ್ತದೆ ಅಲ್ಲಿ ನಷ್ಟ ಇರಲ್ಲ ಎಂದು ಹೇಳಿದರು. ವಾಹನಗಳಿಗೆ ಆಗುವ ಎಲ್ಲಾ ನಷ್ಟವನ್ನು ನೌಕರರೇ ಭರಿಸಬೇಕು. ಹೀಗೆ ಎಲ್ಲಾ ಒತ್ತಡ ಹೇರಿ ದುಡಿಸ್ತಿದ್ದಾರೆ, ದುಡಿಯೋಣ. ಆದ್ರೆ ಮೂರು‌ ಕಾಸು ಕೊಟ್ಟು ಮೂವತ್ತು ಬಾರಿ ಶಿಕ್ಷೆ ಕೊಡ್ತೀರಲ್ಲ ನಿಮ್ಮ ನೀತಿ ಸರಿನಾ‌‌? ಸಾರಿಗೆ ನೌಕರರು ಮತ್ತು ಸರ್ಕಾರಿ‌ ನೌಕರರಿಗೆ 40% ವ್ಯತ್ಯಾಸ ಇದೆ. ನಿಮ್ಮ ಕೆಲಸದ‌ ಮೇರೆಗೆ ಹೆಚ್ಚು ‌ಸಂಬಳ‌ ಕೊಡಬೇಕು. ನಿಮ್ಮಿಂದಲೇ ಕೆಲಸ‌ ನಡೀತಿರೋದು. ನಿಮ್ಮಿಂದಲೇ ರಾಜ್ಯದಲ್ಲಿ ನಿತ್ಯ ಲಕ್ಷಾಂತರ ಮಂದಿ ಪ್ರಯಾಣಿಸ್ತಿದ್ದಾರೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು. ಈ ನಡುವೆ, ಪ್ರತಿಭಟನೆ ಸಂಘಟಕರು ಸಮರ್ಥರಿರಬೇಕು. ಸಮರ್ಥವಾಗಿ ಪ್ರತಿಭಟನೆ ಮುನ್ನಡಸಬೇಕು. ಇಲ್ಲದಿದ್ದರೇ ಸರ್ಕಾರ ಜಗ್ಗೊದಿಲ್ಲ ಎಂದು ಪರೋಕ್ಷವಾಗಿ ಎಐಟಿಯುಸಿ ಮುಖಂಡ ಅನಂತ ಸುಬ್ಬರಾವ್ ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

ಇತ್ತ, ಕುಂದಾನಗರಿ ಬೆಳಗಾವಿಯಲ್ಲಿ ಸಹ ಪ್ರತಿಭಟನೆಯಲ್ಲಿದ್ದ ಸಾರಿಗೆ ನೌಕರರು ಸಭೆ ಸಫಲಗೊಂಡ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಸಭೆಯಲ್ಲಿ ಯಾವ ನಿರ್ಧಾರ ಕೈಗೊಳ್ಳಲಾಗುವುದು ಎಂಬ ಕಾತರದಲ್ಲಿದ್ದ ನೌಕರರು ಕ್ಷಣಕ್ಷಣದ ಅಪ್​ಡೇಟ್ಸ್​​ಗಾಗಿ ತಮ್ಮ ಮೊಬೈಲ್​ನಲ್ಲಿ ಟಿವಿ9 ವೀಕ್ಷಿಸುತ್ತಿದ್ದರು. ಸಂಧಾನ ಸಕ್ಸಸ್​ ಆಗ್ತಿದ್ದಂತೆ ತಮ್ಮ ಸಂತಸ ವ್ಯಕ್ತಪಡಿಸಿದರು.

 

ಸಾರಿಗೆ ನೌಕರರ ಜೊತೆಗಿನ ಸರ್ಕಾರದ ಸಂಧಾನ ಸಕ್ಸಸ್​: ನಾಳೆಯಿಂದ ಬಸ್​ ರೈಟ್​.. ರೈಟ್​!

Published On - 6:41 pm, Sun, 13 December 20