ವಿನಯ್ ಕುಲಕರ್ಣಿಯ ಸೋದರ ಮಾವ ಅರೆಸ್ಟ್
ವಿನಯ್ ಕುಲಕರ್ಣಿಯ ಸೋದರ ಮಾವ ಚಂದ್ರಶೇಖರ ಇಂಡಿ ಅವರನ್ನು ಬಂಧಿಸಲಾಗಿದೆ.
ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ವಾಸದಲ್ಲಿರುವ ವಿನಯ್ ಕುಲಕರ್ಣಿಯ ಸೋದರ ಮಾವ ಚಂದ್ರಶೇಖರ ಇಂಡಿ ಅವರನ್ನು ಬಂಧಿಸಲಾಗಿದೆ.
ಹಂತಕರಿಗೆ ಶಸ್ತ್ರಾಸ್ತ್ರ ಪೂರೈಸಿರುವ ಆರೋಪದಡಿಯಲ್ಲಿ ವಿಜಯಪುರದ ಚಂದ್ರಶೇಖರನ್ನು ಬಂಧಿಸಿದ್ದು, ನಿನ್ನೆಯಿಂದ (ಡಿಸೆಂಬರ್12) ಸಿಬಿಐ ವಶದಲ್ಲಿದಲ್ಲಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ಬಳಿಕ ಠಾಣೆಗೆ ಕರೆತಂದ ಸಿಬಿಐ ವಿಶೇಷ ನ್ಯಾಯಾಧೀಶರ ಎದುರುಹಾಜರು ಪಡಿಸಿದ್ದಾರೆ.
ಯೋಗೀಶ್ ಗೌಡ ಹತ್ಯೆ ಕೇಸ್: ಪ್ರಮುಖ ಆರೋಪಿ ಕೊಲೆಗೆ ಮಾಜಿ ಸಚಿವರಿಂದ ನಡೆದಿತ್ತಾ ಸ್ಕೆಚ್?