ನಾಳೆಯಿಂದ ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ.. ಬಗ್ಗದ ಸರ್ಕಾರಕ್ಕೆ ಮತ್ತಷ್ಟು ಬಿಸಿ

ಬೆಂಗಳೂರು: ಎಷ್ಟೇ ಮುಷ್ಕರ, ಪ್ರತಿಭಟನೆ ಮಾಡಿದರೂ ಬಗ್ಗದ ಸರ್ಕಾರಕ್ಕೆ ಸಾರಿಗೆ ಸಿಬ್ಬಂದಿ ಇನ್ನಷ್ಟು ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ನಾಳೆಯಿಂದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ. ಪ್ರತಿಭಟನಾ ನಿರತರೊಂದಿಗೆ ಸರ್ಕಾರ ಮಾತುಕತೆಗೆ ಬರುತ್ತಿಲ್ಲ.. ಅಲ್ಲದೆ, ನಾಳೆಯಿಂದ ಖಾಸಗಿ ಬಸ್ ಓಡಿಸುವುದಾಗಿಯೂ ಸಾರಿಗೆ ಸಚಿವರು ಹೇಳಿದ್ದಾರೆ. ಇದರಿಂದ ಕ್ರೋಧಗೊಂಡ ನೌಕರರು ಎಲ್ಲ ಡಿಪೋಗಳಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಒಮ್ಮತದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ನಡುರಾತ್ರಿ ಗಡುವು ನೀಡಿದ ಸಚಿವ ಸವದಿ, ನಾಳೆಯಿಂದ […]

ನಾಳೆಯಿಂದ ಸಾರಿಗೆ ನೌಕರರ ಉಪವಾಸ ಸತ್ಯಾಗ್ರಹ.. ಬಗ್ಗದ ಸರ್ಕಾರಕ್ಕೆ ಮತ್ತಷ್ಟು ಬಿಸಿ
ಸಾಂದರ್ಭಿಕ ಚಿತ್ರ
Edited By:

Updated on: Dec 12, 2020 | 5:21 PM

ಬೆಂಗಳೂರು: ಎಷ್ಟೇ ಮುಷ್ಕರ, ಪ್ರತಿಭಟನೆ ಮಾಡಿದರೂ ಬಗ್ಗದ ಸರ್ಕಾರಕ್ಕೆ ಸಾರಿಗೆ ಸಿಬ್ಬಂದಿ ಇನ್ನಷ್ಟು ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ನಾಳೆಯಿಂದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ.

ಪ್ರತಿಭಟನಾ ನಿರತರೊಂದಿಗೆ ಸರ್ಕಾರ ಮಾತುಕತೆಗೆ ಬರುತ್ತಿಲ್ಲ.. ಅಲ್ಲದೆ, ನಾಳೆಯಿಂದ ಖಾಸಗಿ ಬಸ್ ಓಡಿಸುವುದಾಗಿಯೂ ಸಾರಿಗೆ ಸಚಿವರು ಹೇಳಿದ್ದಾರೆ. ಇದರಿಂದ ಕ್ರೋಧಗೊಂಡ ನೌಕರರು ಎಲ್ಲ ಡಿಪೋಗಳಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಒಮ್ಮತದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ನಡುರಾತ್ರಿ ಗಡುವು ನೀಡಿದ ಸಚಿವ ಸವದಿ, ನಾಳೆಯಿಂದ ಖಾಸಗಿ ಬಸ್ ಬಳಕೆಯ ಎಚ್ಚರಿಕೆ ರವಾನೆ

Published On - 5:11 pm, Sat, 12 December 20