ಕಲಬುರಗಿ, ಬೆಳಗಾವಿಯಲ್ಲಿ ರೈಟ್ ರೈಟ್ ಎಂದ KRSTC.. ಪೊಲೀಸ್ ಭದ್ರತೆಯಲ್ಲಿ ಸಂಚಾರ ಶುರು

|

Updated on: Dec 14, 2020 | 7:52 AM

ಕಲಬುರಗಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಸಂಚಾರ ಆರಂಭವಾಗಿದೆ. ಪೊಲೀಸ್ ಬಂದೋಬಸ್ತ್‌ನಲ್ಲಿ ಬಸ್‌ ಸಂಚಾರ ಆರಂಭ ಮಾಡಲಾಗಿದೆ. ಕಲಬುರಗಿಯಿಂದ ಹೈದರಾಬಾದ್‌ಗೆ ಮೊದಲ ಬಸ್ ತೆರಳಿದೆ.

ಕಲಬುರಗಿ, ಬೆಳಗಾವಿಯಲ್ಲಿ ರೈಟ್ ರೈಟ್ ಎಂದ KRSTC.. ಪೊಲೀಸ್ ಭದ್ರತೆಯಲ್ಲಿ ಸಂಚಾರ ಶುರು
Follow us on

ಕಲಬುರಗಿ: ಸಾರಿಗೆ ಸಿಬ್ಬಂದಿ ಸರ್ಕಾರಿ ನೌಕರರೆಂದು ಪರಿಗಣಿಸಲು ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರ 4ನೇ ದಿನಕ್ಕೆ ಕಾಲಿಟ್ಟಿದೆ. ಕೆಲ ಜಿಲ್ಲೆಗಳಲ್ಲಿ ಸಾರಿಗೆ ನೌಕರರು ಪಟ್ಟು ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಇನ್ನು ಕಲಬುರಗಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಸಂಚಾರ ಆರಂಭವಾಗಿದೆ. ಪೊಲೀಸ್ ಬಂದೋಬಸ್ತ್‌ನಲ್ಲಿ ಬಸ್‌ ಸಂಚಾರ ಆರಂಭ ಮಾಡಲಾಗಿದೆ. ಕಲಬುರಗಿಯಿಂದ ಹೈದರಾಬಾದ್‌ಗೆ ಮೊದಲ ಬಸ್ ತೆರಳಿದೆ.

ಕಲಬುರಗಿ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಹೈದ್ರಾಬಾದ್, ಬೀದರ್​ಗೆ ಬಸ್ ಗಳನ್ನು ಬಿಡಲಾಗಿದೆ. ಬಸ್ ಮುಂದೆ ಪೊಲೀಸ್ ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗಿದೆ. ಪೊಲೀಸ್ ಭದ್ರತೆಯಲ್ಲಿ ಕಲಬುರಗಿ ನಗರದಲ್ಲಿ ಬಸ್ ಸಂಚಾರ ಪ್ರಾರಂಭಿಸಲಾಗಿದೆ.

ಬೆಳಗಾವಿಯಲ್ಲೂ ಬಸ್ ಸಂಚಾರ ಆರಂಭ:
ಬೆಳಗಾವಿಯಲ್ಲೂ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭವಾಗಿದೆ. ಡಿಸಿ ಮಹಾದೇವಪ್ಪ ಮುಂಜಿ ಸಮ್ಮುಖದಲ್ಲಿ, ಪೊಲೀಸ್ ಬಂದೋಬಸ್ತ್‌ನಲ್ಲಿ ಬೆಳಗಾವಿ-ರಾಮದುರ್ಗ ನಡುವೆ ಮೊದಲ KSRTC ಬಸ್ ಸಂಚಾರಕ್ಕೆ ಮುಂದಾಗಿದೆ. ಬಸ್​ಗಳಿಲ್ಲದ ಕಾರಣ ಜನ ಖಾಸಗಿ ಬಸ್​ಗಳ ಮೊರೆ ಹೋಗುತ್ತಿದ್ದು ಖಾಸಗಿ ಬಸ್​ಗಳಲ್ಲಿ ದುಪ್ಪಟ್ಟು ಹಣ ವಸೂಲಿಯಾಗುತ್ತಿದೆ.

ಖಾಸಗಿ ಬಸ್​ ಸಂಚಾರ ಇರುತ್ತೆ: ಖಾಸಗಿ ಬಸ್ ಮಾಲೀಕರ ಫೆಡರೇಷನ್ ಸ್ಪಷ್ಟನೆ

Published On - 7:00 am, Mon, 14 December 20