ಹುಟ್ಟುತ್ತಲೇ ಮೌನಿಯಾದ.. ಕಲೆ ಮೂಲಕ ಗೋಡೆಗಳಿಗೆ ಜೀವ ತುಂಬಿ, ಅದಕ್ಕೆ ಮಾತು ಬರಿಸಿದ್ದಾನೆ!

ಮುದಹದಡಿ ಗ್ರಾಮದ ಯುವಕ ಕಿರಣ್ ಕುಮಾರ್ ಕಷ್ಟಪಟ್ಟು SSLC ವರೆಗೆ ಓದಿ 5 ವರ್ಷ ದಾವಣಗೆರೆಯ Fine Arts ಕೋರ್ಸ್​​ ಮುಗಿಸಿದ್ದಾನೆ. ಈತನಿಗೆ ಮಾತಾಡಲು ಬರಲ್ಲ. ಹಾಗೆಯೇ ಯಾರು ಮಾತಾಡಿದ್ರು ಈತನಿಗೆ ಕೇಳುವುದೂ ಇಲ್ಲಾ. ಇದೇ ಕಾರಣಕ್ಕಾಗಿಯೇ ಎನೋ ದೇವರು ಈತನಿಗೊಂದು ಅದ್ಭುತ ಕಲೆಯನ್ನ ವರವಾಗಿ ಕೊಟ್ಟಿದ್ದಾನೆ..

ಹುಟ್ಟುತ್ತಲೇ ಮೌನಿಯಾದ.. ಕಲೆ ಮೂಲಕ ಗೋಡೆಗಳಿಗೆ ಜೀವ ತುಂಬಿ, ಅದಕ್ಕೆ ಮಾತು ಬರಿಸಿದ್ದಾನೆ!
ಕಲಾವಿದ ಕಿರಣ್ ಕುಮಾರ್
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Dec 14, 2020 | 10:08 AM

ದಾವಣಗೆರೆ: ಆತ ಖಾಲಿ ಗೋಡೆ ಮೇಲೆ ಆಕಾಶ ಸೃಷ್ಟಿಸುತ್ತಾನೆ. ಅಲ್ಲಿ ಕಣ್ಣು ಕುಕ್ಕುವಂತಹ ನಕ್ಷತ್ರಗಳು ಇರುತ್ತವೆ. ಮಾಮೂಲಿ ಮನೆಯನ್ನೆ ಕಲಾ ಕ್ಷೇತ್ರ ಮಾಡುವಷ್ಟು ಚಾಣಾಕ್ಷ. ಹೀಗೆ ಹೊಸ ಲೋಕ ನಿರ್ಮಿಸಿ ಜನರನ್ನ ಆನಂದ ಪಡಿಸುವುದು ಆತನ ಕಾಯಕ. ಇಂತಹ ಅದ್ಭುತ ಕಲಾವಿದನ ಬದುಕು ಸಾಗುವುದು ಕೈ ಸನ್ನೆ ಮತ್ತು ಕಣ್ಣು ಸನ್ನೆಯಿಂದ ಮಾತ್ರ.

ಅಚ್ಚುಕಟ್ಟಾದ ಜೀವನ ಶೈಲಿ: ಈ ಕಾಲದ ಹುಡುಗರಿಗೆ ನಾನೇನು ಕಮ್ಮಿಯಿಲ್ಲ ಎನ್ನುವ ಛಲ ಇರುತ್ತೆ. ಅವರಂತೆಯೇ ಈ ಕಲಾವಿದ. ದಾವಣಗೆರೆ ತಾಲೂಕಿನ ಮುದಹದಡಿ ಗ್ರಾಮದ ಯುವಕ ಕಿರಣ್ ಕುಮಾರ್ ಕಷ್ಟಪಟ್ಟು SSLC ವರೆಗೆ ಓದಿ ಐದು ವರ್ಷ ದಾವಣಗೆರೆಯ ಫೈನ್​​ ಆರ್ಟ್ಸ್​  ಕೋರ್ಸ್​​ ಮುಗಿಸಿದ್ದಾನೆ. ಈತನಿಗೆ ಮಾತಾಡಲು ಬರಲ್ಲ. ಹಾಗೆಯೇ ಯಾರು ಮಾತಾಡಿದ್ರು ಆತನಿಗೆ ಕೇಳುವುದೂ ಇಲ್ಲಾ. ಮಾತು ಬರಲ್ಲ. ಮಾತನಾಡಿದರೂ ಕೇಳಲ್ಲ. ಇದೇ ಕಾರಣಕ್ಕಾಗಿಯೇ ಎನೋ ದೇವರು ಈತನಿಗೊಂದು ಅದ್ಭುತ ಕಲೆಯನ್ನು ವರವಾಗಿ ಕೊಟ್ಟಿದ್ದಾನೆ.

ಬಾಲ್ಯದಲ್ಲಿಯೇ ಚಿತ್ರ ಕಲೆಯಲ್ಲಿ ಆಸಕ್ತಿ ಹೊಂದಿದ್ದ ಕಿರಣ್​ನ ಪ್ರತಿಭೆಯನ್ನು ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ಗುರುತಿಸಿ ಜೀವನಕ್ಕೊಂದು ದಾರಿ ತೋರಿಸಿದ್ದಾರೆ. ಇದರ ಫಲವಾಗಿ ಇಂದು ಕಿರಣ್ ಕುಮಾರ್ ದೊಡ್ಡ ಕಲಾವಿದನಾಗಿದ್ದಾನೆ. ಒಂದು ಕಡೆ ಛೋಟಾ ಭೀಮ್, ಮತ್ತೊಂದು ಕಡೆ ಯಕ್ಷಗಾನ ಕಲಾ ಕೃತಿ ಸೃಷ್ಟಿಸಿದ್ದಾನೆ. ಮನೆ ಅಂಕಣದ ಮೇಲ್ಭಾಗದಲ್ಲಿ ಆಕಾಶ ಸೃಷ್ಟಿಸಿ ಅಲ್ಲಿ ನಕ್ಷತ್ರಗಳ ಚಿತ್ತಾರೆವನ್ನೇ ಮೂಡಿಸಿದ್ದಾನೆ. ಕ್ಷಣದಲ್ಲಿ ಖಾಲಿ ಗೋಡೆಗೆ ಜೀವ ತುಂಬುವ ಶಕ್ತಿ ಈತನ ಕಲೆಗಿದೆ. ಸದಾ ಒಂದಿಲ್ಲೊಂದು ವಿಭಿನ್ನವಾದ ವಿಚಾರಗಳನ್ನ ಇಟ್ಟುಕೊಂಡು ಮನೆಗಳಿಗೆ ಬಣ್ಣ ಹಾಕಿ ಅದರಲ್ಲಿ ಕಲಾತ್ಮಕವಾಗಿ ಹೊಸ ಆವಿಷ್ಕಾರಗಳನ್ನ ಮಾಡುತ್ತಾನೆ.

ಹುಟ್ಟತ್ತಲೇ ಮೌನಿಯಾದ ಈ ಕಲಾವಿದ ಕಲೆಯಿಂದಲೇ ಮನೆ ಮಾತಾದ: ಕಿರಣ್ ಕುಮಾರ್ ಕೂಲಿ ಕಾರ್ಮಿಕನ ಮಗ. ಹುಟ್ಟುತ್ತಲೇ ಈತನಿಗೆ ಮಾತು ಬರಲ್ಲ. ಕಿವಿ ಕೇಳಲ್ಲ. ಹತ್ತಾರು ಕಡೆ ಆಸ್ಪತ್ರೆಗೆ ಸುತ್ತಿದರೂ ಏನೂ ಪ್ರಯೋಜನವಾಗಲಿಲ್ಲ. ಬೇಸತ್ತ ತಂದೆ ಚಿಕಿತ್ಸೆ ಕೊಡಿಸಲಾಗಿಲ್ಲ. ಆದ್ರೆ ಶಿಕ್ಷಣನಾದ್ರೂ ಕೊಡಿಸಬಹುದು ಎಂದು ಈತನಿಗೆ ಶಿಕ್ಷಣ ಕೊಡಿಸಲು ಮುಂದಾದ್ರು. ಇದರ ಫಲವಾಗಿ ಇಂದು ಅದ್ಭುತ ಕಲಾವಿದನಾಗಿದ್ದಾನೆ. ತನ್ನ ಹೆಮ್ಮೆಯ ತಂದೆಯ ಒಬ್ಬನೆ ಮಗ ಕಿರಣ್ ಮಾತನಾಡುವುದು ಬರಿ ಕೈ ಸನ್ನೆ, ಕಣ್ ಸನ್ನೆಯ ಮೂಲಕ.

ಇತನ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಇತನ ಭಾಷೆ ನೀರು ಕುಡಿದಷ್ಟೆ ಸರಳವಾಗಿ ಅರ್ಥವಾಗುತ್ತದೆ. ಹೊಸಬರಿಗೆ ಅರ್ಥ ಮಾಡಿಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತೆ. ಬೆಂಗಳೂರಿಗೆ ಹೋಗಬೇಕು. ಅಲ್ಲಿ ತನ್ನ ಕಲೆಗೆ ಅವಕಾಶ ಸಿಗಬೇಕು. ಹೀಗೆ ಅವಕಾಶ ಸಿಕ್ಕ ಬಳಿಕ ತಂದೆ-ತಾಯಿಗೆ ಮನೆಯೊಂದನ್ನ ಕಟ್ಟಿಸಿಕೊಡಬೇಕು ಎಂಬುವುದು ಈತನ ಜೀವನದ ಮಹಾ ಆಸೆ. ಆ ಅವಕಾಶಕ್ಕಾಗಿ ನಿರಂತರ ಪ್ರಯತ್ನ ಮಾಡುತ್ತಿದ್ದಾನೆ. ಒಮ್ಮೆ ಈತನ ಕಲೆ ನೋಡಿದರೆ ಸಾಕು ಎಂತಹ ವ್ಯಕ್ತಿಯೂ ಸಹ  ಆ ಕಲೆಗೆ ಮೆಚ್ಚುಗೆ ವ್ಯಕ್ತ ಪಡಿಸಲೇ ಬೇಕು ಎನ್ನುವಷ್ಟು ಅದ್ಭುತ ಕಲಾವಿದ ಈತ. -ಬಸವರಾಜ್ ದೊಡ್ಮನಿ