ನಿನ್ನೆ ಭಾನುವಾರ ರಿಚ್ಮಂಡ್ ರಸ್ತೆಯಲ್ಲಿ ಓಲ್ಡ್ ಬ್ಯೂಟೀಸ್ ಹವಾ!

ಒಂದ್ ಕಾಲಕ್ಕೆ ಅವ್ರೆಲ್ಲ ಯಾವ್ ಬಾಲಿವುಡ್​ ಬ್ಯೂಟೀಸ್​ಗೂ ಕಮ್ಮಿ ಇರ್ಲಿಲ್ಲ. ಒಂದ್ಸಲ ರೋಡ್​ಗಿಳಿದ್ರು ಅಂದ್ರೆ ಎಲ್ರಿಗೂ ಸೈಡ್ ಹೊಡೀತಿದ್ರು. ಈಗ್ಲೂ ಅದೇ ಖದರ್, ಅದೇ ಚಾರ್ಮ್​ನ ಮೇಂಟೈನ್ ಮಾಡ್ಕೊಂಡ್ ಬರ್ತಿದ್ದಾರೆ. ಅವ್ರ ಲುಕ್​ಗೇ ಸಿಟಿಮಂದಿ ಫಿದಾ ಆಗಿದ್ರು.

ನಿನ್ನೆ ಭಾನುವಾರ ರಿಚ್ಮಂಡ್ ರಸ್ತೆಯಲ್ಲಿ ಓಲ್ಡ್ ಬ್ಯೂಟೀಸ್ ಹವಾ!
Ayesha Banu

|

Dec 14, 2020 | 3:31 PM

ಬೆಂಗಳೂರು: ವಿಂಟೇಜ್ ಕಾರ್​ಗಿರೋ ಖದರ್ ಈಗಿನ್ ಯಾವ್ ಕಾರ್​ಗಳಿಗೂ ಇಲ್ಲಾ ಬಿಡಿ. ಹೀಗಾಗೇ ನಿನ್ನೆ ಭಾನುವಾರ ಡಿ. 13ರಂದು ಬೆಂಗಳೂರಿನ ರಿಚ್ಮಂಡ್ ಟೌನ್ ರಸ್ತೆಯಲ್ಲಿ ಹಳೇ ಮಾಡೆಲ್​ನ ಟೂ ವೀಲರ್  ಮತ್ತು ಕಾರುಗಳನ್ನ ಪ್ರದರ್ಶನ ಮಾಡಿದ್ರು.

1961ರ ಮಾಡೆಲ್ ಗಾಡಿಗಳಿಂದ ಹಿಡಿದು 2020ರ ತನಕ ಎಲ್ಲಾ ರೀತಿಯ ಟೂ ವೀಲರ್ ಹಾಗೂ ಫೋರ್​ ವೀಲರ್ ಗಾಡಿಗಳಿದ್ವು. ಕೊರೊನಾ ಬಳಿಕ ಇದೇ ಮೊದಲ ಬಾರಿಗೆ ವಿಂಟೇಜ್ ಗಾಡಿಗಳ ಸಮಾಗಮವಾಗಿತ್ತು. ಹಳೇ ಗಾಡಿಗಳನ್ನ ಮೂಲೆ ಗುಂಪು ಮಾಡದೆ ಓಡಿಸ್ಬೋದು ಅನ್ನೋದು ಇವ್ರ ಉದ್ದೇಶವಾಗಿತ್ತು.

ರಿಚ್ಮಂಡ್ ರಸ್ತೆಯಲ್ಲಿ ಓಲ್ಡ್ ಬ್ಯೂಟೀಸ್ ಹವಾ: ಇನ್ನು ಗಾಡಿಗಳನ್ನ ಹಳೆಯದಾದ ತಕ್ಷಣ ಗುಜರಿಗೆ ಹಾಕಿದ್ರೆ ಮುಂದಿನ ಪೀಳಿಗೆಗೆ ಇವುಗಳ ಬಗ್ಗೆ ಮಾಹಿತಿ ಸಿಗೋದಿಲ್ಲ. ಹೀಗಾಗಿ ಅವುಗಳನ್ನ ಮೆಂಟೇನೆನ್ಸ್ ಮಾಡಿಕೊಂಡು ಬಂದ್ರೆ 50ವರ್ಷದ ಬಳಿಕವೂ ನಿಮ್ಮ ಗಾಡಿಗೆ ಲುಕ್ ಇರುತ್ತೆ ಅನ್ನೋದು ಇವ್ರ ಉದ್ದೇಶವಾಗಿತ್ತು. ಹೀಗಾಗೇ ನಗರದ ರಿಚ್ಮಂಡ್ ರಸ್ತೆಯಲ್ಲಿ ಹಳೆಯ ಗಾಡಿಗಳು ಒಂದರ ಹಿಂದೆ ಪೋಸ್ ಕೊಡ್ತಾ ಸಂಚಾರ ಮಾಡಿದ್ವು. ಇವುಗಳ ಲುಕ್​ಗೆ ಜನ ಕೂಡ ಫಿದಾ ಆಗಿದ್ರು.

ಅದೆಷ್ಟೆ ಹೊಸ ಹೊಸ ಮಾಡೆಲ್ ಕಾರ್‌ಗಳು ಎಂಟ್ರಿ ಕೊಡ್ಲಿ. ಓಲ್ಡ್‌ ಈಸ್ ಆಲ್‌ವೇಸ್ ಗೋಲ್ಡ್‌. ಸೋ ಇನ್ನು ಅದೆಷ್ಟ್ ವರ್ಷ ಬಂದ್ರೂ ಇವ್ರ ಚಾರ್ಮ್ ಕಮ್ಮಿ ಆಗಲ್ಲ.

Follow us on

Related Stories

Most Read Stories

Click on your DTH Provider to Add TV9 Kannada