ರಾತ್ರಿ ಊಟಕ್ಕಾಗಿ ಹಣ ಸಂಗ್ರಹಿಸಲು.. ಜೋಳಿಗೆ ಹಿಡಿದು ಭಿಕ್ಷೆ ಬೇಡಿದ ಸಾರಿಗೆ ಸಿಬ್ಬಂದಿ

|

Updated on: Dec 11, 2020 | 6:36 PM

ರಾತ್ರಿ ಊಟಕ್ಕೆ ಹಣ ಸಂಗ್ರಹಿಸಿಲು ಸಾರಿಗೆ ಸಿಬ್ಬಂದಿ ಬಸ್ ನಿಲ್ದಾಣದಲ್ಲಿ ಭಿಕ್ಷಾಟನೆಗೆ ಮುಂದಾದರು. ಜೋಳಿಗೆ ಹಿಡಿದು ಭಿಕ್ಷಾಟನೆಗೆ ಮುಂದಾದ ಮಹಿಳಾ ಸಿಬ್ಬಂದಿ ಸಾರ್ವಜನಿಕರು ಹಾಗೂ ಪೊಲೀಸರ ಬಳಿ ಹಣಕ್ಕಾಗಿ ಬೇಡಿದರು.

ರಾತ್ರಿ ಊಟಕ್ಕಾಗಿ ಹಣ ಸಂಗ್ರಹಿಸಲು.. ಜೋಳಿಗೆ ಹಿಡಿದು ಭಿಕ್ಷೆ ಬೇಡಿದ ಸಾರಿಗೆ ಸಿಬ್ಬಂದಿ
ಜೋಳಿಗೆ ಹಿಡಿದು ಭಿಕ್ಷೆ ಬೇಡಿದ ಸಾರಿಗೆ ಸಿಬ್ಬಂದಿ
Follow us on

ಬೆಳಗಾವಿ: ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರಾಗಿ ಪರಿಗಣಿಸುವಂತೆ ಆಗ್ರಹಿಸಿ ನಗರದ ಬಸ್ ನಿಲ್ದಾಣದಲ್ಲಿ ಸಾರಿಗೆ ನೌಕರರಿಂದ ತೀವ್ರ ಪ್ರತಿಭಟನೆ ನಡೆಯಿತು. ಈ ನಡುವೆ, ರಾತ್ರಿ ಊಟಕ್ಕೆ ಹಣ ಸಂಗ್ರಹಿಸಿಲು ಸಾರಿಗೆ ಸಿಬ್ಬಂದಿ ಬಸ್ ನಿಲ್ದಾಣದಲ್ಲಿ ಭಿಕ್ಷಾಟನೆಗೆ ಮುಂದಾದರು.

ಜೋಳಿಗೆ ಹಿಡಿದು ಭಿಕ್ಷಾಟನೆಗೆ ಮುಂದಾದ ಮಹಿಳಾ ಸಿಬ್ಬಂದಿ ಸಾರ್ವಜನಿಕರು ಹಾಗೂ ಪೊಲೀಸರ ಬಳಿ ಹಣಕ್ಕಾಗಿ ಬೇಡಿದರು. ರಾತ್ರಿ‌ ಊಟಕ್ಕೆ ಹಣ ಸಂಗ್ರಹಿಸುತ್ತಿದ್ದ ಸಾರಿಗೆ ಸಿಬ್ಬಂದಿ ಇದೇ ವೇಳೆ, ಜೋಳಿಗೆಗೆ ಹಣ ಹಾಕುವಂತೆ ಅಲ್ಲೇ ಇದ್ದ DCP ಬಳಿ ಮನವಿ ಮಾಡಿದರು. ಆದರೆ, ನನ್ನ ಬಳಿ ಹಣವಿಲ್ಲ ಎಂದು ಮಹಿಳಾ ಸಿಬ್ಬಂದಿಗೆ ಪೊಲೀಸ್​ ಅಧಿಕಾರಿ ಹೇಳಿದರು ಎಂದು ತಿಳಿದುಬಂದಿದೆ.