ಯಾದಗಿರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಪಡೆಯಲು ಆಪರೇಷನ್ ಕಮಲ? ರಾತ್ರೋರಾತ್ರಿ ಮುಂದೋಯ್ತು ಚುನಾವಣೆ
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಪಡೆಯಲು ಆಪರೇಷನ್ ಕಮಲ ನಡೆಸಲು ಕಲಬುರಗಿ ಜಿಲ್ಲಾ ಬಿಜೆಪಿ ನಾಯಕರು ತೆರೆಮೆರೆಯಲ್ಲಿ ಕಸರತ್ತು ನಡೆಸಿದ್ದರು ಎನ್ನಲಾಗಿತ್ತು. ಈಗ ಚುನಾವಣೆ ಮುಂದೂಡಿದ್ದರಿಂದ ಆಪರೇಷನ್ ಕಮಲ ಕಾರ್ಯಚಾರಣೆಗೆ ಮತ್ತಷ್ಟು ರೆಕ್ಕೆಪುಕ್ಕ ಬಂದಂತಾಗಿದೆ.

ಕಲಬುರಗಿ: ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ನ ಅಧ್ಯಕ್ಷ್ಯ ಮತ್ತು ಉಪಾಧ್ಯಕ್ಷ್ಯ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಬೇಕಿತ್ತು. ಅದಕ್ಕಾಗಿ ಸಿದ್ಧತೆಗಳೂ ಕೂಡಾ ನಡೆದಿದ್ದವು. ಆದರೆ ಗುರುವಾರ ರಾತ್ರಿ ಏಕಾಏಕಿ ಚುನಾವಣೆಯನ್ನು ಮುಂದೂಡಲಾಗಿದೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನ ಪಡೆಯಲು ಕಲಬುರಗಿ ಜಿಲ್ಲಾ ಬಿಜೆಪಿ ನಾಯಕರು ತೆರೆಮೆರೆಯಲ್ಲಿ ಆಪರೇಷನ್ ಕಮಲ ನಡೆಸುತ್ತಿದ್ದಾರೆ ಎನ್ನಲಾಗಿತ್ತು. ಈಗ ಚುನಾವಣೆ ಮುಂದೂಡಿದ್ದರಿಂದ ಆಪರೇಷನ್ ಕಮಲ ಕಾರ್ಯಾಚರಣೆಗೆ ಮತ್ತಷ್ಟು ರೆಕ್ಕೆಪುಕ್ಕ ಬಂದಂತಾಗಿದೆ.
ಗ್ರಾಮ ಪಂಚಾಯತಿ ಚುನಾವಣೆಯ ಪ್ರಕ್ರಿಯೆಗಳು ಮುಗಿಯುವವರೆಗೂ ಚುನಾವಣೆಯನ್ನು ಮುಂದೂಡುವಂತೆ ಆದೇಶ ನೀಡಿದ್ದರಿಂದ ಹೊಸ ವರ್ಷದಲ್ಲಿಯೇ ಅಧ್ಯಕ್ಷ್ಯ ಮತ್ತು ಉಪಾಧ್ಯಕ್ಷ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.
ಬಿಜೆಪಿ ಕೈವಾಡ?: ಗ್ರಾಮ ಪಂಚಾಯತಿ ಚುನಾವಣೆಯ ಹಿನ್ನೆಲೆಯಲ್ಲಿ ಡಿಸೆಂಬರ್ 31ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರಲಿದೆ. ಹೀಗಾಗಿ, ರಾಜ್ಯದಲ್ಲಿನ ಸಹಕಾರಿ ಸಂಘಗಳ ಅಧ್ಯಕ್ಷ್ಯ- ಉಪಾಧ್ಯಕ್ಷ್ಯ ಚುನಾವಣೆಯನ್ನು ಮುಂದೂಡಿ ಸಹಕಾರಿ ಇಲಾಖೆಯ ಜಂಟಿ ಕಾರ್ಯದರ್ಶಿ ಕಳೆದ ರಾತ್ರಿ ಅಧಿಸೂಚನೆ ಹೊರಡಿಸಿದ್ದಾರೆ. ಆದರೆ, ಕಲಬುರಗಿ ಡಿಸಿಸಿ ಬ್ಯಾಂಕ್ನ ಅಧ್ಯಕ್ಷ್ಯ ಮತ್ತು ಉಪಾಧ್ಯಕ್ಷ ಆಯ್ಕೆಯ ಮುನ್ನಾ ದಿನವೇ ಈ ರೀತಿಯಾಗಿ ಆದೇಶ ಹೊರಡಿಸಿದ್ದು ಅನೇಕ ಅಚ್ಚರಿಗೆ ಕಾರಣವಾಗಿದೆ.
ಕಲಬುರಗಿ ಡಿಸಿಸಿ ಬ್ಯಾಂಕ್ಗೆ ಕಳೆದ ನವಂಬರ್ 29 ರಂದು ಚುನಾವಣೆ ನಡೆದಿತ್ತು. ವಾರದ ಹಿಂದೆಯೇ ಕಲಬುರಗಿ ಸಹಾಯಕ ಆಯುಕ್ತ ರಾಮಚಂದ್ರ ಗಡದ್, ಡಿಸೆಂಬರ್ 11 ರಂದು ಅಧ್ಯಕ್ಷ್ಯ ಮತ್ತು ಉಪಾಧ್ಯಕ್ಷ್ಯ ಆಯ್ಕೆಗೆ ಅಧಿಸೂಚನೆ ಹೊರಡಿಸಿದ್ದರು.
ಆದರೆ, ವಾರದವರಗೆ ಇಲ್ಲದ ಬೆಳವಣಿಗೆ, ಚುನಾವಣೆಗೆ ಕೆಲವು ಗಂಟೆಗಳು ಮಾತ್ರ ಬಾಕಿ ಇರುವಾಗ ಮುಂದೂಡಿಕೆಯಾಗಿರುವದು ಅನೇಕ ಅಚ್ಚರಿಗಳಿಗೆ ಕಾರಣವಾಗಿದೆ. ಜೊತೆಗೆ ಕಾಂಗ್ರೆಸ್ ಬೆಂಬಲಿತರಿಗೆ ಅಧ್ಯಕ್ಷ್ಯ ಸ್ಥಾನವನ್ನು ತಪ್ಪಿಸಲು ಇಂತಹದೊಂದು ತಂತ್ರವನ್ನು ಬಿಜೆಪಿ ನಾಯಕರು ಮಾಡಿದ್ದಾರೆ ಅನ್ನೋ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ.
ತೆರೆಮೆರೆಯಲ್ಲಿ ನಡೆದಿತ್ತು ಕಸರತ್ತು: ಬ್ಯಾಂಕ್ ನ ಅಧ್ಯಕ್ಷ್ಯರಾಗಲು ಬಿಜೆಪಿ ಮತ್ತು ಕಾಂಗ್ರೆಸ್ ಬೆಂಬಲಿತರ ನಡುವೆ ತೆರೆಮೆರೆಯ ಕಸರತ್ತು ಪ್ರಾರಂಭವಾಗಿತ್ತು. ವಿಶೇಷ ಎಂದರೆ ಸಂಖ್ಯಾಬಲ ಇಲ್ಲದಿದ್ದರೂ ಕೂಡಾ ಬಿಜೆಪಿ ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿಯಲು ತೆರೆಮರೆಯ ತಂತ್ರ ರೂಪಿಸಿದ್ದರು. ಡಿಸಿಸಿ ಬ್ಯಾಂಕ್ನಲ್ಲಿ ಕೂಡಾ ಆಪರೇಷನ್ ಕಮಲ ನಡೆಸಲು ಮುಂದಾಗಿದ್ದರು. ಆದ್ರೆ ಅದು ಫಲ ನೀಡದ ಹಿನ್ನೆಲೆಯಲ್ಲಿ ಇದೀಗ ಬೇರೆ ತಂತ್ರದ ಮೂಲಕ ಚುನಾವಣೆಯನ್ನು ಮುಂದೂಡಲಾಗಿದೆ ಅಂತ ಹೇಳಲಾಗುತ್ತಿದೆ.
ಕಾಂಗ್ರೆಸ್ ಬೆಂಬಲಿತರಿಗೆ ಸ್ಪಷ್ಟ ಬಹುಮತ: ಕಳೆದ ನವೆಂಬರ್ 29 ರಂದು ನಡೆದಿದ್ದ ಚುನಾವಣೆಯಲ್ಲಿ 13 ನಿರ್ದೇಶಕರ ಪೈಕಿ 9 ಕಾಂಗ್ರೆಸ್ ಬೆಂಬಲಿತರು ಗೆದ್ದಿದ್ದರು. ಬಿಜೆಪಿ ಬೆಂಬಲಿತರು ಕೇವಲ ನಾಲ್ವರು ಮಾತ್ರ ಜಯಗಳಿಸಿದ್ದರು.
13 ಚುನಾಯಿತ ನಿರ್ದೇಶಕರು ಸೇರಿ ಸರ್ಕಾರದ ನಾಮನಿರ್ದೇಶನದ ಓರ್ವ ನಿರ್ದೇಶಕ ಮತ್ತು ಸಹಕಾರ ನಿಬಂಧಕರು, ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿರುವ ಇಬ್ಬರು ಅಧಿಕಾರಿಗಳ ಮತ ಸೇರಿ ಒಟ್ಟು 16 ಮತಗಳು ಆಗಲಿವೆ. ಬಹುಮತಕ್ಕೆ 9 ನಿರ್ದೇಶಕರ ಬೆಂಬಲ ಬೇಕು. ಕಾಂಗ್ರೆಸ್ ಬೆಂಬಲಿತರು 9 ಜನರಿದ್ದಾರೆ.
ಬಿಜೆಪಿ ಸಂಖ್ಯಾಬಲ 7 ಆಗಲಿದೆ. ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿಗೆ ಇನ್ನಿಬ್ಬರ ಬೆಂಬಲ ಬೇಕೇಬೇಕು. ಪರಿಸ್ಥಿತಿ ಹೀಗಿದ್ದರೂ ಬಿಜೆಪಿ ನಾಯಕರು ಹೇಗಾದ್ರು ಮಾಡಿ ಅಧಿಕಾರಿದ ಗದ್ದುಗೆ ಹಿಡಿಯಲು ತಂತ್ರ ರೂಪಿಸಿದ್ದಾರೆ.
ಡಿಸಿಸಿ ಬ್ಯಾಂಕ್ ಅಧ್ಯಕ್ಷ್ಯ ಸ್ಥಾನದ ಮೇಲೆ ಶಾಸಕರ ಕಣ್ಣು: ಕಲಬುರಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ್ಯ ಸ್ಥಾನಕ್ಕೇರಲು ಸೇಡಂ ಕ್ಷೇತ್ರದ ಶಾಸಕ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ್ಯರಾಗಿರುವ ರಾಜಕುಮಾರ್ ಪಾಟೀಲ್ ತೇಲ್ಕೂರ್ ಕೂಡಾ ಯತ್ನ ನಡೆಸಿರುವದು ಮತ್ತಷ್ಟು ಕೂತುಹಲ ಮೂಡಿಸಿದೆ.
ಸರ್ಕಾರ ಕೆಲ ದಿನಗಳ ಹಿಂದೆ ಸಿದ್ದರಾಮರೆಡ್ಡಿ ಅನ್ನೋರನ್ನು ನಾಮನಿರ್ದೇಶ ಮಾಡಿತ್ತು. ಇದೀಗ ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್, ಸಿದ್ದರಾಮರೆಡ್ಡಿ ಅವರ ನಾಮ ನಿರ್ದೇಶನವನ್ನು ರದ್ದುಗೊಳಿಸಿ, ಆ ಸ್ಥಾನಕ್ಕೆ ತಮ್ಮನ್ನು ನಾಮ ನಿರ್ದೇಶನಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಿದ್ದಾರಂತೆ.
ಜೊತೆಗೆ ಕಾಂಗ್ರೆಸ್ ಬೆಂಬಲಿತ ಮೂವರನ್ನು ಆಪರೇಷನ ಕಮಲದ ಮೂಲಕ ಬಿಜೆಪಿಗೆ ಕರೆತಂದು, ಅಧ್ಯಕ್ಷ್ಯ ಸ್ಥಾನವನ್ನು ಅಲಂಕರಿಸಲು ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ್ ಮತ್ತು ಜಿಲ್ಲೆಯ ಬಿಜೆಪಿ ನಾಯಕರು ಕರಸತ್ತು ಪ್ರಾರಂಭಿಸಿದ್ದಾರೆ. ಇದೀಗ ಚುನಾವಣೆ ಮುಂದೂಡಿಕೆಯಾಗಿದ್ದರಿಂದ ಮತ್ತಷ್ಟು ಕಾಲವಕಾಶ ಸಿಕ್ಕಿದ್ದು, ತಮ್ಮ ತಂತ್ರಗಳನ್ನು ಯಶಸ್ವಿಗೊಳಿಸಲು ಬಿಜೆಪಿ ನಾಯಕರು ಕರಸತ್ತು ನಡೆಸುತ್ತಿದ್ದಾರೆ.
ಡಿಸಿಸಿ ಬ್ಯಾಂಕ್ ಮೇಲೆ ಬಿಜೆಪಿ ಕಣ್ಣು, ಸಂಖ್ಯಾಬಲ ಇಲ್ಲದಿದ್ದರು ಕೂಡಾ ಅಧಿಕಾರದ ಗದ್ದುಗೆ ಏರಲು ಕಸರತ್ತು




