ಕೋಡಿಹಳ್ಳಿ ಚಂದ್ರಶೇಖರ್​ಗೂ, ಸಾರಿಗೆ ಸಿಬ್ಬಂದಿಗೂ ಸಂಬಂಧವಿಲ್ಲ; ನೌಕರರೇ ಚರ್ಚೆಗೆ ಬನ್ನಿ- ಸಚಿವ ಸವದಿ

ಕೋಡಿಹಳ್ಳಿ ಚಂದ್ರಶೇಖರ್, ಸಾರಿಗೆ ಸಿಬ್ಬಂದಿಗೆ ಸಂಬಂಧವಿಲ್ಲ. ಕೋಡಿಹಳ್ಳಿ ರೈತ ಮುಖಂಡರು. ಅವರ ಬಗ್ಗೆ ಒಳ್ಳೇ ಅಭಿಪ್ರಾಯವಿದೆ. ಸದ್ಯಕ್ಕೆ, ಸಿಎಂ ಯಡಿಯೂರಪ್ಪನವರು ಕಾದು ನೋಡೋಣ ಅಂದಿದ್ದಾರೆ ಎಂದು ಲಕ್ಷ್ಮಣ ಸವದಿ ಹೇಳಿದರು.

ಕೋಡಿಹಳ್ಳಿ ಚಂದ್ರಶೇಖರ್​ಗೂ, ಸಾರಿಗೆ ಸಿಬ್ಬಂದಿಗೂ ಸಂಬಂಧವಿಲ್ಲ; ನೌಕರರೇ ಚರ್ಚೆಗೆ ಬನ್ನಿ- ಸಚಿವ ಸವದಿ
ಸಾರಿಗೆ ಸಚಿವ ಲಕ್ಷ್ಮಣ ಸವದಿ
KUSHAL V

| Edited By: sadhu srinath

Dec 11, 2020 | 7:04 PM

ಬೆಂಗಳೂರು: ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ಪ್ರತಿಭಟನೆಯಲ್ಲಿ ತೊಡಗಿರುವ ನೌಕರರು ಯಾವಾಗ ಬೇಕಾದರೂ ಬಂದು ನನ್ನ ಜೊತೆ ಚರ್ಚಿಸಬಹುದು. ನನ್ನದು ಒಂದೇ ವಿನಂತಿ, ತಕ್ಷಣ ಹೋರಾಟ ಕೈಬಿಡಬೇಕು. ಈಗಾಗಲೇ ಕೊರೊನಾದಿಂದ ರಾಜ್ಯದ ಜನ ನೊಂದಿದ್ದಾರೆ. ನಾವು ಯಾವಾಗ ಬೇಕಾದರೂ ಸಂಧಾನ ಮಾಡಿಕೊಳ್ಳಬಹುದು. ಮುಖಂಡರು ಯಾವಾಗ ಬೇಕಾದ್ರೂ ಬಂದು ಚರ್ಚಿಸಬಹುದು ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸುದ್ದಿಗೋಷ್ಠಿ ಮೂಲಕ ಪ್ರತಿಭಟನಾನಿರತರಿಗೆ ಮಾತುಕತೆಗೆ ಆಹ್ವಾನ ಕೊಟ್ಟಿದ್ದಾರೆ .

ಸಾರಿಗೆ ನಿಗಮದ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸಾರಿಗೆ ಸಚಿವ ಸವದಿ ಸುದ್ದಿಗೋಷ್ಠಿ ನಡೆಸಿದರು. ಅದಕ್ಕೂ ಮುನ್ನ ವಿಧಾನಸೌಧದಲ್ಲಿ ಸಿಎಂ ಭೇಟಿಯಾದ DCM ಲಕ್ಷ್ಮಣ ಸವದಿ ಸಾರಿಗೆ ನೌಕರರ ಪ್ರತಿಭಟನೆ, ಬೇಡಿಕೆ ಬಗ್ಗೆ BSY ಜೊತೆ ಮಾತುಕತೆ ನಡೆಸಿದರು. ಅದಾದ ಬಳಿಕ ವಿಧಾನಸೌಧದ ಕ್ಯಾಬಿನೆಟ್ ಹಾಲ್​ನಲ್ಲಿ ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಬಿಎಂಟಿಸಿ ಎಂ.ಡಿ ಶಿಖಾ ಹಾಗೂ ಸಾರಿಗೆ ಇಲಾಖೆ ಆಯುಕ್ತ ಅಂಜುಮ್ ಪರ್ವೇಜ್ ಜೊತೆಯೂ ಸಮಾಲೋಚನೆ ಸಹ ನಡೆಸಿದರು.

ನನಗೆ ನಂಬಿಕೆ ಇದೆ, ನಾಳೆ ಎಲ್ಲರೂ ಕರ್ತವ್ಯಕ್ಕೆ ಹಾಜರಾಗುವ ವಿಶ್ವಾಸವಿದೆ. ಬಳಿಕ ಯಾವಾಗ ಬೇಕಾದ್ರೂ ಬಂದು ನನ್ನ ಜೊತೆ ಚರ್ಚಿಸಬಹುದು. ನಾವು ಲಾಭ, ಹಾನಿ ಬಗ್ಗೆ ಯಾವತ್ತೂ ಯೋಚನೆ ಮಾಡಿಲ್ಲ. ನಮ್ಮ ಗುರಿ ಸಾರ್ವಜನಿಕರಿಗೆ ಸೇವೆ ಒದಗಿಸುವುದೊಂದೇ ಎಂದು ಸಚಿವರು ಹೇಳಿದರು.

ಕಾನೂನು ಇದೆ, ಕಾನೂನು ತನ್ನ ಕೆಲಸ ಮಾಡುತ್ತದೆ ಇದೇ ವೇಳೆ.. ಕೋಡಿಹಳ್ಳಿ ಚಂದ್ರಶೇಖರ್​ಗೂ, ಸಾರಿಗೆ ಸಿಬ್ಬಂದಿಗೂ ಸಂಬಂಧವಿಲ್ಲ. ಕೋಡಿಹಳ್ಳಿ ರೈತ ಮುಖಂಡರು. ಅವರ ಬಗ್ಗೆ ಒಳ್ಳೇ ಅಭಿಪ್ರಾಯವಿದೆ. ಸದ್ಯಕ್ಕೆ, ಸಿಎಂ ಯಡಿಯೂರಪ್ಪನವರು ಕಾದು ನೋಡೋಣ ಅಂದಿದ್ದಾರೆ. ಸಾರಿಗೆ ಸಿಬ್ಬಂದಿ ಪ್ರತಿಭಟನೆ ಮಾಡ್ತಿಲ್ಲ, ಕೆಲಸ ಸ್ಥಗಿತಗೊಳಿಸಿದ್ದಾರೆ. ನಾನು ಕಾಯುತ್ತಾ ಕುಳಿತಿರುತ್ತೇನೆ, ಚರ್ಚೆಗೆ ಬರಲಿ ಎಂದು ಸವದಿ ಹೇಳಿದರು. ಕಾನೂನು ಇದೆ, ಕಾನೂನು ತನ್ನ ಕೆಲಸ ಮಾಡುತ್ತದೆ. ಈಗಲೇ ನಾವು ಕಾನೂನು ಜಾರಿ ಮಾಡಲು ಹೋಗುವುದಿಲ್ಲ ಎಂದು ಲಕ್ಷ್ಮಣ ಸವದಿ ಹೇಳಿದರು.

ರಾತ್ರಿ ಊಟಕ್ಕಾಗಿ ಹಣ ಸಂಗ್ರಹಿಸಲು.. ಜೋಳಿಗೆ ಹಿಡಿದು ಭಿಕ್ಷೆ ಬೇಡಿದ ಸಾರಿಗೆ ಸಿಬ್ಬಂದಿ

Explainer | ಆಂಧ್ರ ಸಾರಿಗೆ ನಿಗಮ ಸಿಬ್ಬಂದಿ ಈಗ ರಾಜ್ಯ ಸರ್ಕಾರಿ ನೌಕರರು: ಏನಿದು ‘ಆಂಧ್ರ ಮಾಡೆಲ್‘?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada