ಕೊರೊನಾ ಭೂತದಿಂದಲೇ ಕೊರೊನಾ ಪರೀಕ್ಷೆ.. ಧಾರವಾಡದಲ್ಲೊಂದು ವಿಚಿತ್ರ ಘಟನೆ

ಕೊರೊನಾ ಇಲ್ಲವೆಂಬ ಭ್ರಮೆಯಲ್ಲಿ ಸಾಮಾಜಿಕ ಅಂತರ ಮರೆತು ಮಾಸ್ಕ್ ಧರಿಸದೆ ಓಡಾಡುವ ಜನರಿಗಾಗಿಯೇ ಧಾರವಾಡ ಜಿಲ್ಲಾಡಳಿತ ವಿಶೇಷ ಜಾಗೃತಿ ಕೈಗೊಂಡಿದೆ. ಮಾಸ್ಕ್ ಧರಿಸದೇ ಓಡಾಡುವ ಜನರನ್ನು ಕೊರೊನಾ ಭೂತವೇ ಕೋವಿಡ್ ಪರೀಕ್ಷೆ ಮಾಡಿಸುತ್ತದೆ.

ಕೊರೊನಾ ಭೂತದಿಂದಲೇ ಕೊರೊನಾ ಪರೀಕ್ಷೆ.. ಧಾರವಾಡದಲ್ಲೊಂದು ವಿಚಿತ್ರ ಘಟನೆ
ಕೊರೊನಾ ಭೂತ
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Dec 11, 2020 | 6:19 PM

ಧಾರವಾಡ: ಅಲ್ಲೊಂದು ಕಪ್ಪು ಬಣ್ಣದ ಭೂತ ಬಂದಿತ್ತು. ಅದು ರಸ್ತೆಯಲ್ಲಿ ಓಡಾಡೋರ ಮೇಲೆ ಕಣ್ಣಿಟ್ಟಿತ್ತು. ಯಾರು ಮಾಸ್ಕ್ ಧರಿಸಿರಲಿಲ್ಲವೋ ಅಂಥವರನ್ನು ಎತ್ತಿಕೊಂಡು ಹೋಗಿ ಕೊರೊನಾ ಪರೀಕ್ಷೆ ಮಾಡಿಸುತ್ತಿತ್ತು. ಜನರು ಆ ಭೂತ ತಮ್ಮತ್ತ ಓಡಿ ಬರುತ್ತಲೇ ಭಯಗೊಂಡು ಮಾಸ್ಕ್ ಧರಿಸಲು ಮುಂದಾಗುತ್ತಿದ್ದರು. ಇಂಥ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ವಿದ್ಯಾಕಾಶಿ ಧಾರವಾಡ.

ಜನರಿಗೆ ಕೋವಿಡ್ ಪರೀಕ್ಷೆ ಮಾಡುವ ಭೂತ: ದೇಶದಲ್ಲಿ ಕೊರೊನಾ ಬಗ್ಗೆ ಜನರು ಇದೀಗ ನಿರ್ಲಕ್ಷ್ಯ ಮಾಡಿದ್ದಾರೆ. ಅದಾಗಲೇ ಕೊರೊನಾ ದೇಶ ಬಿಟ್ಟು ಹೋಗಿಬಿಟ್ಟಿದೆ ಅನ್ನೋ ಮನಸ್ಥಿತಿಗೆ ಜನರು ಬಂದು ಬಿಟ್ಟಿದ್ದಾರೆ. ಆದರೆ ಇದೀಗ ಕೊರೊನಾದ ಎರಡನೇ ಅಲೆ ಆರಂಭವಾಗಿದೆ. ಒಂದು ವೇಳೆ ಜನರು ಇದೇ ರೀತಿ ನಿರ್ಲಕ್ಷ್ಯತನ ತೋರಿದರೆ ಮತ್ತಷ್ಟು ಜೀವಗಳು ಬಲಿಯಾಗೋದು ಗ್ಯಾರಂಟಿ.

ಇದೇ ಕಾರಣಕ್ಕೆ ಸರಕಾರ ಯಾವುದೇ ಕಾರಣಕ್ಕೂ ಈ ವಿಚಾರವನ್ನು ಕಡೆಗಣಿಸಬಾರದು ಅಂತಾ ನಿರ್ಧರಿಸಿದೆ. ಹೀಗಾಗಿ ಅನೇಕ ಕಾರ್ಯಕ್ರಮಗಳನ್ನು ತರುತ್ತಲೇ ಇರುತ್ತೆ. ಅಂಥದ್ದರಲ್ಲಿ ಧಾರವಾಡ ಜಿಲ್ಲಾಡಳಿತ ನಡೆಸಿದ ವಿಶೇಷ ಜಾಗೃತಿ ಅಂದರೆ ಅದು ಕೊರೊನಾ ಭೂತವೇ ಜನರಿಗೆ ಕೋವಿಡ್ ಪರೀಕ್ಷೆ ಮಾಡಿಸೋದು.

ನಗರದ ಸಿಬಿಟಿ ನಿಲ್ದಾಣದಲ್ಲಿ ಜನರು ಮಾಸ್ಕ್ ಧರಿಸದೇ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳದೇ ಕೊರೊನಾ ಬಗ್ಗೆ ನಿರ್ಲಕ್ಷ ಧೋರಣೆ ಅನುಸರಿಸುತ್ತಿದ್ದರು. ಅಂಥವರಿಗಾಗಿಯೇ ಜಿಲ್ಲಾಡಳಿತ ಕೊರೊನಾ ವೈರಾಣು ನಿಯಂತ್ರಣಕ್ಕೆ ಮಾಸ್ಕ್ ಧರಿಸುವಿಕೆ , ದೈಹಿಕ ಅಂತರ ಪಾಲನೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕೊರೊನಾ ವೈರಾಣು ವೇಷಧಾರಿಯೊಬ್ಬರನ್ನು ಸಿದ್ಧ ಮಾಡಿತ್ತು. ಆ ವ್ಯಕ್ತಿ ನಗರದ ವಿವಿಧ ಕಡೆಗಳಲ್ಲಿ ಸಂಚರಿಸಿ, ಮಾಸ್ಕ್ ಧರಿಸದವರನ್ನು ಎತ್ತಿಕೊಂಡು ಹೋಗಿ ಕೊರೊನಾ ಟೆಸ್ಟ್ ಮಾಡಿಸಿದ್ದು ವಿಶೇಷವಾಗಿತ್ತು.

ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಅವರ ಪರಿಕಲ್ಪನೆಯಲ್ಲಿ ಈ ಕಾರ್ಯ ಕೈಗೊಂಡಿದ್ದು, ಪ್ರತಿನಿತ್ಯ ಮಾಸ್ಕ್ ಧರಿಸದ ವ್ಯಕ್ತಿಗಳನ್ನು ಕೊರೊನಾ ತಪಾಸಣೆಗೆ ಒಳಪಡಿಸುವ ಕಾರ್ಯಾಚರಣೆ ವೇಳೆಯಲ್ಲಿ ಕಲಾವಿದರೊಬ್ಬರನ್ನು ಬಳಸಿಕೊಂಡು ಅವರಿಗೆ ಕೊರೊನಾ ವೈರಾಣು ವೇಷ ಹಾಕಿಸಿ, ಜನ ನಿಬಿಡ ಸ್ಥಳಗಳಲ್ಲಿ ಹಠಾತ್ ಕಳಿಸಿ, ಮಾಸ್ಕ್ ಧರಿಸದ ವ್ಯಕ್ತಿಗಳನ್ನು ಕೋವಿಡ್ ತಪಾಸಣೆಗೆ ಕರೆತರುವ ಕಾರ್ಯಾಚರಣೆಯನ್ನು ಜಿಲ್ಲೆಯಲ್ಲಿ ಮಾಡಲಾಗುತ್ತಿದೆ.

ಎತ್ತಿಕೊಂಡು ಹೋಗಿ ಕೊರೊನಾ ಟೆಸ್ಟ್ ಮಾಡಿಸಲಾಗುತ್ತೆ: ನಾದ ಝೇಂಕಾರ ಸಂಸ್ಥೆಯ ಯಮನಪ್ಪ ಜಾಲಗಾರ ಅವರು ತಮ್ಮ ತಂಡದ ಬಸವರಾಜ ಗುಡ್ಡಪ್ಪನವರಿಗೆ ಕೊರೊನಾ ವೇಷ ತೊಡಿಸಿ, ಜನರ ಮಧ್ಯೆ ಕಳಿಸುತ್ತಿದ್ದಾರೆ. ಪ್ರಸಾದನ ಕಲಾವಿದ ಸಂತೋಷ ಮಹಾಲೆ ಈ ವೇಷ ಭೂಷಣ ಸಿದ್ಧಪಡಿಸಿದ್ದಾರೆ. ಜನರು ಈ ವ್ಯಕ್ತಿಯನ್ನು ನೋಡುತ್ತಲೇ ಭಯಗೊಂಡು, ಓಡಿ ಹೋಗಲು ಮುಂದಾಗುತ್ತಿದ್ದಾರೆ.

ಆದರೆ ಆ ಕೊರೊನಾ ಭೂತ ಅಷ್ಟು ಸುಲಭವಾಗಿ ಅವರನ್ನು ಬಿಡೋದೇ ಇಲ್ಲ. ಅವರು ತಪ್ಪಿಸಿಕೊಳ್ಳಲು ಯತ್ನಿಸಿದರೆ ಅಂಥವರನ್ನು ಹಿಡಿದು ತಂದು, ಕೊರೊನಾ ತಪಾಸಣೆ ಮಾಡಿಸುತ್ತದೆ. ಆ ಮೂಲಕ ನೀವು ಕೊರೊನಾ ಬಗ್ಗೆ ಎಷ್ಟೇ ಗಮನ ಹರಿಸಿದರೂ ಅದು ನಿಮ್ಮನ್ನು ಬಿಡೋದಿಲ್ಲ. ಅಂಥ ವೇಳೆಯಲ್ಲಿ ಹೀಗೆ ನಿರ್ಲಕ್ಷ ತೋರಿಸುವುದು ಸರಿಯಲ್ಲ ಅನ್ನೋದನ್ನು ಜನರಿಗೆ ಮನದಟ್ಟಾಗುವಂತೆ ತಿಳಿಸಿ ಹೇಳಲಾಗುತ್ತಿದೆ.

ವಿಪರ್ಯಾಸ ಜಿಲ್ಲಾಡಳಿತದ ಈ ಹೊಸ ಬಗೆಯ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ. ಅದರಲ್ಲೂ ಜನನಿಬಿಡ ಪ್ರದೇಶದಲ್ಲಿ ಈ ಕಾರ್ಯಕ್ರಮ ನಡೆಯುತ್ತಿರೋದ್ರಿಂದ ಜನರು ಕೊರೊನಾ ಬಗ್ಗೆ ಮತ್ತಷ್ಟು ಜಾಗೃತಿ ಹೊಂದಲು ಅವಕಾಶ ನೀಡಿದಂತಾಗುತ್ತದೆ. ವಿಪರ್ಯಾಸವೆಂದ್ರೆ ಕೊರೊನಾ ಭೂತವೇ ಸ್ವತಃ ಮಾಸ್ಕ್​ ಹಾಕಿರಲಿಲ್ಲ! -ನರಸಿಂಹಮೂರ್ತಿ ಪ್ಯಾಟಿ

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್