Tumakuru: ಮತದಾರನ ಎರಡೂ ಕೈ ತೋರು ಬೆರಳಿಗೆ ಶಾಹಿ: ತುಮಕೂರಿನಲ್ಲಿ ಅಪರೂಪದ ಘಟನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Apr 26, 2024 | 4:42 PM

ತುಮಕೂರಿನ ಪಿಡ್ಬ್ಲೂಡಿ ಕ್ವಾರ್ಟರ್ಸ್ ಮತ ಕೇಂದ್ರ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ. ಕಣ್ಣು ಕಾಣದ ವೃದ್ದ ಮತದಾರ ಓರ್ವರಿಗೆ ಮತ ಹಾಕಲು ಸಹಾಯ ಮಾಡಿದ ಕಾಂಗ್ರೆಸ್ ಮುಖಂಡನ ಎರಡೂ ಕೈಯ ತೋರು ಬೆರಳಿಗೆ ಚುನಾವಣಾ ಸಿಬ್ಬಂದಿ ಶಾಹಿ ಹಾಕಿದ್ದಾರೆ. ಇಕ್ಬಾಲ್ ಅಹ್ಮದ್ ತಮ್ಮ ಹಕ್ಕು ಚಲಾಯಿಸಿದಕ್ಕೆ ಎಡಗೈ ತೋರು ಬೆರಳಿಗೆ ಶಾಹಿ ಹಾಕಿದ್ದರೆ, ಇನ್ನೊಬ್ಬರಿಗೆ ಸಹಾಯ ಮಾಡಿದ ಸಂಕೇತವಾಗಿ ಬಲಗೈ ತೋರು ಬೆರಳಿಗೆ ಇಂಕ್ ಹಾಕಲಾಗಿದೆ.

Tumakuru: ಮತದಾರನ ಎರಡೂ ಕೈ ತೋರು ಬೆರಳಿಗೆ ಶಾಹಿ: ತುಮಕೂರಿನಲ್ಲಿ ಅಪರೂಪದ ಘಟನೆ
ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮ್ಮದ್, ಮಕ್ಬುಲ್ ಅಹ್ಮದ್
Follow us on

ತುಮಕೂರು, ಏಪ್ರಿಲ್​ 26: ದೇಶದಲ್ಲಿ ಎರಡನೇ ಹಂತದ ರಾಜ್ಯದಲ್ಲಿ ಮೊದಲನೇ ಹಂತದಲ್ಲಿ ಮತದಾನ (Voter) ನಡೆಯುತ್ತಿದೆ. ರಾಜ್ಯದೆಲ್ಲೆಡೆ ಬಿರುಸಿನ ಮತದಾನ ನಡೆಯುತ್ತಿದೆ. ಪ್ರತಿಯೊಬ್ಬರು ಕೂಡ ಮತಗಟ್ಟೆಗಳಿಗೆ ಆಗಮಿಸುವ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ. ಇದರ ನಡುವೆ ತುಮಕೂರಿನ (Tumakuru) ಪಿಡ್ಬ್ಲೂಡಿ ಕ್ವಾರ್ಟರ್ಸ್ ಮತ ಕೇಂದ್ರ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗಿದೆ. ಕಣ್ಣು ಕಾಣದ ವೃದ್ದ ಮತದಾರ ಓರ್ವರಿಗೆ ಮತ ಹಾಕಲು ಸಹಾಯ ಮಾಡಿದ ಕಾಂಗ್ರೆಸ್ ಮುಖಂಡನ ಎರಡೂ ಕೈಯ ತೋರು ಬೆರಳಿಗೆ ಚುನಾವಣಾ ಸಿಬ್ಬಂದಿ ಶಾಹಿ ಹಾಕಿದ್ದಾರೆ.

ಈದ್ಗಾ ಮೊಹಲ್ಲಾ ವಾಸಿ 80 ವರ್ಷದ ಮಕ್ಬುಲ್ ಅಲಿಯಾಸ್ ವಾಟೆಗೆ ಮತಯಂತ್ರದ ಬಟನ್​​ ಒತ್ತಲು ಬಲಗೈ ತೊರು ಬೆರಳು ಇಲ್ಲ. ಜೊತೆಗೆ ಕಣ್ಣು ಸರಿಯಾಗಿ ಕಾಣಿಸುವುದಿಲ್ಲ. ಹೀಗಾಗಿ ಈ ವೇಳೆ ಮಕ್ಬುಲ್ ಅಹ್ಮದ್ ಸರತಿ ಸಾಲಿನಲ್ಲಿ ನಿಂತಿದ್ದ ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮ್ಮದ್​ರ ಸಹಾಯ ಕೇಳಿದ್ದಾರೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ: ಮತದಾನದ ವೇಳೆ ಕೆಲವೆಡೆ ಗದ್ದಲ, ಗೊಂದಲ, ಎಲ್ಲೆಲ್ಲಿ ಏನೇನನಾಯ್ತು? ಇಲ್ಲಿದೆ ವಿವರ

ವೃದ್ಧ ಮಕ್ಬುಲ್ ಹೇಳಿದ ಅಭ್ಯರ್ಥಿಯ ಕ್ರಮ ಸಂಖ್ಯೆಗೆ ಕೈ ಹಿಡಿದು ಇಕ್ಬಾಲ್ ಅಹ್ಮದ್ ಬಟನ್ ಒತ್ತಿಸಿದ್ದಾರೆ. ಸಹಾಯ ಮಾಡಿದ್ದರಿಂದ ಇಕ್ಬಾಲ್ ಅಹ್ಮದ್​ರ ಬಲಗೈ ತೋರು ಬೆರಳಿಗೂ ಚುನಾವಣಾ ಸಿಬ್ಬಂದಿಗಳು ಶಾಹಿ ಹಾಕಿದ್ದಾರೆ. ಇಕ್ಬಾಲ್ ಅಹ್ಮದ್ ತಮ್ಮ ಹಕ್ಕು ಚಲಾಯಿಸಿದಕ್ಕೆ ಎಡಗೈ ತೋರು ಬೆರಳಿಗೆ ಶಾಹಿ ಹಾಕಿದ್ದರೆ, ಇನ್ನೊಬ್ಬರಿಗೆ ಸಹಾಯ ಮಾಡಿದ ಸಂಕೇತವಾಗಿ ಬಲಗೈ ತೋರು ಬೆರಳಿಗೆ ಇಂಕ್ ಹಾಕಲಾಗಿದೆ. ಅತ್ತ ವೃದ್ದ ಮಕ್ಬುಲ್ ಅಹ್ಮದ್​ರ ಎಡಗೈ ತೊರು ಬೆರಳಿಗೂ ಶಾಹಿ ಹಚ್ಚಲಾಗಿದೆ.

ಕೆಟ್ಟು ನಿಂತ ಮತಯಂತ್ರ, ಕಾದುಕುಳಿತ ಮತದಾರರು

ಜಿಲ್ಲೆಯ ತುರುವೇಕೆರೆ ತಾಲೂಕಿನ ತಾಳಕೆರೆ ಗ್ರಾಮದಲ್ಲಿ ಇವಿಎಂ ಯಂತ್ರದಲ್ಲಿ ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಮತದಾನ ಸ್ಥಗಿತವಾಗಿದೆ. ಮತಯಂತ್ರ ಸರಿಪಡಿಸಲು ಚುನಾವಣಾ ಅಧಿಕಾರಿಗಳು ಪರದಾಡಿದ್ದು, ಇತ್ತ ಕಳೆದ ಒಂದೂವರೆ ಗಂಟೆಯಿಂದ ಮತದಾನಕ್ಕಾಗಿ ಜನರು ಕಾಯುತ್ತಿದ್ದಾರೆ.

ಉಡುಪಿಯಿಂದ ಆಗಮಿಸಿ ಮತ ಚಲಾಯಿಸಿದ ನ್ಯಾಯಾಧೀಶ R​.S.ಜೀತು

ಉಡುಪಿಯಿಂದ ಆಗಮಿಸಿ ನ್ಯಾಯಾಧೀಶ R​.S.ಜೀತು ಮತ ಚಲಾಯಿಸಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕೆ.ಪಾಲಸಂದ್ರದಲ್ಲಿರುವ ಮತಗಟ್ಟೆ ಸಂಖ್ಯೆ 114ರಲ್ಲಿ ಮತದಾನ ಮಾಡಿದ್ದಾರೆ. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಲ್ಲರೂ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ.

ಮತದಾನ ಬಳಿಕ ಸಾವನ್ನಪ್ಪಿದ ಅಜ್ಜ

ಮಂಡ್ಯ: ಚನ್ನೇಗೌಡನಹಳ್ಳಿಯಲ್ಲಿ ಮತದಾನ ಬಳಿಕ ವೃದ್ಧ ಕೊನೆಯುಸಿರೆಳೆದಿರುವಂತಹ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಚನ್ನೇಗೌಡನಹಳ್ಳಿಯಲ್ಲಿ ನಡೆದಿದೆ. ಕಾಲು ನೋವಿನಿಂದ ಬಳಲುತ್ತಿದ್ದ ಕುಂದೂರಯ್ಯ(87) ಮೃತ ವೃದ್ಧ. ಇಂದು ಬೆಳಗ್ಗೆಯೇ ಮತದಾನ ಮಾಡಿದ್ದರು. ಬಳಿಕ ಮನೆಗೆ ಬಂದ ಮೇಲೆ ಮೃತಪಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:41 pm, Fri, 26 April 24