Tumakur: ಒಂದೇ ಏರಿಯಾದಲ್ಲಿ 6 ವಿದ್ಯಾರ್ಥಿಗಳು ಸೇರಿ 21 ಜನರಿಗೆ ಕಚ್ಚಿದ ಹುಚ್ಚು ನಾಯಿ

| Updated By: ವಿವೇಕ ಬಿರಾದಾರ

Updated on: Dec 23, 2022 | 7:33 PM

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ವಿದ್ಯಾನಗರದಲ್ಲಿ ಒಂದೇ ಏರಿಯಾದಲ್ಲಿ ಬರೋಬ್ಬರಿ 21 ಜನರಿಗೆ ಹುಚ್ಚುನಾಯಿ ಕಚ್ಚಿದೆ.

Tumakur: ಒಂದೇ ಏರಿಯಾದಲ್ಲಿ 6 ವಿದ್ಯಾರ್ಥಿಗಳು ಸೇರಿ 21 ಜನರಿಗೆ ಕಚ್ಚಿದ ಹುಚ್ಚು ನಾಯಿ
ಹುಚ್ಚು ನಾಯಿ ಕಡಿತದಿಂದ ಗಾಯ
Follow us on

ತುಮಕೂರು: ಕಳೆದ ಕೆಲವು ದಿನಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ್ದು, ಅನೇಕ ಜನರು ಗಾಯಗೊಂಡಿದ್ದಾರೆ. ಹಾಗೇ ಈಗ ತುಮಕೂರು (Tumakur) ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ವಿದ್ಯಾನಗರದಲ್ಲಿ ಒಂದೇ ಏರಿಯಾದಲ್ಲಿ ಬರೋಬ್ಬರಿ 21 ಜನರಿಗೆ ಹುಚ್ಚುನಾಯಿ ಕಚ್ಚಿದೆ (Dog Bite). ಇಂದು (ಡಿ.23) ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗಳ (Students) ಮೇಲೆ ನಾಯಿ ದಾಳಿ ಮಾಡಿದೆ. ಇದರಿಂದ 6 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕ್ಕನಾಯಕನಹಳ್ಳಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಒಂದೇ ವರ್ಷದಲ್ಲಿ 6,553 ಜನರ ಮೇಲೆ ದಾಳಿ ಮಾಡಿ, ಕಚ್ಚಿದ ಬೀದಿ ನಾಯಿಗಳು

ಉತ್ತರ ಕನ್ನಡ: ಬಹುತೇಕ ಅರಣ್ಯವನ್ನೇ ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಕಾಟಕ್ಕಿಂತ ಬೀದಿ ನಾಯಿಗಳ ಉಪಟಳವೇ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಬರೋಬ್ಬರಿ 6,500 ಕ್ಕೂ ಹೆಚ್ಚು ಜನರಿಗೆ ಬೀದಿ ನಾಯಿಗಳು ಕಚ್ಚಿದ್ದು ಇದೀಗ ಬೀದಿನಾಯಿಗಳಿಗೆ ಜನ ಭಯಪಡುವಂತಾಗಿದೆ.

ಬೆಂಗಳೂರು ಸೇರಿದಂತೆ ದೊಡ್ಡ ದೊಡ್ಡ ನಗರದಲ್ಲಿ ಬೀದಿನಾಯಿಗಳ ದಾಳಿಯಿಂದ ಜನ ಬೇಸತ್ತು ಹೋಗಿದ್ದಾರೆ. ಆದರೆ ಬಹುತೇಕ ಅರಣ್ಯವನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಕಾಡುಪ್ರಾಣಿಗಳಿಗಿಂತ ನಾಯಿಗಳ ದಾಳಿಗೆ ಒಳಗಾದವರೇ ಹೆಚ್ಚಾಗುತಿದ್ದಾರೆ. ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಬೀದಿ ನಾಯಿಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತಿದೆ. ಅವು ರಸ್ತೆಯಲ್ಲಿ ಸಂಚರಿಸುವ ಜನ, ವಾಹನಗಳ ಮೇಲೆ ಮುಗಿಬೀಳುತಿದ್ದು ಈ ವರ್ಷದಲ್ಲೇ 6,533 ಜನರು ನಾಯಿಯ ದಾಳಿಗೆ ಒಳಗಾಗಿದ್ದಾರೆ.

ಇದನ್ನೂ ಓದಿ: ರೇಬೀಸ್ ಇನ್ನು ಅಧಿಸೂಚಿತ ಕಾಯಿಲೆ, ನಾಯಿ ಕಡಿತದ ರೇಬೀಸ್ ಕಾಯಿಲೆ 2030ರೊಳಗೆ ಸಂಪೂರ್ಣವಾಗಿ ನಿರ್ಮೂಲನೆ: ಆರೋಗ್ಯ ಸಚಿವ ಸುಧಾಕರ್

ಅದರೆ ಕಾಡುಪ್ರಾಣಿಗಳಿಂದ ದಾಳಿಗೊಳಗಾಗಿದ್ದು 349 ಪ್ರಕರಣಗಳು ಮಾತ್ರ ದಾಖಲಾಗಿವೆ. ಬೀದಿ ನಾಯಿಗಳು ಮಕ್ಕಳು, ಮಹಿಳೆಯರು ವೃದ್ಧರ ಮೇಲೆ ಹೆಚ್ಚು ದಾಳಿ (dog bite) ನಡೆಸುತಿದೆ. ಹೀಗಾಗಿ ನಾಯಿಗಳನ್ನು ಹಿಡಿದು ಅವುಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡುವಂತೆ ಸಾರ್ವಜನಿಕರು ಜಿಲ್ಲಾಡಳಿತವನ್ನು  ಒತ್ತಾಯಿಸಿದ್ದಾರೆ.

ಸದ್ಯ ಜಿಲ್ಲೆಯಲ್ಲಿ ಪಶುಸಂಗೋಪನಾ ಇಲಾಖೆ ಮಾಹಿತಿಯಂತೆ 7 ಸಾವಿರಕ್ಕೂ ಹೆಚ್ಚು ಬೀದಿನಾಯಿಗಳಿವೆ. ಸಂತಾನಹರಣ ಚಿಕಿತ್ಸೆ ಮಾಡದ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ನಾಯಿಗಳ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿವೆ. ಜಿಲ್ಲೆಯಲ್ಲಿ ನಾಯಿಗಳ ಕಡಿತದ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತಿದ್ದಂತೆ ಎಚ್ಚೆತ್ತ ಸ್ಥಳೀಯ ಆಡಳಿತ ನಾಯಿ ಹಿಡಿದು ಸಂತಾನಹರಣ ಚಿಕಿತ್ಸೆಗೆ ಮುಂದಾಗಿದೆ.

ಇದನ್ನೂ ಓದಿ:  ಆರಗ ಜ್ಞಾನೇಂದ್ರ ಕ್ಷೇತ್ರದ ಗ್ರಾಮಸ್ಥರಿಗೆ ಸಾವಿನ ನೋವಿಗಿಂತ ಅಂತ್ಯಸಂಸ್ಕಾರ ಮಾಡುವುದೇ ಸಂಕಟಮಯ!

ಆದರೆ ಕೆಲ ತಾಲೂಕುಗಳಲ್ಲಿ ನಾಯಿಗಳ ಸಂತಾನಹರಣ ಚಿಕಿತ್ಸೆ ಮಾಡುವ ಬದಲು ನೂರಾರು ನಾಯಿಗಳನ್ನು ಹಿಡಿದು ಕಾಡಿನಲ್ಲಿ ಬಿಟ್ಟು ಬರುತಿದ್ದಾರೆ. ಹೀಗಾಗಿ ನಾಯಿಗಳು ಅಲ್ಲಿನ ಪ್ರಾಣಿಗಳಿಗೆ ಆಹಾರವಾಗುತ್ತಿವೆ. ಇದರಿಂದ ಪ್ರಾಣಿ ಪ್ರಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಎಡಿಸಿ ರಾಜು ಮೋಗವಿರ ಅವರು ಆದಷ್ಟು ಶೀಘ್ರವೇ ನಾಯಿಗಳನ್ನ ಹಿಡಿದು ಸಂತಾನಹರಣ ಚಿಕಿತ್ಸೆ ಮತ್ತು ಇತರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತೆ ಎನ್ನುವ ಭರವಸೆ ನೀಡಿದ್ದಾರೆ.

ಸದ್ಯ ಜಿಲ್ಲೆಯಲ್ಲಿ ನಾಯಿಗಳ ಕಾಟದಿಂದ ಜನ ಬೇಸತ್ತು ಹೋಗಿದ್ದಾರೆ. ಆದರೆ ನಿಯಮದ ಪ್ರಕಾರ ನಡೆದುಕೊಳ್ಳಬೇಕಿದ್ದ ಸ್ಥಳೀಯ ಆಡಳಿತವು ನಾಯಿಗಳನ್ನು ಹಿಡಿದು ಕಾಡಿಗೆ ಬಿಡುತ್ತಿರುವುದಕ್ಕೆ ವ್ಯಾಪಕ ಅಕ್ರೋಶ ವ್ಯಕ್ತವಾಗಿದ್ದು, ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆ ಮಾಡಿ ಅವುಗಳ ಸಂಖ್ಯೆಯನ್ನು ನಿಯಂತ್ರಣ ಮಾಡುವಂತೆ ಜನರು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ