ತುಮಕೂರಿನಲ್ಲಿ ಕ್ರೈಸ್ತ ಮಿಷನರಿಗಳ ಮತಾಂತರ ಜಾಲ ಪತ್ತೆ: ಹಿಂದೂ ದೇವರುಗಳ ಬಗ್ಗೆ ಅವಮಾನ ಆರೋಪ

ಕ್ರೈಸ್ತ ಧರ್ಮಕ್ಕೆ ಮತಾಂತರವಾದ್ರೆ ನಿಮಗೆ ಪರಲೋಕ ಪ್ರಾಪ್ತಿಯಾಗುತ್ತದೆ, ಜೀವನದಲ್ಲಿ ಸದಾ ಆತ್ಮರಕ್ಷಣೆ‌ ಹೊಂದುವಿರಿ ಅಂತಾ ಹೇಳಿ ಮತಾಂತರ ಮಾಡಲು ಯತ್ನಿಸಿದ ಮೂವರ ವಿರುದ್ಧ ತುಮಕೂರಿನಲ್ಲಿ ದೂರು ದಾಖಲಾಗಿದೆ.

ತುಮಕೂರಿನಲ್ಲಿ ಕ್ರೈಸ್ತ ಮಿಷನರಿಗಳ ಮತಾಂತರ ಜಾಲ ಪತ್ತೆ: ಹಿಂದೂ ದೇವರುಗಳ ಬಗ್ಗೆ ಅವಮಾನ ಆರೋಪ
ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ವ್ಯಕ್ತಿಗಳು
Edited By:

Updated on: Dec 19, 2022 | 8:23 AM

ತುಮಕೂರು: ಜಿಲ್ಲೆಯಲ್ಲಿ ವಿವಿಧ ಆಮಿಷಗಳನ್ನುವೊಡ್ಡಿ ಕ್ರೈಸ್ತ ಧರ್ಮ (Christianity)ಕ್ಕೆ ಮತಾಂತರ (Conversion) ಮಾಡಲು ಯತ್ನಿಸುತ್ತಿದ್ದ ಜಾಲವೊಂದು ಪತ್ತೆಯಾಗಿದೆ. ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ನಿಮಗೆ ಪರಲೋಕ ಪ್ರಾಪ್ತಿಯಾಗುತ್ತದೆ, ಗಣೇಶ ಹಬ್ಬ ಸೇರಿದಂತೆ ಹಲವು ಹಿಂದೂ ಹಬ್ಬಗಳು (Hindu Festivals) ಮೂಡನಂಬಿಕೆಯಾಗಿದೆ ಎಂದು ಮತಾಂತರಿಗಳು ಹೇಳಿ ಹಿಂದೂ ದೇವಾನು ದೇವತೆಗಳನ್ನು ಅವಮಾನಿಸಿರುವುದಾಗಿ ಆರೋಪಿಸಿ ವ್ಯಕ್ತಿಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ತುಮಕೂರಿನ ಮರಳೂರು ದಿಣ್ಣೆಯಲ್ಲಿ ಕ್ರೈಸ್ತ ಮಿಷನರಿಗಳ ಮತಾಂತರ ಜಾಲ ಪತ್ತೆಯಾಗಿದ್ದು, ಇಬ್ಬರು ಮಹಿಳೆಯರು ಹಾಗೂ ಓರ್ವ ವ್ಯಕ್ತಿಯಿಂದ ಮತಾಂತರ ಮಾಡಲು ಯತ್ನಿಸಿರುವುದಾಗಿ ಆರೋಪಿಸಲಾಗಿದೆ. ರವಿ ಎಂಬುವರ ಮನೆಗೆ ಬಂದ ಮತಾಂತರಿಗಳು ಹಿಂದೂ ದೇವರುಗಳ ಬಗ್ಗೆ ಅವಹೇಳನ ಮಾಡಿದ್ದು, ಕ್ರೈಸ್ತ ಧರ್ಮಕ್ಕೆ ಮತಾಂತರವಾದರೆ ನಿಮಗೆ ಪರಲೋಕ ಪ್ರಾಪ್ತಿಯಾಗುತ್ತದೆ ಎಂದು ಆಮಿಷವೊಡ್ಡಿದ್ದಾರೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಮತಾಂತರಗೊಂಡಿದ್ದ ಕುಟುಂಬ ಘರ್​ ವಾಪಸಿ; ಕ್ರೈಸ್ತ ಧರ್ಮದಿಂದ ಹಿಂದೂ ಧರ್ಮಕ್ಕೆ ವಾಪಸ್‌

ಅಷ್ಟೇ ಅಲ್ಲದೆ, ನಮ್ಮ ಧರ್ಮಕ್ಕೆ ಬಂದರೆ ಜೀವನದಲ್ಲಿ ಸದಾ ಆತ್ಮರಕ್ಷಣೆ‌ ಹೊಂದುವಿರಿ ಅಂತಾ ಹೇಳಿ ಮೂವರು ಮತಾಂತರಿಗಳು ಹಿಂದೂಗಳ ಮನಸ್ಸನ್ನು ಪರಿವರ್ತನೆ ಮಾಡಲು ಯತ್ನಿಸಿದ್ದಾರೆ. ಇಷ್ಟಕ್ಕೂ ಸುಮ್ಮನಾಗದ ಮತಾಂತರಿಗಳು ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಗಣೇಶ ಹಬ್ಬ ಸೇರಿದಂತೆ ಹಲವು ಹಬ್ಬಗಳು ಮೂಡನಂಬಿಕೆಯಾಗಿದೆ. ದೇವರು ಒಬ್ಬನೇ 36 ಕೋಟಿ ದೇವರುಗಳು ಇಲ್ಲ ಎಂದು ಹೇಳಿ ಮತಾಂತರಕ್ಕೆ ಯತ್ನಿಸಿದ್ದಾರೆ. ಘಟನೆ ಸಂಬಂಧ ರವಿ ಎಂಬವರು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬಜರಂಗದಳ ಕಾರ್ಯಕರ್ತರ ಕಾರ್ಯಾಚರಣೆ

ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹಿಂದೂಗಳ ಮನೆಗೆ ಹೋಗಿ ಬೈಬಲ್ ಬಗ್ಗೆ ಬೋದನೆ ಮಾಡುತ್ತಿದ್ದ ಕ್ರೈಸ್ತ ಮಿಷನರಿಗಳು ಮಾಹಿತಿ ತಿಳಿದ ಜಿಲ್ಲೆಯ ಬಜರಂಗದಳದ ಕಾರ್ಯಕರ್ತರು ಕಾರ್ಯಪ್ರವೃತ್ತರಾಗಿದ್ದಾರೆ. ರವಿ ಎಂಬುವರ ಮನೆಗೆ ಬಂದು ಮೂವರು ಯುವಕರಿಗೆ ಮತಾಂತರ ಮಾಡುವ ಪ್ರಯತ್ನಿಸಿದಾಗ ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿ ಮತಾಂತರವನ್ನು ತಡೆದಿದ್ದು, ಸದ್ಯ ಪ್ರಕರಣ ಠಾಣೆ ಮೆಟ್ಟಿಲೇರಿದೆ.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:23 am, Mon, 19 December 22