ಬೀಗರೂಟ ಸೇವಿಸಿದ್ದ 24 ಜನರು ವಾಂತಿ, ಭೇದಿಯಿಂದ ಅಸ್ವಸ್ಥ; ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ಹೇಳಿದ್ದಿಷ್ಟು

ಬೀಗರ ಊಟ ಮಾಡಿ ವಾಪಸ್‌ ತೆರಳಿದ ನಾಗೇನಹಳ್ಳಿ ತಾಂಡಾದ ಜನರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. 24 ಮಂದಿಗೆ ಕಾರ್ಯಕ್ರಮ ನಡೆದ ದಿನದಿಂದ ವಾಂತಿ, ಭೇದಿಯಾಗಿ ಅಸ್ವಸ್ಥರಾಗಿದ್ದಾರೆ. ಕಳ್ಳಬಟ್ಟಿ ಸೇವನೆಯಿಂದಲೇ ಹೀಗಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೀಗರೂಟ ಸೇವಿಸಿದ್ದ 24 ಜನರು ವಾಂತಿ, ಭೇದಿಯಿಂದ ಅಸ್ವಸ್ಥ; ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ಹೇಳಿದ್ದಿಷ್ಟು
ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಧಿಕಾರಿಗಳು
Edited By:

Updated on: Aug 21, 2024 | 8:09 AM

ತುಮಕೂರು, ಆಗಸ್ಟ್​.21: ಬೀಗರೂಟ ಸೇವಿಸಿದ್ದ 24 ಜನರು ವಾಂತಿ, ಭೇದಿಯಿಂದ ಅಸ್ವಸ್ಥಗೊಂಡಿರುವ ಘಟನೆ ತುಮಕೂರು (Tumkur) ಜಿಲ್ಲೆ ಪಾವಗಡ ತಾಲೂಕಿನ ಶ್ರೀರಂಗಪುರ ತಾಂಡಾದಲ್ಲಿ ನಡೆದಿದೆ. ಕಳ್ಳಬಟ್ಟಿ ಸೇವಿಸಿ ಈ ರೀತಿ ಆಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಅಸ್ವಸ್ಥಗೊಂಡವರು ಸ್ಥಳೀಯ ಆಸ್ಪತ್ರೆ ಹಾಗೂ ಬೆಂಗಳೂರು, ಪಾವಗಡ, ಹಿಂದೂಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಗಸ್ಟ್ 14 ಮತ್ತು 15ರಂದು ಪಾವಗಡ ತಾಲೂಕಿನ ನಾಗೇನಹಳ್ಳಿ ತಾಂಡಾದಲ್ಲಿ ಮದುವೆ ನಡೆದಿತ್ತು. ಮರು ದಿನ ಆಗಸ್ಟ್ 16ರಂದು ಶ್ರೀರಂಗಪುರ ತಾಂಡಾದಲ್ಲಿ ಬೀಗರ ಊಟ ಆಯೋಜಿಸಲಾಗಿತ್ತು. ಊಟ ಮಾಡಿ ವಾಪಸ್‌ ತೆರಳಿದ ನಾಗೇನಹಳ್ಳಿ ತಾಂಡಾದ ಜನರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದೆ. 24 ಮಂದಿಗೆ ಕಾರ್ಯಕ್ರಮ ನಡೆದ ದಿನದಿಂದ ವಾಂತಿ, ಭೇದಿಯಾಗಿ ಅಸ್ವಸ್ಥರಾಗಿದ್ದಾರೆ. ಕಳ್ಳಬಟ್ಟಿ ಸೇವನೆಯಿಂದಲೇ ಹೀಗಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಅಸ್ವಸ್ಥಗೊಂಡವರು ಹೊಟ್ಟೆ ನೋವು, ಭೇದಿಯಾಗಿ ಶುಕ್ರವಾರ ರಾತ್ರಿ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು, ಪಾವಗಡ, ಹಿಂದೂಪುರದಲ್ಲಿ ತಲಾ ಒಬ್ಬರಂತೆ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಗೇನಹಳ್ಳಿ ತಾಂಡಾಗೆ ಉಪವಿಭಾಗಧಿಕಾರಿ ತಹಶೀಲ್ದಾರ್, ಇಓ‌,‌ ಟಿಹೆಚ್​ಒ‌‌ ಸೇರಿದಂತೆ ಹಲವು‌ ಅಧಿಕಾರಿಗಳ ತಂಡ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದದೆ. ಸದ್ಯ ಕಾರ್ಯಕ್ರಮದಲ್ಲಿ ನೀಡಿದ ನೀರು, ಊಟದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಓವರ್ ಟೇಕ್ ಮಾಡಲು ಹೋಗಿ ಅಪಘಾತ, ಎದೆ ಝಲ್ ಅನಿಸುವ ಡೆಡ್ಲಿ ಆಕ್ಸಿಡೆಂಟ್ ವಿಡಿಯೋ ಇದೆ

ತಾಯತ ಕಟ್ಟುವ ವಿಚಾರಕ್ಕೆ ಮಸೀದಿಯಲ್ಲಿ ಹೊಡಿಬಡಿ

ತಾಯತ ಕಟ್ಟುವ ವಿಚಾರಕ್ಕೆ ಮಸೀದಿಯಲ್ಲಿ ಮಾರಾಮಾರಿ ನಡೆದಿದೆ. ನೆಲಮಂಗಲ ತಾಲೂಕಿನ ಆಗಲಗುಪ್ಪೆಯಲ್ಲಿ ಘಟನೆ ನಡೆದಿದೆ. ಮಸೀದಿಯಲ್ಲಿ 2 ಕುಟುಂಬಗಳು ಹೊಡೆದಾಡಿಕೊಂಡಿವೆ. ಒಂದೂವರೆ ವರ್ಷದ ಮಗು ಹಾಗೂ ಮಹಿಳೆ ಮೇಲೆ ಹಲ್ಲೆ ಮಾಡಲಾಗಿದೆ. ಮಹಿಳೆ, ಮಗು ಮೇಲೆ ಶಫೀಕ್, ಶಾವೀಸ್ & ಆಯಿಶಾ ಅಟ್ಯಾಕ್ ಮಾಡಿದ್ದು ನಮ್ಮ ಬಳಿಯೇ ತಾಯತ ಕಟ್ಟಿಸಿಕೊಳ್ಳಬೇಕೆಂದು ಹಲ್ಲೆ ನಡೆಸಿದ್ದಾರೆ. ದಾಬಸ್​ಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:08 am, Wed, 21 August 24