ತುಮಕೂರು, ಅ.3: ಕಟ್ಟಡದ ಬಾಡಿಗೆ ಕೇಳಿದ್ದಕ್ಕೆ ಥಳಿಸಿದ ಪ್ರಕರಣ ಸಂಬಂಧ ನ್ಯಾಯ ಕೊಡಿಸುವಂತೆ ಮಹಿಳೆಯೊಬ್ಬರು ಗೃಹಸಚಿವ ಪರಮೇಶ್ವರ (Dr.G.Parameshwara) ಅವರ ಬಳಿ ಕೈ ಮುಗಿದು ಅಂಗಲಾಚಿದ್ದಾರೆ. ದೂರು ದಾಖಲಾಗಿ ನಾಲ್ಕು ದಿನ ಕಳೆದರೂ ಆರೋಪಿ ಲಿಂಗರಾಜುನನ್ನ ಬಂಧಿಸದ ಕಾರಣ ಮನನೊಂದ ಹಲ್ಲೆಗೊಳಗಾದ ಮಹಿಳೆಯ ಸಹೋದರಿ ಖುದ್ದು ಗೃಹ ಸಚಿವರನ್ನೇ ಭೇಟಿಯಾಗಿ ನ್ಯಾಯ ಕೊಡಿಸುವಂತೆ ಅಳಲು ತೊಡಿಕೊಂಡಿದ್ದಾರೆ.
ತಿಪಟೂರು ಪಟ್ಟಣದಲ್ಲಿ ಶಾಹಿನ್ ತಾಜ್ ಅವರಿಗೆ ಸೇರಿದ ಕಟ್ಟಡದಲ್ಲಿ ತಿಪಟೂರು ತಾಲೂಕಿನ ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಲಿಂಗರಾಜು ಬಾಡಿಗೆಗೆ ನೆಲೆಸಿದ್ದರು. ಆದರೆ ಕಳೆದ ಎರಡೂವರೆ ವರ್ಷಗಳಿಂದ ಬಾಡಿಗೆ ಕೊಡದೆ ಸತಾಯಿಸುತ್ತಿದ್ದನು. ಹೀಗಾಗಿ ಬಾಡಿಗೆ ನೀಡುವಂತೆ ಕೇಳಲು ಹೋದ ಶಾಹಿನ್ ತಾಜ್, ಗುಜರ್ ಬಾನು ಅವರ ಮೇಲೆ ಲಿಂಗರಾಜು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದನು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಇದೇನು ಹೊಸದಾಗಿ ನಡೆಯುತ್ತಿದ್ಯಾ? ಗೃಹ ಸಚಿವ ಪರಮೇಶ್ವರ್ ಉಡಾಫೆ ಮಾತು
ಹಲ್ಲೆಗೊಳಗಾದ ಮಹಿಳೆಯು ತಿಪಟೂರು ಪೊಲೀಸ್ ಠಾಣೆಗೆ ತೆರಳಿ ಲಿಂಗರಾಜು ವಿರುದ್ಧ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಸೆ. 27 ರಂದು ನಡೆದ ಘಟನೆ ಇದಾಗಿದ್ದು, ಗಲಾಟೆ ದೃಶ್ಯ ಮೊಬೈಲ್ನಲ್ಲಿ ಸೆರೆಹಿಡಿಯಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ