ತುಮಕೂರು: ಇಂಗ್ಲಿಷ್ ಓದಲು ಕಷ್ಟವಾಗುತ್ತೆ ಎಂದು 7ನೇ ತರಗತಿ ವಿದ್ಯಾರ್ಥಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ತಾಲೂಕಿನ ಊರ್ಡಿಗೆರೆಯಲ್ಲಿ ನಡೆದಿದೆ. ಊರ್ಡಿಗೆರೆ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ವಿದ್ಯಾರ್ಥಿ ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇಂಗ್ಲಿಷ್ ಓದಲು ಕಷ್ಟವಾಗುತ್ತೆ ಶಾಲೆಗೆ ಹೋಗಲ್ಲ ಎಂದು ಬಾಲಕ ಹಠ ಮಾಡಿದ್ದ. ಶಾಲೆಗೆ ಹೋಗುವಂತೆ ಪೋಷಕರು ತಿಳಿಸಿದ್ದು, ಹೋಗುವುದಿಲ್ಲ ಎಂದು ಬಾಲಕ ಹೇಳಿದ್ದಾನೆ. ಈ ನಡುವೆ ಮನೆಯಲ್ಲಿ ಬಾಲಕ ಕುಸಿದು ಬಿದಿದ್ದು, ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಿದ್ದು, ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇದನ್ನೂ ಓದಿ: ಮುಷ್ಕರಕ್ಕೆ ಮುಂದಾದ ಸ್ಟೇಷನ್ ಮಾಸ್ಟರ್ಗಳು: ರೈಲು ಸಂಚಾರದಲ್ಲಿ ವ್ಯತ್ಯಯ ಸಾಧ್ಯತೆ
ಬಾಲಕ ತುಮಕೂರು ನಗರದ ಕೋತಿ ತೋಪು ಮೂಲದ ಸೋಮಶೇಖರ್, ಜಯಮ್ಮ ದಂಪತಿಯ ಮಗ. ಕೂಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಕೂಲಿ ಕೆಲಸ ನಿಮಿತ್ತ ಊರ್ಡಿಗೆರೆ ಗ್ರಾಮಕ್ಕೆ ಕುಟುಂಬ ವಲಸೆ ಬಂದಿದೆ. ಕೋತಿತೋಪು ಸರ್ಕಾರಿ ಶಾಲೆಯಲ್ಲಿ 6ನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿದ್ದ ಬಾಲಕ, 7ನೇ ತರಗತಿಗೆ ಊರ್ಡಿಗೆರೆಯಲ್ಲಿ ಸರ್ಪಡೆಗೊಂಡಿದ್ದ. ಕಳೆದ 16ನೇ ತಾರೀಕಿನಿಂದ ಶಾಲೆ ಶುರುವಾಗಿತ್ತು. ಒಂದೇರಡು ದಿನ ಬಾಲಕ ಶಾಲೆಗೆ ಹೋಗಿದ್ದ. ಬಳಿಕ ಶಾಲೆಗೆ ಹೋಗುವುದಿಲ್ಲ ಎಂದು ಹಠ ಮಾಡಿದ್ದ. ಶಾಲೆಗೆ ಹೋಗುವಂತೆ ಪೋಷಕರು ಬಾಲಕನಿಗೆ ಒತ್ತಾಯಿಸಿದ್ದರು. ಆದರೂ ಶಾಲೆಗೆ ಹೋಗಿರಲಿಲ್ಲ. ಸದ್ಯ ಕ್ಯಾತ್ಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ರಾಜ್ಯ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.