ಬೆಂಗಳೂರು-ಧಾರವಾಡ ವಂದೇ ಭಾರತ್​ ರೈಲು ತುಮಕೂರಲ್ಲೂ ನಿಲ್ಲುತ್ತೆ, ವೇಳಾಪಟ್ಟಿ ಇಲ್ಲಿದೆ

|

Updated on: Aug 23, 2024 | 10:20 AM

ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿರುವ ವಿ. ಸೋಮಣ್ಣ ಅವರು ಮೋದಿ ಸಂಪುಟದಲ್ಲಿ ಸಚಿವರಾಗಿದ್ದಾರೆ. ಸಚಿವ ವಿ. ಸೋಮಣ್ಣ ಅವರು ತಮ್ಮ ತಮಕೂರು ಕ್ಷೇತ್ರದ ಜನತೆಗೆ ಸಿಹಿ ಸುದ್ದಿ ನೀಡಿದ್ದಾರೆ. ಧಾರವಾಡ-ಬೆಂಗಳೂರು ವಂದೇ ಭಾರತ್​ ರೈಲು ತುಮಕೂರಲ್ಲೂ ನಿಲ್ಲುತ್ತೆ.

ಬೆಂಗಳೂರು-ಧಾರವಾಡ ವಂದೇ ಭಾರತ್​ ರೈಲು ತುಮಕೂರಲ್ಲೂ ನಿಲ್ಲುತ್ತೆ, ವೇಳಾಪಟ್ಟಿ ಇಲ್ಲಿದೆ
ವಂದೇ ಭಾರತ್​
Follow us on

ತುಮಕೂರು, ಆಗಸ್ಟ್​ 23: ನೈಋತ್ಯ ರೈಲ್ವೆ ವಲಯ (South Western Railway) ತಮಕೂರು (Tumakur) ಜನರಿಗೆ ಸಿಹಿ ಸುದ್ದಿ ನೀಡಿದೆ. ಕೆಎಸ್​ಆರ್​​ ಬೆಂಗಳೂರುನಿಂದ ಧಾರವಾಡ ಮಧ್ಯೆ ಸಂಚರಿಸುವ ವಂದೇ ಭಾರತ್​ (Vande Bharat) ರೈಲು ಇಂದಿನಿಂದ ತಮಕೂರು ನಿಲ್ದಾಣದಲ್ಲೂ ನಿಲುಗಡೆಯಾಗುತ್ತದೆ. ಈ ಕುರಿತು ಟ್ವೀಟ್​ ಮಾಡಿರುವ ನೈಋತ್ಯ ರೈಲ್ವೆ ವಲಯ, ವಂದೇ ಭಾರತ್​ ತುಮಕೂರು ರೈಲು ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ. ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ ಸೋಮಣ್ಣ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದೆ.

ವಂದೇ ಭಾರತ್‌ ರೈಲು ತುಮಕೂರಿನಲ್ಲಿ ಇಂದು ಸಂಜೆ 6.18ಕ್ಕೆ ಮೊದಲ ಸ್ಟಾಪ್‌ ನೀಡಲಿದೆ. ಆ ಬಳಿಕ ಆಗಸ್ಟ್‌ 24 ರಿಂದ ಧಾರವಾಡಕ್ಕೆ ತೆರಳುವಾಗ ಹಾಗೂ ಧಾರವಾಡದಿಂದ ಹಿಂದಿರುಗುವಾಗ ಬೆಳಗ್ಗೆ ಹಾಗೂ ಸಂಜೆ ನಿಲುಗಡೆಯಾಗಲಿದೆ.

ಇದನ್ನೂ ಓದಿ: ಕಂಟೋನ್ಮೆಂಟ್​ನ ಈ ಪ್ಲಾಟ್​ಫಾರಂಗಳಲ್ಲಿ 3 ತಿಂಗಳು ರೈಲು ನಿಲುಗಡೆ ರದ್ದು

ರೈಲಿನ ವೇಳಾಪಟ್ಟಿ

  • ರೈಲು ಸಂಖ್ಯೆ 20662 ಧಾರವಾಡ-ಕೆ.ಎಸ್.ಆರ್ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತುಮಕೂರು ನಿಲ್ದಾಣಕ್ಕೆ ಸಂಜೆ 6.18/6.20 ಘಂಟೆಗೆ ಆಗಮಿಸಿ/ನಿರ್ಗಮಿಸಲಿದೆ.
  • ರೈಲು ಸಂಖ್ಯೆ 20661 ಕೆ.ಎಸ್.ಆರ್ ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತುಮಕೂರು ನಿಲ್ದಾಣಕ್ಕೆ ಬೆಳಿಗ್ಗೆ 6:32/6:34 ಘಂಟೆಗೆ ಆಗಮಿಸಿ/ ನಿರ್ಗಮಿಸಲಿದೆ. ಉಳಿದಂತೆ ಎಲ್ಲಾ ನಿಲ್ದಾಣಗಳ ಸಮಯ ಈ ಹಿಂದಿನಂತೆ ಇರಲಿದೆ.

ತಮಕೂರು ಸಚಿವ ವಿ. ಸೋಮಣ್ಣ ಅವರ ಲೋಕಸಭಾ ಕ್ಷೇತ್ರ. ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ಸಂಸತ್ತು ಪ್ರವೇಶಿಸಿದ್ದಾರೆ. ಮೊದಲ ಬಾರಿಗೆ ಲೋಕಸಭೆಗೆ ಆಯ್ಕೆಯಾಗಿರುವ ವಿ. ಸೋಮಣ್ಣ ಅವರು ಮೋದಿ ಸಂಪುಟದಲ್ಲಿ ಸಚಿವರಾಗಿದ್ದಾರೆ. ಸಚಿವ ವಿ. ಸೋಮಣ್ಣ ಅವರು ಕ್ಷೇತ್ರದ ಜನತೆಗೆ ಸಿಹಿ ಸುದ್ದಿ ನೀಡಿದ್ದಾರೆ.

ಈ ಮೊದಲು ವಂದೇ ಭಾರತ್​ ರೈಲು ಕೆಎಸ್​ಆರ್​ ಬೆಂಗಳೂರಿನಿಂದ ಹೊರಟು ಯಶವಂತಪುರ, ದಾವಣಗೆರೆ, ಹುಬ್ಬಳ್ಳಿಯಲ್ಲಿ ನಿಂತು ಧಾರವಾಡದಲ್ಲಿ ಕೊನೆಗೊಳ್ಳುತ್ತಿತ್ತು. ಇದೀಗ ತುಮಕೂರಿನಲ್ಲೂ ನಿಲ್ಲುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:52 am, Fri, 23 August 24