ಬೆಂಗಳೂರು: ಕಂಟೋನ್ಮೆಂಟ್ನ ಈ ಪ್ಲಾಟ್ಫಾರಂಗಳಲ್ಲಿ 3 ತಿಂಗಳು ರೈಲು ನಿಲುಗಡೆ ರದ್ದು
ಬೆಂಗಳೂರಿನ ಕಂಟೋನ್ಮೆಂಟ್ (ದಂಡು) ರೈಲ್ವೆ ನಿಲ್ದಾಣದಲ್ಲಿ ದುರಸ್ತಿ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೂರು ತಿಂಗಳು (ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20)ರವರೆಗೆ ಈ ಪ್ಲಾಟ್ ಫಾರಂಗಳಲ್ಲಿ ಯಾವುದೇ ರೈಲು ನಿಲ್ಲುವುದಿಲ್ಲ. ಯಾವ ಯಾವ ರೈಲು ನಿಲ್ಲುವುದಿಲ್ಲ, ಇಲ್ಲಿದೆ ಮಾಹಿತಿ.
ಬೆಂಗಳೂರು, ಆಗಸ್ಟ್ 23: ಬೆಂಗಳೂರು ಕಂಟೋನ್ಮೆಂಟ್ (ದಂಡು) (Bengaluru Cantonment Railway Station) ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂ ನಂಬರ್ 1 ಮತ್ತು 2ರಲ್ಲಿ ಸೆಪ್ಟೆಂಬರ್ 20 ರಿಂದ ಡಿಸೆಂಬರ್ 20ರವರೆಗೆ ದುರಸ್ತಿ ಕಾರ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೂರು ತಿಂಗಳು ಪ್ಲಾಟ್ ಫಾರಂ ನಂಬರ್ 1 ಮತ್ತು 2ರಲ್ಲಿ ರೈಲುಗಳು ನಿಲ್ಲುವುದಿಲ್ಲ ಎಂದು ನೈಋತ್ಯ ರೈಲ್ವೆ ವಲಯ (South Western Railway) ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ನಿಲುಗಡೆ ರದ್ದಾದ ರೈಲುಗಳು
ಪ್ರತಿದಿನ ಸಂಚರಿಸುವ ಮೈಸೂರು- ಎಸ್‌ಎಂವಿಟಿ ಬೆಂಗಳೂರು ರೈಲು (06269) ಸೆ.19ರಿಂದ ಡಿ.19ರವರೆಗೆ ನಿಲುಗಡೆ ರದ್ದುಪಡಿಸಲಾಗಿದೆ. ವಾರಕ್ಕೊಮ್ಮೆ ಸಂಚರಿಸುವ ಮೈಸೂರು-ರೇಣಿಗುಂಟ (22135) ರೈಲು ನಿಲ್ಲುಗಡೆ ರದ್ದುಪಡಿಸಲಾಗಿದೆ.
ವಾರದ ಆರು ದಿನ ಮಾತ್ರ ಸಂಚರಿಸುವ ಸಂಚರಿಸುವ ಕೆಎಸ್‌ಆರ್ ಬೆಂಗಳೂರು – ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ರೈಲು, ಕೆಎಸ್‌ಆರ್-ಬೆಂಗಳೂರು ರೈಲು ನಿಲುಗಡೆ ರದ್ದು ಮಾಡಲಾಗಿದೆ.
ಕೆಎಸ್‌ಆರ್ ಬೆಂಗಳೂರು-ಎರ್ನಾಕುಲಂ ರೈಲು (12677), ಕೆಎಸ್‌ಆರ್ ಬೆಂಗಳೂರು – ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ (12608), ಮುರುಡೇಶ್ವರ- ಎಸ್‌ಎಂವಿಟಿ ಬೆಂಗಳೂರು (16586), ಕೆಎಸ್‌ಆರ್ ಬೆಂಗಳೂರು- ಮಾರಿಕುಪ್ಪಂ (06396), ಕೆಎಸ್‌ಆರ್ ಬೆಂಗಳೂರು- ಶ್ರೀ ಸತ್ಯಸಾಯಿ ಪ್ರಶಾಂತಿನಿಲಯಂ (06515), ಮೈಸೂರು-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ (06515), ಕೆಎಸ್‌ಆರ್ ಬೆಂಗಳೂರು- ಭುವನೇಶ್ವರ (18464) ರೈಲು ಸೆ.20ರಿಂದ ಡಿ.20ರವರೆಗೆ ನಿಲುಗಡೆ ರದ್ದಾಗಿದೆ.
ಇದನ್ನೂ ಓದಿ: 15 ದಿನಗಳವರೆಗೆ ಯಶವಂತಪುರ ರೈಲು ನಿಲ್ದಾಣದ ಈ ಪ್ಲಾಟ್ಫಾರಂಗಳು ಕ್ಲೋಸ್, ರೈಲು ಸಂಚಾರ ರದ್ದು
ಕೆಎಸ್‌ಆರ್ ಬೆಂಗಳೂರು – ಜೋಳಪಟ್ಟಿ (06551), ಕೆಎಸ್‌ಆರ್ ಬೆಂಗಳೂರು – ವೈಟ್‌ಫೀಲ್ಡ್ (01765), ಕೆಎಸ್‌ಆರ್ ಬೆಂಗಳೂರು – ಬಂಗಾರಪೇಟೆ (06561/06389), ಕೆಎಸ್‌ಆರ್ ಬೆಂಗಳೂರು – ಕುಪ್ಪಂ (06529) ಬೆಂಗಳೂರು – ಮಾರಿಕುಪ್ಪಂ (01775) ರೈಲು ನಿಲುಗಡೆ ರದ್ದು ಮಾಡಲಾಗಿದೆ.
ವಾರಕ್ಕೆ ಎರಡು ಬಾರಿ ಸಂಚರಿಸುವ ಮೈಸೂರು-ಜೈಪುರ (12975) ರೈಲು ಸೆ.21 ರಿಂದ ಡಿ.19ರ ವರಗೆ ಮಾತ್ರ ನಿಲ್ಲುವುದಿಲ್ಲ. ಮೈಸೂರು- ಕೂಚುವೇಲಿ (16315), ಮೈಸೂರು- ಕಾಚಿಗುಡ (12786), ಕೆಎಸ್‌ಆರ್ ಬೆಂಗಳೂರು- ಧರ್ಮಪುರಿ, ಕೆಎಸ್‌ಆರ್ ಬೆಂಗಳೂರು- ನವದೆಹಲಿ (12627), ಕೆಎಸ್‌ಆರ್ ಬೆಂಗಳೂರು- ಸಿಎಸ್‌ಎಂಟಿ ಮುಂಬೈ (1302), ಬೆಂಗಳೂರು ದೇಬ್ ನಾಂದೇಡ್ (16593) ಸೆ.20 ರಿಂದ ಡಿ.20 ನಿಲುಗಡೆ ರದ್ದುಗೊಳಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:36 am, Fri, 23 August 24