AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

15 ದಿನಗಳವರೆಗೆ ಯಶವಂತಪುರ ರೈಲು ನಿಲ್ದಾಣದ ಈ ಪ್ಲಾಟ್​ಫಾರಂಗಳು ಕ್ಲೋಸ್​​, ರೈಲು ಸಂಚಾರ ರದ್ದು

ಯಶವಂತಪುರ ರೈಲು ನಿಲ್ದಾಣದ ಪುನರಾಭಿವೃದ್ಧಿ ಕಾಮಗಾರಿ ಭರದಿಂದ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ರೈಲು ನಿಲ್ದಾಣದ ಪ್ಲಾಟ್​ಫಾರಂಗಳಲ್ಲಿ ಏರ್​-ಕಾನ್ಕೋರ್ಸ್ ಅಳವಡಿಕೆ ಕಾಮಗಾರಿ ಆರಂಭವಾಗಲಿದೆ. ಈ ಸಂಬಂಧ ನಿಲ್ದಾಣದ ಈ ಪ್ಲಾಟ್​ಫಾರಂಗಳನ್ನು 15 ದಿನಗಳವರೆಗೆ ಬಂದ್​ ಮಾಡಲಾಗಿದೆ. ಕೆಲ ರೈಲು ಸಂಚಾರ ರದ್ದು ಮಾಡಲಾಗಿದೆ.

15 ದಿನಗಳವರೆಗೆ ಯಶವಂತಪುರ ರೈಲು ನಿಲ್ದಾಣದ ಈ ಪ್ಲಾಟ್​ಫಾರಂಗಳು ಕ್ಲೋಸ್​​, ರೈಲು ಸಂಚಾರ ರದ್ದು
ಯಶವಂತಪುರ ರೈಲು ನಿಲ್ದಾಣ
ವಿವೇಕ ಬಿರಾದಾರ
|

Updated on: Aug 20, 2024 | 8:27 AM

Share

ಬೆಂಗಳೂರು, ಆಗಸ್ಟ್​ 20: ಯಶವಂತಪುರ ರೈಲು ನಿಲ್ದಾಣದ (Yeshavantpur railway station) ಪ್ಲಾಟ್​ಫಾರಂಗಳಲ್ಲಿ ಏರ್​-ಕಾನ್ಕೋರ್ಸ್ ಅಳವಡಿಕೆ ಕಾಮಗಾರಿ ಆರಂಭವಾಗಲಿದೆ. ಹೀಗಾಗಿ ನಿಲ್ದಾಣದ 2, 3, 4, 5 ಪ್ಲಾಟ್​ಫಾರಂಗಳನ್ನು 15 ದಿನಗಳ ಕಾಲ ಬಂದ್​ ಮಾಡಲಾಗುತ್ತದೆ. ಹಾಗೆ ಕೆಲ ರೈಲುಗಳ ಸಂಚಾರವನ್ನು ಬಂದ್​ ಮಾಡಲಾಗಿದೆ.

ಆಗಸ್ಟ್​ 21 ರಿಂದ ಸೆಪ್ಟೆಂಬರ್​​ 4ರ ವರೆಗೆ 2 ಮತ್ತು 3ನೇ ಪ್ಲಾಟ್​ಫಾರಂ ಬಂದ್​ ಆಗಲಿದೆ. ನಂತರ ಸೆಪ್ಟೆಂಬರ್​ 5 ರಿಂದ 19ರ ವರೆಗೆ 4 ಮತ್ತು 5ನೇ ಪ್ಲಾಟ್​ಫಾರಂ ಕ್ಲೋಸ್​ ಆಗಲಿದೆ ಎಂದು ನೈಋತ್ಯ ರೈಲ್ವೆ ವಲಯ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ರೈಲು ರದ್ದು ವಿವರ ಈ ಕೆಳಗಿನಂತಿದೆ.

ರೈಲು ರದ್ದು

06576 ತುಮಕೂರು-ಕೆಎಸ್ಆರ್ ಬೆಂಗಳೂರು ಮತ್ತು 06575 ಕೆಎಸ್ಆರ್ ಬೆಂಗಳೂರು-ತುಮಕೂರು ರೈಲು ಆಗಸ್ಟ್​​ 21 ರಿಂದ 31 ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ರದ್ದುಪಡಿಸಲಾಗಿದೆ.

ಭಾಗಶಃ ರದ್ದು

ರೈಲು ಸಂಖ್ಯೆ 06574, 06580 ತುಮಕೂರು-ಯಶವಂತಪುರ ರೈಲು ಆಗಸ್ಟ್​​ 21 ರಿಂದ 31 ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ಚಿಕ್ಕಬಾಣಾವರ-ಯಶವಂತಪುರ ನಡುವೆ ಭಾಗಶಃ ರದ್ದಾಗಲಿದೆ. ರೈಲು ಸಂಖ್ಯೆ 06591, 06592 ಯಶವಂತಪುರ-ಹೊಸೂರು ಮಧ್ಯೆ, ಸಂಚರಿಸುವ ರೈಲು ಆಗಸ್ಟ್​​ 21 ರಿಂದ 31 ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ಯಶವಂತಪುರ-ಹೆಬ್ಬಾಳ ನಡುವೆ ಭಾಗಶಃ ರದ್ದಾಗಲಿದೆ.

ರೈಲು ಸಂಖ್ಯೆ 06593, 06594 ಯಶವಂತಪುರ-ಚಿಕ್ಕಬಳ್ಳಾಪುರ ರೈಲು ಸಂಚಾರ ಆಗಸ್ಟ್​​ 21 ರಿಂದ 31 ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ಯಶವಂತಪುರ-ಯಲಹಂಕ ನಡುವೆ ಭಾಗಶಃ ರದ್ದಾಗಲಿದೆ.

ಇದನ್ನೂ ಓದಿ: ನಮ್ಮ ಮೆಟ್ರೋ ರೈಲು ಸೇವೆಯಲ್ಲಿ ವ್ಯತ್ಯಯ: ಈ ದಿನಗಳಂದು ಸಂಪೂರ್ಣ ಸ್ಥಗಿತ

ಯಶವಂತಪುರ-ಹೊಸೂರು (06393, 06393) ರೈಲು ಆಗಸ್ಟ್​​ 21 ರಿಂದ 31 ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ಯಶವಂತಪುರ-ಹೆಬ್ಬಾಳ ನಡುವೆ ಭಾಗಶಃ ಸಂಚರಿಸುವುದಿಲ್ಲ. ಯಶವಂತಪುರ-ತುಮಕೂರು (06573) ರೈಲು ಆಗಸ್ಟ್​​ 21 ರಿಂದ 31 ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ಯಶವಂತಪುರ-ಚಿಕ್ಕಬಾಣಾವರ ನಡುವೆ ಭಾಗಶಃ ರದ್ದಾಗಲಿದೆ.

ಚಿಕ್ಕಮಗಳೂರು-ಯಶವಂತಪುರ (16239, 16240) ರೈಲು ಆಗಸ್ಟ್​​ 21 ರಿಂದ 31 ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ಚಿಕ್ಕಬಾಣಾವರ-ಯಶವಂತಪುರ ನಡುವೆ ಭಾಗಶಃ ಸಂಚರಿಸುವುದಿಲ್ಲ. ಮೈಸೂರು-ಯಶವಂತಪುರ (16207, 16208) ಆಗಸ್ಟ್​​ 21 ರಿಂದ 31 ಮತ್ತು ಸೆಪ್ಟೆಂಬರ್​​ 1 ರಿಂದ 19ರವರೆಗೆ ಚಿಕ್ಕಬಾಣಾವರ-ಯಶವಂತಪುರ ನಡುವೆ ಭಾಗಶಃ ರದ್ದಾಗಲಿದೆ.

ಮಾರ್ಗ ಬದಲಾವಣೆ

ರೈಲು ಸಂಖ್ಯೆ 22697 ಎಸ್‌ಎಸ್‌ಎಸ್ ಹುಬ್ಬಳ್ಳಿ-ಡಾ ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು, ಆಗಸ್ಟ್ 24 ಮತ್ತು 31, 2024 ಮತ್ತು ಸೆಪ್ಟೆಂಬರ್ 7 ಮತ್ತು 14 ರಂದು ಹುಬ್ಬಳ್ಳಿ, ಅರಸೀಕೆರೆ, ಚಿಕ್ಕಬಾಣಾವರ, ಯಶವಂತಪುರ ‘ಎ’ ಕ್ಯಾಬಿನ್, ಲೊಟ್ಟೆಗೊಲ್ಲಹಳ್ಳಿ, ಲೊಟ್ಟೆಗೊಲ್ಲಹಳ್ಳಿ ಮೂಲಕ ಸಂಚರಿಸುತ್ತದೆ. SMVT ಬೆಂಗಳೂರು ಮತ್ತು ಕೃಷ್ಣರಾಜಪುರಂ ನಿಲ್ದಾಣಗಳಲ್ಲೂ ರೈಲು ನಿಲ್ಲುತ್ತದೆ.

ರೈಲು ಸಂಖ್ಯೆ 06511 ಬಾಣಸವಾಡಿ-ತುಮಕೂರು ಎಕ್ಸ್‌ಪ್ರೆಸ್ ವಿಶೇಷ ರೈಲು, ಆಗಸ್ಟ್ 21 ರಿಂದ ಸೆಪ್ಟೆಂಬರ್ 19ರವರೆಗೆ ಬಾಣಸವಾಡಿ, ಯಶವಂತಪುರ ‘ಎ’ ಕ್ಯಾಬಿನ್, ಚಿಕ್ಕಬಾಣಾವರ ಮತ್ತು ತುಮಕೂರು ನಿಲ್ದಾಣಗಳ ಮೂಲಕ ಸಂಚರಿಸುತ್ತದೆ.

ರೈಲು ಸಂಖ್ಯೆ. 11311, 11312 ಸೋಲಾಪುರ-ಹಾಸನ ಎಕ್ಸ್‌ಪ್ರೆಸ್ ರೈಲು, ಆಗಸ್ಟ್ 20 ರಿಂದ ಸೆಪ್ಟೆಂಬರ್ 18ರವರೆಗೆ ಯಲಹಂಕ, ಯಶವಂತಪುರ ‘ಎ’ ಕ್ಯಾಬಿನ್ ಮತ್ತು ಚಿಕ್ಕಬಾಣಾವರ ನಿಲ್ದಾಣಗಳ ಮೂಲಕ ಸಂಚರಿಸುತ್ತದೆ. ಮಾರ್ಗ ಬದಲಾವಣೆಯ ಎಲ್ಲ ರೈಲುಗಳು ಯಶವಂತಪುರ ನಿಲ್ದಾಣದಲ್ಲಿ ನಿಲ್ಲುವುದಿಲ್ಲ.

ರೈಲುಗಳ ನಿಯಂತ್ರಣ:

ರೈಲು ನಂ.16546 ಸಿಂಧನೂರು-ಯಶವಂತಪುರ ಎಕ್ಸ್‌ಪ್ರೆಸ್, ಆಗಸ್ಟ್ 20 ರಿಂದ ಸೆಪ್ಟೆಂಬರ್ 18, ರವರೆಗೆ ಸಿಂಧನೂರು ನಿಲ್ದಾಣದಿಂದ 90 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

ರೈಲು ಸಂಖ್ಯೆ.06545 ಯಶವಂತಪುರ-ವಿಜಯಪುರ ಎಕ್ಸ್‌ಪ್ರೆಸ್ ವಿಶೇಷ ರೈಲು, ಆಗಸ್ಟ್ 21 ರಿಂದ ಸೆಪ್ಟೆಂಬರ್ 19ರವರೆಗೆ ಯಶವಂತಪುರ ನಿಲ್ದಾಣದಿಂದ 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?