AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಲಿಕಾನ್ ಸಿಟಿಗೆ ಇದೆಂಥಾ ಗತಿ! 21 ಗಂಟೆಯಿಂದ ಬೆಂಗಳೂರಿನ ಕೆಲ ಏರಿಯಾಗಳಲ್ಲಿ ವಿದ್ಯುತ್ ಇಲ್ಲ

ಐಟಿಬಿಟಿ ಸಿಟಿ ಬೆಂಗಳೂರಿನಲ್ಲಿ ಸರಿಯಾದ ರಸ್ತೆಗಳು ಇಲ್ಲ. ಒಂದು ದೊಡ್ಡ ಮಳೆಯಾದರೆ ಸಾಕು ರಸ್ತೆಗಳೆಲ್ಲ ಕೆರೆಗಳಂತೆ ಕಾಣುತ್ತವೆ. ಈ ನಡುವೆ ವಿದ್ಯುತ್ ಸ್ಥಗಿತದಿಂದ ನಿವಾಸಿಗಳು ತೀವ್ರ ಪರದಾಡಿರುವಂತಹ ಘಟನೆ ನಾಗರಬಾವಿಯ ವಿನಾಯಕ ಲೇಔಟ್​ನಲ್ಲಿ ನಡೆದಿದೆ. ಸತತ 21 ಗಂಟೆಯಿಂದ ವಿದ್ಯುತ್ ಇಲ್ಲದೆ ಕತ್ತಲಲ್ಲಿ ನಿವಾಸಿಗಳು ಪರದಾಡಿದ್ದಾರೆ.

ಸಿಲಿಕಾನ್ ಸಿಟಿಗೆ ಇದೆಂಥಾ ಗತಿ! 21 ಗಂಟೆಯಿಂದ ಬೆಂಗಳೂರಿನ ಕೆಲ ಏರಿಯಾಗಳಲ್ಲಿ ವಿದ್ಯುತ್ ಇಲ್ಲ
ಸಿಲಿಕಾನ್ ಸಿಟಿಗೆ ಇದೆಂಥಾ ಗತಿ! 20 ಗಂಟೆಯಿಂದ ಬೆಂಗಳೂರಿನ ಕೆಲ ಏರಿಯಾಗಳಲ್ಲಿ ವಿದ್ಯುತ್ ಇಲ್ಲ
Shivaraj
| Edited By: |

Updated on: Aug 22, 2024 | 10:40 PM

Share

ಬೆಂಗಳೂರು, ಆಗಸ್ಟ್​ 22: ಬ್ರ್ಯಾಂಡ್​ ಬೆಂಗಳೂರು ಮಾಡುತ್ತೇವೆ ಅಂತೆಲ್ಲಾ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿಕೊಂಡು ಓಡಾಡುತ್ತಿದ್ದಾರೆ. ಆದರೆ ಸಿಲಿಕಾನ್ ಸಿಟಿ ಬೆಂಗಳೂರು ಅವ್ಯವಸ್ಥೆಯ ಆಗರವಾಗಿದೆ. ಎಲ್ಲಿ ನೋಡಿದರೂ ರಸ್ತೆಯಲ್ಲಿ ಗುಂಡಿಗಳು, ಕಸದ ಗುಡ್ಡೆ, ಸರಿಯಾಗಿ ಫುಟ್​ಬಾತ್ ಇಲ್ಲ. ಹೀಗೆ ನಾನಾ ಸಮಸ್ಯೆಗಳು ಇವೆ. ಇದರ ಮಧ್ಯೆ ಬೆಂಗಳೂರಿನಂತಹ ಮಾಯಾನಗರಿಯ ಒಂದು ಪ್ರದೇಶದಲ್ಲಿ ಕಳೆದ 21 ಗಂಟೆಯಿಂದ ವಿದ್ಯುತ್ (Power) ಇಲ್ಲದೆ ಸಾರ್ವಜನಿಕರು ಪರದಾಡಿರುವಂತಹ ಘಟನೆ ನಡೆದಿದೆ.

ಸತತ 21 ಗಂಟೆಯಿಂದ ವಿದ್ಯುತ್ ಇಲ್ಲದೆ ಕತ್ತಲಲ್ಲಿ ನಿವಾಸಿಗಳು ಪರದಾಟ

ನಾಗರಬಾವಿಯ ವಿನಾಯಕ ಲೇಔಟ್ ಸುತ್ತಮುತ್ತ ನಿನ್ನೆ ರಾತ್ರಿಯಿಂದ ವಿದ್ಯುತ್ ಸ್ಥಗಿತವಾಗಿದ್ದು, ನಿವಾಸಿಗಳು ತೀವ್ರ ಪರದಾಡಿದ್ದಾರೆ. ಸತತ 21 ಗಂಟೆಯಿಂದ ವಿದ್ಯುತ್ ಇಲ್ಲದೆ ಕತ್ತಲಲ್ಲಿ ನಿವಾಸಿಗಳು ಪರದಾಡಿದ್ದಾರೆ.

ಇದನ್ನೂ ಓದಿ: ರಾಜಧಾನಿ ಬೆಂಗಳೂರು ರಸ್ತೆಗಳಲ್ಲಿ ಗುಂಡಿ ಗಂಡಾಂತರ: ಎಚ್ಚರ ತಪ್ಪಿದ್ರೆ ಅಪಾಯ ಗ್ಯಾರಂಟಿ

ಸೂಚನೆ ಇಲ್ಲದೆ ವಿದ್ಯುತ್ ಸ್ಥಗಿತದಿಂದ ನಿವಾಸಿಗಳು ಕಂಗಾಲಾಗಿದ್ದು, ಪ್ರಶ್ನಿಸಿದರೆ ಲೈನ್ ದುರಸ್ತಿ ಕಾರ್ಯದ ನೆಪ ಹೇಳುತ್ತಿದ್ದಾರೆ ಬೆಸ್ಕಾಂ ಅಧಿಕಾರಿಗಳು. ಹೀಗಾಗಿ ಸದ್ಯ ಅಧಿಕಾರಿಗಳ ಈ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐಟಿಬಿಟಿ ಸಿಟಿ ಬೆಂಗಳೂರಿನಲ್ಲಿ ಸರಿಯಾದ ರಸ್ತೆಗಳು ಇಲ್ಲ. ಒಂದು ದೊಡ್ಡ ಮಳೆಯಾದರೆ ಸಾಕು ರಸ್ತೆಗಳೆಲ್ಲ ಕೆರೆಗಳಂತೆ ಕಾಣುತ್ತವೆ. ಈ ನಡುವೆ ವಿದ್ಯುತ್ ಸ್ಥಗಿತದಿಂದ ಜನರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಮೂಲ ಸೌಕರ್ಯದ ಕೊರತೆ ಎದ್ದು ಕಾಣುತ್ತಿದೆ. ವಿದ್ಯುತ್ ಸ್ಥಗಿತದ ಬಗ್ಗೆ ಮುನ್ಸೂಚನೆ ನೀಡಿಲ್ಲವೆಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ವೈರಲ್ ಇನ್ಫೆಕ್ಷನ್​ ಎಫೆಕ್ಟ್: ಆಸ್ಪತ್ರೆಗೆ ಭೇಟಿ ನೀಡುವವರ ಸಂಖ್ಯೆ ದುಪ್ಪಟ್ಟು!

ವಿದ್ಯುತ್ ಮೂಲಸೌಕರ್ಯ ನವೀಕರಣ, ಟ್ರಾನ್ಸ್‌ಫಾರ್ಮರ್ ರಿಪೇರಿ ಮತ್ತು ನಿರ್ವಹಣೆ ಕೆಲಸಗಳು ಹಿನ್ನೆಲೆ ಇಂದು ಬೆಂಗಳೂರಿನಲ್ಲಿ ಹಲವೆಡೆ ವಿದ್ಯುತ್ ವ್ಯತ್ಯ ಉಂಟಾಗಲಿದೆ ಎಂದು ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ ಲಿಮಿಟೆಡ್ (ಬೆಸ್ಕಾಂ) ತಿಳಿಸಿತ್ತು.

ಹೆಚ್​ಬಿಆರ್ ಸುತ್ತಮುತ್ತ ಇಂದು ಬೆಳಗ್ಗೆ 10.30 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಹಾಗೂ ರೆಸಿಡೆನ್ಸಿ ರಸ್ತೆ ಸುತ್ತಮುತ್ತ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ. ಹೆಚ್‌ಬಿಆರ್ ಲೇಔಟ್, ಫಣಿಸಂದ್ರ ಸುತ್ತಮುತ್ತ ಹಾಗೂ ರೆಸಿಡೆನ್ಸಿ ರಸ್ತೆ, ಲ್ಯಾವೆಲ್ಲೆ ರಸ್ತೆ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೇಳಲಾಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ಕೃಷಿ ಅಧಿಕಾರಿ ಬಳಿ 2.50 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ!
ಕೃಷಿ ಅಧಿಕಾರಿ ಬಳಿ 2.50 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ!
ಬಾಲರಾಮನ ವಿಗ್ರಹವನ್ನು ರಾಮ ಮಂದಿರಕ್ಕೆ ದಾನ ಮಾಡಿದ ಕರ್ನಾಟಕದ ಭಕ್ತ
ಬಾಲರಾಮನ ವಿಗ್ರಹವನ್ನು ರಾಮ ಮಂದಿರಕ್ಕೆ ದಾನ ಮಾಡಿದ ಕರ್ನಾಟಕದ ಭಕ್ತ