ರಾಜಧಾನಿ ಬೆಂಗಳೂರು ರಸ್ತೆಗಳಲ್ಲಿ ಗುಂಡಿ ಗಂಡಾಂತರ: ಎಚ್ಚರ ತಪ್ಪಿದ್ರೆ ಅಪಾಯ ಗ್ಯಾರಂಟಿ

ರಸ್ತೆಗಳ ಗುಂಡಿ ಮುಚುತ್ತೇವೆ ಅನ್ನೋ ಪಾಲಿಕೆ, ಬರೀ ಮಾತಿನಲ್ಲಿ ಮಾತ್ರ ಗುಂಡಿ ಮುಚ್ಚಿದೆಯಾ ಅನ್ನೋ ಅನುಮಾನ ಮೂಡಿಸುತ್ತಿದೆ. ಬೆಂಗಳೂರಿನ ರಸ್ತೆ ರಸ್ತೆಯಲ್ಲೂ ಗುಂಡಿಗಳು ರಾರಾಜಿಸ್ತಿದ್ದು, ವಾಹನ ಸವಾರರಿಗೆ ಸಂಕಷ್ಟ ತಂದಿಟ್ಟಿರುವ ಗುಂಡಿಗಳು ಸಿಟಿಜನರ ಸಂಚಾರಕ್ಕೆ ಸಂಚಕಾರ ತಂದಿಡುತ್ತಿವೆ. ಕಳಪೆ ಕಾಮಗಾರಿ ಆರೋಪ ಕೂಡ ಕೇಳಿ ಬಂದಿದೆ.

ರಾಜಧಾನಿ ಬೆಂಗಳೂರು ರಸ್ತೆಗಳಲ್ಲಿ ಗುಂಡಿ ಗಂಡಾಂತರ: ಎಚ್ಚರ ತಪ್ಪಿದ್ರೆ ಅಪಾಯ ಗ್ಯಾರಂಟಿ
ರಾಜಧಾನಿ ಬೆಂಗಳೂರು ರಸ್ತೆಗಳಲ್ಲಿ ಗುಂಡಿ ಗಂಡಾಂತರ, ಎಚ್ಚರ ತಪ್ಪಿದ್ರೆ ಅಪಾಯ ಗ್ಯಾರಂಟಿ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Aug 22, 2024 | 9:48 PM

ಬೆಂಗಳೂರು, ಆಗಸ್ಟ್​ 22: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಳೆಗಾಲ ಹಿನ್ನಲೆ ರಸ್ತೆ ಡಾಂಬರು ಕಿತ್ತಿ ಬರುತ್ತಿದೆ. ನಗರದಲ್ಲಿ ಎಲ್ಲೆಂದರಲ್ಲಿ ಗುಂಡಿಗಳು (potholes) ಕಾಣಿಸಿಕೊಳ್ಳುತ್ತಿವೆ. ರಸ್ತೆ ಗುಂಡಿ ಕುರಿತಂತೆ ಟಿವಿ9 ನಿರಂತರ ವರದಿ ಮೂಲಕ ಎಚ್ಚರಿಸಿದರು ಕೂಡ ಪಾಲಿಕೆ (bbmp) ಎಚ್ಚೆತ್ತುಕೊಂಡಿಲ್ಲ. ಅತ್ತ ಒಂದು ವರ್ಷದ ಹಿಂದಷ್ಟೇ ಮಾಡಿದ ರಸ್ತೆಯಲ್ಲಿ ಎಲ್ಲೆಂದರಲ್ಲಿ ಗುಂಡಿಗಳು ಕಾಣಿಸಿಕೊಳ್ತಿದ್ದು, ಕಳಪೆ ಕಾಮಗಾರಿ ಆರೋಪ ಕೂಡ ಕೇಳಿ ಬಂದಿದೆ.

ಗುಂಡಿಗಳಿಂದ ವಾಹನ ಸವಾರರು ಹೈರಾಣು: ಸಾರ್ವಜನಿಕರು ಆಕ್ರೋಶ

ಸುಮ್ಮನಹಳ್ಳಿಯಿಂದ ಸುಂಕದಕಟ್ಟೆ ಕಡೆ ಸಂಪರ್ಕ ಕಲ್ಪಿಸುವ ಮಾಗಡಿ ಮುಖ್ಯ ರಸ್ತೆಯಲ್ಲಿ ಗುಂಡಿಗಳದ್ದೆ ಕಾರುಬಾರಾಗಿದೆ. ಇನ್ನೊಂದೆಡೆ ಸುಂಕದಕಟ್ಟೆಯಿಂದ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿಗಳಿಂದ ವಾಹನ ಸವಾರರು ಹೈರಾಣಾಗುತ್ತಿದ್ದಾರೆ. ಪ್ರತಿನಿತ್ಯ ಒಂದಿಲ್ಲೊಂದು ಅಪಘಾತ ಹಾಗೂ ಟ್ರಾಫಿಕ್‌ಗೆ ಕಾರಣವಾಗುತ್ತಿವೆ. ಪಾಲಿಕೆಯವರು ಕೇವಲ ಮುಖ್ಯವಾದ ರಸ್ತೆ ಗುಂಡಿ ಮಾತ್ರ ಮುಚ್ಚಿ ಹೋಗ್ತಾರೆ. ಈ ರಸ್ತೆಯಲ್ಲಿ ಗುಂಡಿಗಳನ್ನ ಮುಚ್ಚಲು ಮುಂದಾಗುತ್ತಿಲ್ಲ ಅಂತ ಪಾಲಿಕೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ವೈರಲ್ ಇನ್ಫೆಕ್ಷನ್​ ಎಫೆಕ್ಟ್: ಆಸ್ಪತ್ರೆಗೆ ಭೇಟಿ ನೀಡುವವರ ಸಂಖ್ಯೆ ದುಪ್ಪಟ್ಟು!

ಇನ್ನೂ ಸುಕಂದಕಟ್ಟೆಯ ವಿಘ್ನೇಶ್ವರ ನಗರ 3ನೇ ಮುಖ್ಯ ರಸ್ತೆಯನ್ನ ಕಳೆದ ಒಂದು ವರ್ಷದ ಹಿಂದಷ್ಟೇ ನಿರ್ಮಾಣ ಮಾಡಲಾಗಿದೆ. ಆದರೆ ಈ ಮಳೆಗಾಲಕ್ಕೆ ಸಂಪೂರ್ಣವಾಗಿ ರಸ್ತೆ ಕಿತ್ತು ಬಂದು ಜಲ್ಲಿ ಕಲ್ಲಿನಿಂದ ರಸ್ತೆ ಕೂಡಿದರೆ ಹೆಜ್ಜೆ ಹೆಜ್ಜೆಗೂ ಗುಂಡಿಗಳಿವೆ. ಹೀಗಾಗಿ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್ ಆಗುತ್ತೆ. ಒಂದು ವರ್ಷದ ಹಿಂದೆ ಮಾಡಿದ ರಸ್ತೆ ಕಾಮಗಾರಿ ಕಳಪೆ ಅಂತ ಸ್ಥಳೀಯರು ಆರೋಪ ಮಾಡುತ್ತಿದ್ದು, ಕೂಡಲೇ ಪಾಲಿಕೆ ಅಧಿಕಾರಿಗಳು ರಸ್ತೆ ನಿರ್ಮಾಣ ಮಾಡಿ ಸಾರ್ವಜನಿಕರ ಓಡಾಟಕ್ಕೆ ಅನಕೂಲ ಮಾಡಿಕೊಡುವಂತೆ ಆಗ್ರಹಿಸುತ್ತಿದ್ದಾರೆ.

ಇನ್ನು ಈ ರಸ್ತೆ ಮೆಜೆಸ್ಟಿಕ್, ಮಲ್ಲೇಶ್ವರ, ಓಕಳೀಪುರಂ ಸೇರಿದಂತೆ ಅಕ್ಕಪಕ್ಕದ ರಸ್ತೆಗಳಿಗೆ ಕನೆಕ್ಟ್ ಆಗೋದರಿಂದ ಸಾಕಷ್ಟು ವಾಹನ ಸಂಚಾರ ಮಾಡುತ್ತೆ. ರಾತ್ರಿ ವೇಳೆ ಗುಂಡಿಗಳು ಕಾಣದೇ ಹಲವು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ರು, ಪಾಲಿಕೆ ಮಾತ್ರ ಗುಂಡಿ ಮುಚ್ಚದೇ ಸೈಲೆಂಟ್ ಆಗಿದೆ. ಗುಂಡಿಯಿಂದ ಟ್ರಾಫಿಕ್ ಸಮಸ್ಯೆ ಕೂಡ ಎದುರಾಗ್ತಿದ್ದು, ಪಾಲಿಕೆ ವಿರುದ್ಧ ಜನರು ಅಸಮಾಧಾನ ಹೊರಹಾಕ್ತಿದ್ದಾರೆ.

ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್​: 3ನೇ ಹಂತದ ಮೆಟ್ರೋಗೆ ಜಿಯೋ ಟೆಕ್ನಿಕಲ್ ಸರ್ವೆಗೆ ಮುಂದಾದ BMRC

ಬ್ರ್ಯಾಂಡ್ ಬೆಂಗಳೂರು ಮಾಡ್ತೀವಿ ಅನ್ನೋ ಸರ್ಕಾರ, ಅತ್ತ ಗುಂಡಿ ಮುಕ್ತ ರಸ್ತೆ ಕೊಡ್ತೀವೆ ಅನ್ನೋ ಪಾಲಿಕೆಯ ಮಾತುಗಳನ್ನ ಕೇಳಿ ಸುಸ್ತಾದ ಸಿಟಿ ಮಂದಿ, ಕಿತ್ತೋದ ರಸ್ತೆಯಲ್ಲೇ ತೆವಲಿಕೊಂಡು, ಸರ್ಕಸ್ ಮಾಡಿಕೊಂಡು ಸಂಚಾರ ಮಾಡ್ತಿದ್ದಾರೆ. ಗುಂಡಿಗಳನ್ನ ಮುಚ್ಚಿ ಉತ್ತಮ ರಸ್ತೆ ಮಾಡ್ತೀವೆ ಅನ್ನೊ ಪಾಲಿಕೆ, ಇನ್ನಾದ್ರೂ ರಾಜಧಾನಿಯ ರಸ್ತೆಗಳ ಸ್ಥಿತಿಗತಿ ಮೇಲೆ ಗಮನಹರಿಸಿ ಸಾರ್ವಜನಿಕರ ಓಡಾಟಕ್ಕೆ ಅನಕೂಲ ಮಾಡಿಕೊಡಬೇಕಿದೆ.

ರಾಜದ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.